ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: 12 ದಿನ ಈರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ!

By Ravi Janekal  |  First Published Aug 8, 2024, 9:45 AM IST

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಇಂದಿನಿಂದ (ಆಗಸ್ಟ್ 8) 19ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿರುವ ಹಿನ್ನೆಲೆ ಸುಗಮ ಸಂಚಾರಕ್ಕಾಗಿ ಲಾಲ್‌ಬಾಗ್ ಸುತ್ತಮುತ್ತ 12 ದಿನಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.


ಬೆಂಗಳೂರು (ಆ.8): ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಇಂದಿನಿಂದ (ಆಗಸ್ಟ್ 8) 19ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿರುವ ಹಿನ್ನೆಲೆ ಸುಗಮ ಸಂಚಾರಕ್ಕಾಗಿ ಲಾಲ್‌ಬಾಗ್ ಸುತ್ತಮುತ್ತ 12 ದಿನಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

ಈ ಬಾರಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವ ಸಾರ್ವಜನಿಕರಿಗಾಗಿ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು, ಭದ್ರತೆ, ಆನ್‌ಲೈನ್ ಟಿಕೆಟ್ ವ್ಯವಸ್ಥೆ ಎಲ್ಲ ರೀತಿಯಲ್ಲೂ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಈ ಬಾರಿ ಸುಮಾರು 8-10 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು ಈ ಹಿನ್ನೆಲೆ ಲಾಲ್‌ಬಾಗ್ ಸುತ್ತಮುತ್ತ ವಾಹನ, ಜನದಟ್ಟಣೆ ಹೆಚ್ಚಳವಾಗಲಿದೆ. ಹೀಗಾಗಿ ಕೆಲವು ಸಂಚಾರ ಮಾರ್ಗ ಬದಲಾವಣೆ ಮಾಡಿರುವ ಪೊಲೀಸರು. ಹಾಗಾದರೆ ಯಾವ್ಯಾವ ಮಾರ್ಗದಲ್ಲಿ ಬದಲಾವಣೆಯಾಗಿದೆ ಇಲ್ಲಿದೆ ಸಂಪೂರ್ಣ ವಿವರ.

Tap to resize

Latest Videos

ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ಹೂಗಳಲ್ಲಿ ಅನಾವರಣಗೊಳ್ಳಲಿದೆ ಅಂಬೇಡ್ಕರ್ ಜೀವನಗಾಥೆ!

ಡಾ। ಮರೀಗೌಡ ರಸ್ತೆ, ಲಾಲ್ ಬಾಗ್ ರಸ್ತೆ, ಕೆ.ಎಚ್.ರಸ್ತೆ, ವಿಲ್ಸನ್ ಗಾರ್ಡನ್ ಸಂಚಾರ ಠಾಣಾ ವ್ಯಾಪ್ತಿ ಸುತ್ತಮುತ್ತಲು ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸುಗಮ ಸಂಚಾರಕ್ಕೆ ಅನುವಾಗಲು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೂ ಏರ್ಪಾಡು ಮಾಡಲಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಬಿಎಂಟಿಸಿ ಬಸ್‌ಗಳು, ಮೆಟ್ರೋ ರೈಲು, ಕ್ಯಾಬ್‌ಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿರುವ ಸಂಚಾರಿ ಪೊಲೀಸರು.

ಈ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ:

  • ಡಾ| ಮರಿಗೌಡ ರಸ್ತೆ, ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆ ಬದಿ.
  • ಕೆ.ಎಚ್.ರಸ್ತೆ, ಕೆ.ಎಚ್.ವೃತ್ತ ದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿ 
  • ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರದ ವರೆಗೆ
  • ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್‌ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ ವರೆಗೆ 
  • ಬಿಟಿಎಸ್ ಬಸ್ ಸ್ಟಾಪ್ ಬಿಎಂಟಿಸಿ ಜಂಕ್ಷನ್ ನಿಂದ ರಸ್ತೆಯ ಎರಡೂ ಬದಿ
  • ಲಾಲ್‌ಬಾಗ್ ವೆಸ್ಟ್‌ ಗೇಟ್ ನಿಂದ ಆರ್.ವಿ. ಟೀಚರ್ಸ್ ಕಾಲೇಜ್, ಆಶೋಕ ಪಿಲ್ಲರ್ ವರೆಗೆ ವಾಹನ ನಿಲ್ಲಿಸುವಂತಿಲ್ಲ

ಬಿಜೆಪಿ-ಜೆಡಿಎಸ್ ನನ್ನ ಟಾರ್ಗೆಟ್ ಮಾಡಿವೆ; ಅವರ ಎಲ್ಲ ಹಗರಣ ಸಮಾವೇಶದಲ್ಲಿ ಬಿಚ್ಚಿಡುತ್ತೇನೆ: ಸಿಎಂ

ವಾಹನ ನಿಲುಗಡೆಗೆ ಸ್ಥಳಗಳು

  • ಡಾ| ಮರೀಗೌಡ ರಸ್ತೆ, ಅಲ್ ಅಮೀನ್ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ
  • ಕೆ.ಎಚ್.ರಸ್ತೆ, ಶಾಂತಿನಗರದ ಬಿಎಂಟಿಸಿ ಬಸ್‌ ನಿಲ್ದಾಣದ ಕಟ್ಟಡದಲ್ಲಿ ನಾಲ್ಕು ಚಕ್ರದ ವಾಹನ ನಿಲುಗಡೆ 
  • ಡಾ| ಮರೀಗೌಡ ರಸ್ತೆ ಹಾಪ್ ಕಾಮ್ಸ್‌ನಲ್ಲಿ ದ್ವಿ ಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನ ನಿಲುಗಡೆ 
  • ಜೆ.ಸಿ.ರಸ್ತೆಯ ಕಾರ್ಪೊರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ ವಾಹನ ಹಾಗೂ 4 ಚಕ್ರದ ವಾಹನ ನಿಲುಗಡೆ ಅವಕಾಶ
click me!