Legislative Party Meeting ಮತಾಂತರ ನಿಷೇಧ, ಬಿಟ್‌ಕಾಯಿನ್ ಹೋರಾಟಕ್ಕೆ ಕಾಂಗ್ರೆಸ್ ನಿರ್ಧಾರ, ಸರ್ಕಾರಕ್ಕೆ ತಲೆನೋವು!

By Kannadaprabha News  |  First Published Dec 22, 2021, 5:00 AM IST
  • ಮತಾಂತರ ನಿಷೇಧ ವಿಧೇಯಕ ವಿರುದ್ಧ ಕಾಂಗ್ರೆಸ್‌ ಉಗ್ರ ಹೋರಾಟ
  • ಸದನ ಒಳಗೆ, ಹೊರಗೆ ಹೋರಾಟ-ಸಿಎಲ್‌ಪಿ ನಿರ್ಧಾರ
  • ಅಧಿವೇಶನದಲ್ಲಿ ಉ.ಕ. ನಿರ್ಲಕ್ಷ್ಯದ ಬಗ್ಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಚರ್ಚೆ

ಬೆಳಗಾವಿ(ಡಿ.22):  ಮತಾಂತರ ನಿಷೇಧ ವಿಧೇಯಕದ(Karnataka Anti Conversion Bill) ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ತೀವ್ರವಾಗಿ ವಿರೋಧಿಸಲು ಮಂಗಳವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ(Congress Legislative Party Meeting) ನಿರ್ಧರಿಸಲಾಯಿತು. ಇದೇ ವೇಳೆ ಬುಧವಾರ ಹಾಗೂ ಗುರುವಾರ ನಡೆಯಲಿರುವ ಉತ್ತರ ಕರ್ನಾಟಕ ಅಭಿವೃದ್ಧಿ(North Karnataka Development) ಕುರಿತ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ರಾಜ್ಯ ಸರ್ಕಾರವು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಹಿಸಿರುವ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಜತೆಗೆ ಉತ್ತರ-ಕರ್ನಾಟಕ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚಿಸಲು ಅನುವಾಗುವಂತೆ ಅಧಿವೇಶನವನ್ನು ಒಂದು ವಾರ ವಿಸ್ತರಿಸಬೇಕು ಎಂದು ಸದನದಲ್ಲೂ ಧ್ವನಿ ಎತ್ತಲು ನಿರ್ಧರಿಸಲಾಯಿತು.

ಮಂಗಳವಾರ ಬೆಳಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(siddaramaiah) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೊರೋನಾ ನೆಪ ನೀಡಿ ಕಳೆದ ಎರಡು ವರ್ಷದಿಂದ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಿಲ್ಲ. ಜತೆಗೆ ಮಹದಾಯಿ(Mahadayi) ಹಾಗೂ ಭದ್ರಾ ಮೇಲ್ದಂಡೆ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಸರ್ಕಾರ ಬಂದರೆ ಒಂದೇ ತಿಂಗಳಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಬಿಜೆಪಿ ಪಕ್ಷ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದು ಇಷ್ಟುವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಬೇಕು ಎಂದು ತೀರ್ಮಾನಿಸಲಾಯಿತು.

Tap to resize

Latest Videos

Belagavi Assembly Session ಉ.ಕ. ಸಮಸ್ಯೆಗಳ ಚರ್ಚೆ, ಎಲ್ಲಾ ಬಾಕಿ ಯೋಜನೆ ಕೈಗೆತ್ತಿಕೊಳ್ಳಲು ಪಕ್ಷಾತೀತವಾಗಿ ಸದಸ್ಯರ ಆಗ್ರಹ!

ಜತೆಗೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಘೋಷಿಸಿರುವ ಅನುದಾನ ಹಾಗೂ ನೀಡಿರುವ ಅನುದಾನದ ಅಂಕಿ-ಅಂಶ ಮುಂದಿಟ್ಟುಕೊಂಡು ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಬೇಕು ಎಂದು ಚರ್ಚಿಸಲಾಯಿತು.

40 ಪರ್ಸೆಂಟ್‌ ಕಮಿಷನ್‌, ಬಿಟ್‌ ಕಾಯಿನ್‌ ಬಗ್ಗೆ ಚರ್ಚೆ:
ಅಧಿವೇಶನದ ಆರಂಭದಲ್ಲೇ ಪ್ರಸ್ತಾಪಿಸಲು ಸಜ್ಜಾಗಿದ್ದ 40 ಪರ್ಸೆಂಟ್‌ ಕಮಿಷನ್‌ ವಿಚಾರ ಹಾಗೂ ಬಿಟ್‌ಕಾಯಿನ್‌ ವಿಚಾರದ ಬಗ್ಗೆಯೂ ಮಂಗಳವಾರದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ ಉತ್ತರ ಕರ್ನಾಟಕ ಚರ್ಚೆ ಹಾಗೂ ಮತಾಂತರ ನಿಷೇಧ ಕಾಯಿದೆ ನಡುವೆ ಈ ವಿಚಾರಗಳನ್ನು ಪ್ರಸ್ತಾಪಿಸಿದರೆ ವಿಷಯಾಂತರವಾಗುತ್ತದೆ. ಹೀಗಾಗಿ ಅವಕಾಶ ಸಿಕ್ಕರೆ ಮಾತ್ರ ಪ್ರಸ್ತಾಪಿಸಬೇಕು ಎಂದು ಕಾದು ನೋಡುವ ತಂತ್ರ ಅನುಸರಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿ ಹಲವರು ಹಾಜರಿದ್ದರು.

Anti Conversion Bill : 'ಸಿಎಂ ಬೊಮ್ಮಾಯಿ ಹೇಗೂ ಹೋಗುತ್ತಿದ್ದಾರೆ : ಒಳ್ಳೇದು ಮಾಡಿ ಹೋಗಲಿ'

ರಾಜ್ಯದಲ್ಲಿ ಒತ್ತಾಯ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕನಿಷ್ಠ 3 ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021’ ಅನ್ನು ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು

ವಿಪಕ್ಷಗಳ ಆಕ್ಷೇಪ:
ಕಾರ್ಯ ಕಲಾಪ ಪಟ್ಟಿಪ್ರಸ್ತಾಪಿಸದೆ ಏಕಾಏಕಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡನೆ ಮಾಡಿದ್ದಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆದರೂ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸರ್ಕಾರ ವಿಧೇಯಕ ಮಂಡನೆಯಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಕೆಲ ಸದಸ್ಯರು ವಿಧೇಯಕ ಪ್ರತಿ ಹರಿದು ಹಾಕಿದರು. ಇದೇ ವೇಳೆ ವಿಧೇಯಕ ಮಂಡನೆ ವಿರೋಧಿಸಿ ಸಭಾತ್ಯಾಗ ಮಾಡಿದರು.

ಮಂಗಳವಾರ ಮಧ್ಯಾಹ್ನ ನೆರೆ ಹಾವಳಿ ಕುರಿತು ಕಂದಾಯ ಸಚಿವ ಆರ್‌.ಅಶೋಕ್‌ ಅವರು ಉತ್ತರ ನೀಡುವುದನ್ನು ತಡೆದ ಸಭಾಧ್ಯಕ್ಷರು, ಹೆಚ್ಚುವರಿ ಅಜೆಂಡಾ ಮೂಲಕ ವಿಧೇಯಕ ಮಂಡನೆಗೆ ಸರ್ಕಾರ ಅನುಮತಿ ಕೇಳಿದೆ. ಇದರಂತೆ ಅವಕಾಶ ಕಲ್ಪಿಸಲಾಗುತ್ತಿದೆ ಎನ್ನುತ್ತಿದ್ದಂತೆ, ಕಾಂಗ್ರೆಸ್‌ ಸದಸ್ಯರು ಆಗಮಿಸುವ ಮೊದಲೇ ಆರಗ ಜ್ಞಾನೇಂದ್ರ ಅವರು ಪರ್ಯಾಲೋಚನೆಗೆ ಮಂಡಿಸಿ ಧ್ವನಿಮತದ ಮೂಲಕ ಅನುಮೋದನೆ ಪಡೆದರು.

click me!