
ಬೆಳಗಾವಿ (ಫೆ.14): ಒಂದು ತಿಂಗಳ ಹಿಂದೆ ನಡೆದ ಅಪಘಾತದಲ್ಲಿ ಬಹಳಷ್ಟು ತೊಂದರೆಯಾಗಿತ್ತು. ಆದರೆ ಗುರುಹಿರಿಯರ ಆಶೀರ್ವಾದದಿಂದ ಚೇತರಿಸಿಕೊಂಡಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಜನ್ಮದಿನ ನಿಮಿತ್ತ ಇಂದು ಬೆಳಗಾವಿಯ ಗೃಹಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದಸಚಿವೆ ಹೆಬ್ಬಾಳ್ಕರ್, ಇನ್ನೂ ಎರಡು ವಾರ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ ನಾನು ಜನರ ಮಧ್ಯ ಇರುವವಳು. ಸಾರ್ವಜನಿಕ ಜೀವನದಲ್ಲಿದ್ದ ನನಗೆ ನಾಲ್ಕು ಗೋಡೆಗಳ ಮಧ್ಯೆ ಸಮಯ ಕಳೆಯುವುದ ಕಷ್ಟಕರವಾಗಿತ್ತು ಎಂದರು
ಜನರ ಸೇವೆ ಮಾಡಲು ಭಗವಂತನ ಆಶೀರ್ವಾದ:
ಅಪಘಾತದ ಬಳಿಕ ತುಂಬಾ ತೊಂದರೆ ಅನುಭವಿಸಿದೆ ಅದ್ಯಾಗೂ ಕ್ಷೇತ್ರದ ಜನರು, ಗುರುಹಿರಿಯರ ಅಶೀರ್ವಾದವೇ ನನ್ನನ್ನು ಬೇಗ ಚೇತರಿಸಿಕೊಳ್ಳುವಂತೆ ಮಾಡಿದೆ. ಕ್ಷೇತ್ರದ ಜನರ ಮನೆಮಗಳ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಮುಂದೆಯೂ ಜನರ ಸೇವೆ ಮಾಡಲು ನನಗೆ ಭಗವಂತ ಆಶೀರ್ವಾದಿಸಿದ್ದಾನೆ ಎಂದರು.
ಇದನ್ನೂ ಓದಿ: Belagavi farmer protest: ಶಿರಸಂಗಿ ಗ್ರಾಮದ ಬಳಿ ರಸ್ತೆ ತಡೆದು ರೈತರಿಂದ ಬೃಹತ್ ಪ್ರತಿಭಟನೆ | Suvarna News
ಮೈಕ್ರೋ ಫೈನಾನ್ಸ್ ಕಿರುಕುಳ 6 ತಿಂಗಳ ಹಿಂದೆನೇ ಗೊತ್ತಿತ್ತು:
ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವೆ, ಈ ವಿಷಯ ನನಗೆ ಆರು ತಿಂಗಳ ಹಿಂದೆಯೇ ಆ ಬಗ್ಗೆ ಗೊತ್ತಾಯ್ತು. ಅನೇಕ ಮಹಿಳೆಯರು ಸಂಪರ್ಕದಲ್ಲಿರೋದ್ರಿಂದ ನನಗೆ ಮಾಹಿತಿ ಬಂದಿತ್ತು. ಅಂದೇ ನಾನು ನಗರ ಪೊಲೀಸ್ ಆಯುಕ್ತ, ಡಿಸಿ ಅವರಿಗೆ ಈ ಬಗ್ಗೆ ವಿಚಾರಿಸಿದ್ದೆ. ನನ್ನ ಕ್ಷೇತ್ರದಲ್ಲಿ ಕಾಲು ಹಾಕಿದ್ರೆ ಬಿಡಲ್ಲ ಎಂದು ಫೈನಾನ್ಸ್ ಸಿಬ್ಬಂದಿಗೆ ಬುದ್ದಿ ಹೇಳಿದ್ದೆ. ಅಲ್ಲಿವರೆಗೆ ಅನೇಕ ಮಹಿಳೆಯರು ಸಾಲ ಪಡೆದಿದ್ದರು. ಕ್ಷೇತ್ರದ ಜನರನ್ನು ನೋಡಲು, ಭೇಟಿ ಆಗಲು ಆಗಿಲ್ಲ, ಆದರೆ ಫೋನ್ ಮೂಲಕ ಸಂಪರ್ಕದಲ್ಲಿದ್ದೇನೆ. ಇನ್ನೂ ಎರಡು ವಾರ ಬೆಡ್ ರೆಸ್ಟ್ ಹೇಳಿದ್ದಾರೆ. ಬಳಿಕ ಪರಿಪೂರ್ಣವಾಗಿ ಸಾರ್ವಜನಿಕ ಜೀವನಕ್ಕೆ ಮರಳುತ್ತೇನೆ ಎಂದರು. ಎರಡು ವಾರಗಳ ಬಳಿಕ ಜನಸೇವೆಗೆ ಸಂಪೂರ್ಣವಾಗಿ ಬರಲಿದ್ದೇನೆ ಎಂದರು.
ಇದನ್ನೂ ಓದಿ: ಬೆಳಗಾವಿಗೆ ಮುಗಿಯದ ಕುಂಭಮೇಳ ಶೋಕ; ಕಾಲ್ತುಳಿತದಲ್ಲಿ ನಾಲ್ವರ ಬಳಿಕ, ಅಪಘಾತಕ್ಕೆ ಮತ್ತೆ ನಾಲ್ವರು ಬಲಿ!
ಶೀಘ್ರದಲ್ಲಿ ಗೃಹಲಕ್ಷ್ಮಿ ಹಣ:
ಗೃಹಲಕ್ಷ್ಮಿ ಹಣ ತಾಲೂಕು ಪಂಚಾಯ್ತಿಗೆ ನಮ್ಮ ಇಲಾಖೆ ಹಣ ಬರೋದ್ರಿಂದ ವಿಳಂಬ ಆಗಿದೆ. ನಮ್ಮ ಇಲಾಖೆಗೆ ಹಣ ಬಂದು 15 ದಿನ ಆಗಿದೆ. ಮುಂದಿನ ತಿಂಗಳು ಎಲ್ಲ ಸರಿಯಾಗಲಿದೆ. ಎಲ್ಲರಿಗೂ ಗೃಹಲಕ್ಷ್ಮಿ ತಲುಪಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ