ರಾಜ್ಯದ ಜನತೆಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಹಾಗಾದ್ರೆ ಆ ಗುಡ್ ನ್ಯೂಸ್ ಏನು..?
ಮೈಸೂರು (ನ.03): ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ವತಿಯಿಂದ ಈ ಬಾರಿ ಕರ್ನಾಟಕದ ಭಕ್ತರು ಹಾಗೂ ಪ್ರವಾಸಿಗರಿಗಾಗಿ ತೀರ್ಥಯಾತ್ರೆ ಎಂಬ 6 ರಾತ್ರಿ/ 7 ಹಗಲಿನ ಒಂದು ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು ಆಯೋಜಿಸಿದೆ.
ಈ ವಿಶೇಷ ಪ್ರವಾಸಿ ರೈಲು ನ.26 ರಂದು ಬೆಂಗಳೂರಿನ ವೈಟ್ ಫೀಲ್ಡ್ ರೈಲು ನಿಲ್ದಾಣದಿಂದ ಹೊರಡಲಿದ್ದು, ಪುರಿ- ಕೋನಾರ್ಕ- ಕೊಲ್ಕತ್ತಾ, ದೇವಸ್ಥಾನ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ . 6615 ಇರಲಿದೆ. ಈ ವಿಶೇಷ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ರೈಲು ಪ್ರಯಾಣ, ರಾತ್ರಿ ಉಳಿಯಲು ಅಥವಾ ಫ್ರೆಶ್ ಆಗಲು ಧರ್ಮಶಾಲಾ/ ಹಾಲ್/ ಡಾರ್ಮಿಟೋರೀಸ್ ವ್ಯವಸ್ಥೆ ಬಹು ಹಂಚಿಕೆ ಆಧಾರದ ಮೇಲೆ ನೀಡಲಾಗುವದು. ಅಲ್ಲದೆ ಬೆಳಗಿನ ಟೀ, ಕಾಫಿ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಜೊತೆಗೆ ದಿನಕ್ಕೆ ಒಂದು ಲೀಟರ್ ಕುಡಿವ ನೀರಿನ ಬಾಟಲ್ ನೀಡಲಾಗುವದು.
ರೈಲಿನಲ್ಲಿ ಮಹಿಳಾ ಪ್ರಯಾಣಿಕರ ನೆರವಿಗೆ ಬಂದಿದೆ 'ಮೇರಿ ಸಹೇಲಿ' ...
ಪ್ರವಾಸಿ ವ್ಯವಸ್ಥಾಪಕರು ಮತ್ತು ಭದ್ರತೆ ಸಿಬ್ಬಂದಿ ವ್ಯವಸ್ಥೆ ಮಾಡಲಿದ್ದು, 55 ಸೀಟರ್ ಸಾಮಾನ್ಯ ಬಸ್‌ಗಳಲ್ಲಿ ಸ್ಥಳೀಯ ಸ್ಥಳಗಳ ವೀಕ್ಷಣೆ ಮಾಡಬಹುದಾಗಿದೆ. ಈ ಪ್ರವಾಸಕ್ಕಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು ಎಲ್‌ಟಿಸಿ ಸೌಲಭ್ಯ ಕೂಡ ಪಡೆಯಬಹುದು. ಈ ಪ್ರವಾಸಕ್ಕಾಗಿ ಬುಕ್ಕಿಂಗ್ ಪ್ರಾರಂಭವಾಗಿದ್ದು, ಐಆರ್‌ಸಿಟಿಸಿ ಕೌಂಟರ್‌ಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಮೈಸೂರು ರೈಲು ನಿಲ್ದಾಣ ಮೊ. 85959 31294 ಸಂಪರ್ಕಿಸುವಂತೆ ಐಆರ್‌ಸಿಟಿಸಿ ಪ್ರಾದೇಶಿಕ ವ್ಯವಸ್ಥಾಪಕರು ತಿಳಿಸಿದ್ದಾರೆ.