ಭಾಷಿ ಅಲ್ಲ, ಬದ್‌್ಕ! ಕುಂದಾಪುರದ ವಿಶಿಷ್ಟಭಾಷಾ ಕಲರವ, ಸಾಂಸ್ಕೃತಿಕ ಸೊಗಡು, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ.. ಹೀಗೆ ಇವೆಲ್ಲವೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂದಿನ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿ ಮೇಳೈಸಲಿದೆ.
ಬೆಂಗಳೂರು (ಜು.23) ಭಾಷಿ ಅಲ್ಲ, ಬದ್‌್ಕ! ಕುಂದಾಪುರದ ವಿಶಿಷ್ಟಭಾಷಾ ಕಲರವ, ಸಾಂಸ್ಕೃತಿಕ ಸೊಗಡು, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ.. ಹೀಗೆ ಇವೆಲ್ಲವೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂದಿನ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿ ಮೇಳೈಸಲಿದೆ.
ರಾಜ್ಯದಲ್ಲಿ ವಿಶೇಷ, ವಿಭಿನ್ನ ಪ್ರಾದೇಶಿಕ ಸಂಸ್ಕೃತಿಯನ್ನು ಹೊತ್ತಿರುವ ಕುಂದಾಪುರದ ಕಂಪು ಇಂದು ರಾಜಧಾನಿಯಲ್ಲಿ ಹರಡಲಿದೆ. ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನ(Bangalore Kundapra Kannada Foundation)ವು ನಗರದಲ್ಲಿ ನೆಲೆಸಿರುವ ಲಕ್ಷಾಂತರ ಕುಂದಗನ್ನಡಿಗರನ್ನು ಈ ಕಾರ್ಯಕ್ರಮದ ಮೂಲಕ ಒಂದೇ ಸೂರಿನಡಿ ಕರೆತರುತ್ತಿದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯಲಿರುವ ಹಬ್ಬವು ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸಡಗರದ ವೇದಿಕೆಯಾಗಲಿದೆ. ನಾಟಕ, ಸಂಗೀತ, ನೃತ್ಯ, ಯಕ್ಷಗಾನ ಸೇರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗಿವೆ.
ಜುಲೈ 23ರಿಂದ ಕುಂದಾಪ್ರ ಕನ್ನಡ ಹಬ್ಬ, ಬೆಂಗಳೂರಿನಲ್ಲಿ ಕುಂದಾಪುರ ಕನ್ನಡಿಗರ ಸಮಾಗಮ
ಆಟ-ಊಟ:
ಸಮಾರಂಭದ ಜತೆಗೆ ಕರಾವಳಿಯ ಅಪರೂಪದ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ವಯೋಮಿತಿ ಆಧಾರದಲ್ಲಿ ಹಗ್ಗ ಜಗ್ಗಾಟ, ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹಣೆಬೊಂಡ ಓಟ, ಗಿರ್ಗಿಟ್ಲಿ ಓಟ, ಚಿತ್ರಕಲೆ, ಹಲಸಿನ ಕೊಟ್ಟೆಕಟ್ಟುವುದು, ಮಡ್ಲ್ ನೆಯ್ಯುವುದು ಇನ್ನಿತರ ಸ್ಪರ್ಧೆಗಳು ನಡೆಯಲಿವೆ.
ಜತೆಗೆ ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ಹಾಲುಬಾಯಿ, ಕೊಟ್ಟೆಕಡುಬು, ಗೋಲಿಬಜೆ, ಬ®್ಸ…, ಸುಕ್ಕಿನ್ ಉಂಡೆ, ಎಳ್ ಬಾಯ್‌್ರ, ಹೆಸ್ರು ಬಾಯ್‌್ರ ನಂತಹ ವಿವಿಧ ಪಾನಕಗಳು, ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬರಿಯಾನಿ, ಚಟ್ಲಿ ಸಾರು ಇನ್ನಿತರ ಅಪರೂಪದ ಖಾದ್ಯಗಳು ಮತ್ತಷ್ಟುಆಕರ್ಷಣೆಯಾಗಲಿವೆ.
ಗಣ್ಯರ ಸಂಗಮ
ಸತತ ಐದನೇ ಬಾರಿ ನಗರದಲ್ಲಿ ಆಯೋಜಿಸಲಾಗುತ್ತಿರುವ ‘ಕುಂದಾಪ್ರ ಕನ್ನಡ ಹಬ್ಬ’(Kundapra kannada habba) ಇದು. ಪ್ರತಿಷ್ಠಾನ ರಚನೆಯಾದ ನಂತರ ಮೊದಲನೇ ಹಬ್ಬವಾಗಿದೆ. ಕಾರ್ಯಕ್ರಮವನ್ನು ಕರಾವಳಿಯ ಜನಪದ ಕ್ರೀಡೆ ಕಂಬಳದ ಸಾಧಕ ಶಾಂತರಾಮ ಶೆಟ್ಟಿಬಾರ್ಕೂರು ಉದ್ಘಾಟಿಸಲಿದ್ದಾರೆ. ಶಾಸಕರಾದ ಕಿರಣ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಲಿದೆ. ಹಿರಿಯರಾದ ರೇಖಾ ಬಿ.ಬನ್ನಾಡಿ, ಉಪೇಂದ್ರ ಶೆಟ್ಟಿ, ಕವಿ ಎಚ್.ಡುಂಡಿರಾಜ್ ಅವರ ಭಾಷೆಯ ಬಹು ಆಯಾಮದ ಬಗ್ಗೆ ಮಾತು- ನುಡಿ ಚಾವಡಿ ನಡೆಯಲಿದೆ.
ಸಂಜೆ 4.30ರ ವೇಳೆಗೆ ಸಮಾರೋಪ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎಂ.ಕೃಷ್ಣಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬಂಟರ ಸಂಘದ ಅಧ್ಯಕ್ಷ ಎಂ.ಮುರುಳೀಧರ ಹೆಡ್ಗೆ ಆಗಮಿಸಲಿದ್ದಾರೆ. ಖ್ಯಾತ ಚಿತ್ರನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿಹಾಗೂ ಇನ್ನಿತರೆ ಸಿನಿತಾಯರು ಆಗಮಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಲಿದ್ದಾರೆ.
ಸಂಭ್ರಮದಿಂದ ಕುಂದಾಪ್ರ ಕನ್ನಡ ದಿನ ಅಚರಣೆ : ವಿಶೇಷತೆ ನೆನಪಿಸಿಕೊಳ್ಳುವ ಹಬ್ಬ
ಸಾಧಕರಿಗೆ ಗೌರವ:
ಕುಂದಾಪುರ ಭಾಗದ ಸಾಧಕರಾದ ಪ್ರೊ ಎ.ವಿ.ನಾವಡ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು ಇವರಿಗೆ ‘ಊರ ಗೌರವ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಎಲ್ಲಿ, ಎಷ್ಟೊತ್ತಿಗೆ?
ಬೆಂಗಳೂರು ಅತ್ತಿಗುಪ್ಪೆ ಬಂಟರ ಭವನ
ಗಂಟೆ ಬೆಳಗ್ಗೆ 9ರಿಂದ