ನಮ್ಮ ಹೆಮ್ಮೆಯ ಕವಿ ಕುವೆಂಪು ಅವರ ಎಲ್ಲಾ ಕೃತಿಗಳು ಇದೀಗ ಡಿಜಿಟಲ್ ಆವೃತ್ತಿಯಲ್ಲಿ ಲಭ್ಯವಿದೆ.
ಬೆಂಗಳೂರು (ನ.03): ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಗದ್ಯ ಮತ್ತು ಕಾವ್ಯ ಸಂಪುಟಗಳು ಸೇರಿದಂತೆ ಒಟ್ಟು 12 ಸಂಪುಟಗಳ ಡಿಜಿಟಲ್ ಆವೃತ್ತಿಗಳು ಓದುಗರಿಗೆ ಆನ್‌ಲೈನ್‌ನಲ್ಲಿ ದೊರೆಯುತ್ತಿವೆ.
ಹಂಪಿ ವಿವಿಯ ಕನ್ನಡ ವಿಭಾಗದ ಪ್ರೊ.ಕೆ.ಸಿ.ಶಿವಾರೆಡ್ಡಿ ಈ ಸಂಪುಟಗಳನ್ನು ಸಂಪಾದಿಸಿದ್ದು, ವಿವಿಯ ಬೆಂಗಳೂರು ಕೇಂದ್ರದಲ್ಲಿ ಈ ಕೃತಿಗಳು ಲಭ್ಯ ಇವೆ. ರಾಜ್ಯೋತ್ಸವ ಪ್ರಯುಕ್ತ ಮುದ್ರಿತ ಕೃತಿಗಳಿಗೆ ಶೇ.50ರಷ್ಟುರಿಯಾಯಿತಿ ನೀಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಖರೀದಿಸಲು ಗೂಗಲ್ ಪ್ಲೇಬುಕ್‌ಗೆ ಹೋಗಿ ಕುವೆಂಪು ಬುಕ್ಸ್ ಎಂದು ಟೈಪ್ ಮಾಡಿದರೆ 12 ಸಂಪುಟಗಳು ತೆರೆದುಕೊಳ್ಳುತ್ತವೆ.
ಪ್ರವಾಹದಲ್ಲಿ ಪುಸ್ತಕಗಳನ್ನು ಕಳೆದುಕೊಂಡಿದ್ದ ವಿದ್ಯಾರ್ಥಿಗಳನ್ನ ಕರೆಯಿಸಿ ನೆರವು ನೀಡಿದ ಸಿಎಂ ...
ಆಸಕ್ತರು ಖರೀದಿಗೂ ಮುನ್ನ ಅಷ್ಟೂಸಂಪುಟಗಳ ಶೇ.20ರಷ್ಟುಭಾಗವನ್ನು ಆನ್‌ಲೈನ್‌ನಲ್ಲಿಯೇ ಓದಬಹುದು. ಉಳಿದ ಭಾಗವನ್ನು ಓದಬೇಕಾದರೆ ಪುಸ್ತಕಗಳನ್ನು ಖರೀದಿ ಮಾಡಬೇಕಾಗುತ್ತದೆ. ಕುವೆಂಪು ಸಮಗ್ರ ಕಾವ್ಯ ಸಂಪುಟ 1- 3 ಹಾಗೂ ಕುವೆಂಪು ಸಮಗ್ರ ನಾಟಕ ಮತ್ತು ಕುವೆಂಪು ಸಮಗ್ರ ಗದ್ಯ ಸಂಪುಟ 1-8 ಕೃತಿಗಳು ಡಿಜಿಟಲ್ ಆವೃತ್ತಿಯಲ್ಲಿ ಲಭ್ಯವಿದೆ. ರಾಜ್ಯೋತ್ಸವದ ದಿನದಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್ 12 ಸಂಪುಟಗಳ ಡಿಜಿಟಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿದರು.