
ತುಮಕೂರು (ಜು.10): ಕುಣಿಗಲ್‌ನ ಶಾಸಕ ಡಾ.ರಂಗನಾಥ್ ತನ್ನ ಕ್ಷೇತ್ರದ ಮತದಾರನಿಗೆ ಮೂಳೆ ಆಪರೇಷನ್ ಮಾಡಿದ್ದಾರೆ. ಕುಣಿಗಲ್ ತಾಲೂಕಿನ ಅಮೃತೂರು ಬಳಿಯ ದೊಡ್ಡಕಲ್ಲಹಳ್ಳಿ ಗ್ರಾಮದ ಪರಮೇಶ್ ಅವರಿಗೆ ಬೈಕ್ ಅಪಘಾತದಲ್ಲಿ ಮೂಳೆ ಮುರಿದಿತ್ತು. ಹಣದ ಕೊರತೆ ಹಿನ್ನಲೆಯಿಂದ ಪರಮೇಶ್ ಚಿಕಿತ್ಸೆ ಪಡೆಯಲಾಗಿರಲಿಲ್ಲ. ಈ ಹಿನ್ನೆಲೆ ಅವರು ಶಾಸಕರನ್ನು ಭೇಟಿಯಾಗಿದ್ದರು. ಕೂಡಲೇ ಶಾಸಕರು ಪರಮೇಶ್‌ರನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ರಂಗನಾಥ್ ಅವರು ಸ್ವತಃ ತಾವೇ ಮುಂದೆ ನಿಂತು ಭುಜದ ಮೂಳೆ ಆಪರೇಷನ್ ಮಾಡಿದ್ದಾರೆ.
ಹುತ್ರಿದುರ್ಗ ಬೆಟ್ಟದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ: ಹುತ್ರಿ ದುರ್ಗವನ್ನು ಆಳಿ ಅಭಿವೃದ್ಧಿಪಡಿಸಿದ ಹಾಗೂ ಕುಣಿಗಲ್ ಬೆಳವಣಿಗೆಗೆ ಕಾರಣರಾದ ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಕುಣಿಗಲ್ ಶಾಸಕ ಡಾ. ರಂಗನಾಥ ತಿಳಿಸಿದ್ದಾರೆ. ಕುಣಿಗಲ್ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಕೆಂಪೇಗೌಡರು ಹೋರಾಟ ಮನೋಭಾವದ ವ್ಯಕ್ತಿ ಆಗಿದ್ದರು. ಜನಪರ ಕಾಳಜಿ ಹಾಗೂ ಪ್ರತಿಯೊಬ್ಬರಲ್ಲೂ ಇದ್ದಂಥ ವಿಶ್ವಾಸ ಹಾಗೂ ಅವರ ಆಡಳಿತ ವೈಖರಿಯಿಂದ 500 ವರ್ಷ ಕಳೆದರೂ ಅವರನ್ನು ನಾವು ದೇವರಂತೆ ಪೂಜಿಸುತ್ತಾ ಬಂದಿದ್ದೇವೆ. ಅವರ ನಿಜವಾದ ತತ್ವ- ಸಿದ್ಧಾಂತಗಳು ಇಂದಿಗೂ ಕೂಡ ಜೀವಂತವಾಗಿವೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬೆಂಗಳೂರನ್ನು ಅಂದು ನಿರ್ಮಾಣ ಮಾಡಲು ಅವರಲ್ಲಿದ್ದ ದೂರ ದೃಷ್ಟಿ ಹಾಗೂ ಬೃಹದಾಕಾರದ ಯೋಜನೆಗಳ ಅನುಷ್ಠಾನದ ಫಲವಾಗಿ ಎಲ್ಲಾ ಕೋಮಿನವರಿಗೂ, ಧರ್ಮದವರಿಗೂ, ಕುಶಲಕರ್ಮಿಗಳಿಗೂ ಪ್ರತ್ಯೇಕವಾದ ವ್ಯವಸ್ಥೆಯನ್ನು ಮತ್ತು ಮೂಲಭೂತ ಸೌಕರ್ಯವನ್ನು ಕಲ್ಪಿಸಿದ ಮಹಾಪುರುಷ ಕೆಂಪೇಗೌಡ ಎಂದರು. ಮನುಷ್ಯ ಸಾಧನೆ ಮಾಡುವುದಾದರೆ ಕೆಂಪೇಗೌಡರ ರೀತಿ ಸಾಧನೆ ಮಾಡಬೇಕು. ಅಂತಹ ಒಳ್ಳೆಯ ಕೆಲಸಗಳನ್ನು ಚಿಕ್ಕದು ದೊಡ್ಡದು ಎಂಬ ಭೇದಭಾವ ಇಲ್ಲದೆ ಸಾರ್ವಜನಿಕರ ಜೊತೆಯಲ್ಲಿ ಮಾಡಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ಇಂದು ಬೆಂಗಳೂರು ಕೆಂಪೇಗೌಡ, ಕುಣಿಗಲ್ ಕೆಂಪೇಗೌಡ, ಮಾಗಡಿ ಕೆಂಪೇಗೌಡ ಎಂಬ ಹಲವಾರು ನಾಮಗಳಿಂದ ಗುರುತಿಸಬಹುದು. ಆದರೆ ಕೆಂಪೇಗೌಡನ ವಂಶಸ್ಥರು ಮಾಡಿದ ಸಾಧನೆಯು ಕಟ್ಟಿದ ಕೋಟೆ, ನೀರಾವರಿ ವ್ಯವಸ್ಥೆ, ಚಟುವಟಿಕೆ ಎಲ್ಲವೂ ಕೂಡ ಇಂದಿನ ರಾಜಕಾರಣಿಗಳಿಗೆ ಮಾದರಿ ಆಗುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರೆ ಶಂಕರ ಮಠದ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ, ಕೆಂಪೇಗೌಡರು ತನ್ನ ಆಡಳಿತ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದು, ಕುಣಿಗಲ್ ಭಾಗದ ಜನ ಅವರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ