ಕುಮಾರಸ್ವಾಮಿ, ದೇವೇಗೌಡರು ಮನಸ್ಸು ಮಾಡಿದ್ರೆ ಎಲ್ಲವೂ ಆಗುತ್ತೆ: ಸಿ.ಪಿ. ಯೋಗೇಶ್ವರ!

By Sathish Kumar KHFirst Published Oct 21, 2024, 7:19 PM IST
Highlights

ಬಿಜೆಪಿ ನಾಯಕರು ಟಿಕೆಟ್ ಕೊಡಿಸಲು ಪ್ರಯತ್ನಿಸಿದರೂ, ಅಂತಿಮ ತೀರ್ಮಾನ ಕುಮಾರಸ್ವಾಮಿ ಅವರದ್ದು ಎಂದು ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಪಕ್ಷ ಮತ್ತು ಚಿಹ್ನೆ ಬದಲಿಸಲು ಇಷ್ಟವಿಲ್ಲದ ಯೋಗೇಶ್ವರ್, ಜೆಡಿಎಸ್ ನಿಂದ ಸ್ಪರ್ಧಿಸಲು ಆಶಿಸುತ್ತಿದ್ದಾರೆ.

ಹುಬ್ಬಳ್ಳಿ (ಅ.21): ಬಿಜೆಪಿ ನಾಯಕರೆಲ್ಲರೂ ನನಗೆ ಟಿಕೆಟ್ ಕೊಡಿಸುವುದಕ್ಕೆ ತುಂಬಾ ಪ್ರಯತ್ನ ಮಾಡಿದ್ದಾರೆ. ಆದರೆ, ಅಂತಿಮ ತೀರ್ಮಾನ ಮಾಡಬೇಕಾದದ್ದು ಕುಮಾರಸ್ವಾಮಿ ಅವರ ಕೈಯಲ್ಲಿದೆ. ನಾನು ಈಗಾಗಲೇ ಪಕ್ಷ ಹಾಗೂ ಚಿಹ್ನೆಗಳನ್ನು ಬದಲಿಸಿ ಸಾಕಾಗಿದೆ. ಇದೀಗ ಬಿಜೆಪಿಯಲ್ಲಿ ಸ್ಪರ್ಧಿಸಿ ಸಿದ್ದಾಂತಗಳನ್ನು ಒಗ್ಗಿಕೊಂಡು ಅಭ್ಯಾಸವಾಗಿದೆ. ಪುನಃ ಚಿಹ್ನೆ ಬದಲಾವಣೆ ಮಾಡಲು ಮನಸ್ಸಿಲ್ಲ. ನಾಳೆವರೆಗೂ ಕಾಯುತ್ತೇನೆ. ಕುಮಾರಸ್ವಾಮಿ, ದೇವೇಗೌಡು ಮನಸು ಮಾಡಿದ್ರೆ ಈಗಲೂ ಆಗುತ್ತದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸೋಮವಾರ ರಾಜೀನಾಮೆ ಸಲ್ಲಿಕೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಆಶೋಕ  ಅವರು ನನ್ನ ಹಿತೈಷಿ ಆಗಿದ್ದಾರೆ. ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆ. ಹೀಗಾಗಿಯೇ ನಾನು ನಾಳೆವರೆಗೂ ಕಾಯ್ತೀನಿ. ನಾನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಮಾತಾಡಿದ್ದೇನೆ. ಜೋಶಿಯವರಿಗೂ ರಿಕ್ವೆಸ್ಟ್ ಮಾಡಿದ್ದೇನೆ. ಕುಮಾರಸ್ವಾಮಿ ಅವರನ್ನು ಮನವೊಲಿಸಲು ಪ್ರಯತ್ನ ಮಾಡುವುದಾಗಿ ಜೋಶಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Latest Videos

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಬಂಡಾಯ ಸ್ಪರ್ಧೆ ಖಚಿತವೆಂದ ಸೈನಿಕ; ಅಫಿಡವಿಟ್ ಸಿದ್ಧಪಡಿಸಿಕೊಳ್ಳುತ್ತಿರುವ ಯೋಗೇಶ್ವರ್!

ಪ್ರಹ್ಲಾದ್ ಜೋಶಿ ಅವರು ನಾಳೆವರೆಗೂ ವೇಟ್ ಮಾಡಿ ಎಂದು ಹೇಳಿದ್ದಾರೆ. ಜೊತೆಗೆ ಅರವಿಂದ ಬೆಲ್ಲದ್ ಜೊತೆ ಮಾತಾಡಿದ್ದೇನೆ. ಬಿಜೆಪಿ ಸಾಕಷ್ಟು ನಾಯಕರ ನನ್ನ ಪರವಾಗಿ ಧ್ವನಿ ಎತ್ತಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಕುಮಾರಸ್ವಾಮಿ ಅವರದ್ದು, ಅವರು ಒಪ್ಪಬೇಕು ಅಲ್ವಾ? ಪದೇ ಪದೇ ಪಕ್ಷದ ಸಿಂಬಲ್ ಚೇಂಜ್ ಬದಲಿಸಿ ಸಾಕಾಗಿದೆ. ಈಗಾಗಲೇ ಬಿಜೆಪಿಯಿಂದ ಸ್ಪರ್ಧಿಸಿ ಪಕ್ಷದ ಸಿದ್ದಾಂತ ಮೈಗೂಡಿಸಿಕೊಂಡಿದ್ದೇವೆ. ಈಗ ಪುನಃ ಚೇಂಜ್ ಮಾಡಬೇಕು ಎಂಬ ನೋವು ಕಾಡುತ್ತಿದೆ. ಕುಮಾರಸ್ವಾಮಿ, ದೇವೇಗೌಡು ಮನಸು ಮಾಡಿದರೆ ಈಗಲೂ ಆಗುತ್ತದೆ. ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ. ಬೆಳಗಿನವರೆಗೆ ನಾನು ಕಾಯುತ್ತೇನೆ. ನೋಡೋಣ ಏನಾಗುತ್ತದೆ ಎಂದು ಸಿ.ಪಿ. ಯೋಗೇಶ್ವರ ಹೇಳಿದರು.

ಇದನ್ನೂ ಓದಿ: ಯೋಗೇಶ್ವರ್‌ ಕಾಂಗ್ರೆಸ್‌ ಜತೆ ಸಂಪರ್ಕದಲ್ಲಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದ ಸಿಪಿ ಯೋಗೇಶ್ವರ್‌ ಅವರು, 'ಎನ್‌ಡಿಎ ಅಭ್ಯರ್ಥಿಯಾಗಿ ಚುನಾವಣೆಗೆ ಕಣಕ್ಕಿಳಿಯುವ ಸಾಧ್ಯತೆ ಬಹಳ ಕ್ಷೀಣಿಸುತ್ತಿದೆ. ಜೆಡಿಎಸ್‌ ಹಾಗೂ ನಾವು ಒಟ್ಟಿಗೆ ಚುನಾವಣೆ ಮಾಡಬೇಕು. ನನಗೆ ಮೊದಲಿನಿಂದಲೂ ಬಿಜೆಪಿಯಿಂದ ನಿಲ್ಲಬೇಕು ಅನ್ನೋದು ಆಶಯ. ಜೆಡಿಎಸ್‌ನಿಂದ ನಿಂತುಕೊಳ್ಳುವಂತೆ ಮಾತನಾಡಿದ್ದಾರ. ಆದರೆ, ಜೆಡಿಎಸ್‌ ಟಿಕೆಟ್‌ನಲ್ಲಿ ಹೋರಾಟ ಮಾಡಲು ನಮ್ಮ ಕಾರ್ಯಕರ್ತರು ಕೂಡ ಒಪ್ಪುತ್ತಿಲ್ಲ.ಬಹಳ ಸಾರಿ ಚಿಹ್ನೆ ಬದಲಾಯಿಸಿದ್ದು, ಪಕ್ಷಾಂತರ ಮಾಡಿದ್ದು ಆಗಿದೆ..' ಎಂದು ಹೇಳಿದ್ದಾರೆ. ವೈಯಕ್ತಿಕವಾಗಿ ನನಗೆ ಯಾವುದೇ ಟಿಕೆಟ್‌ನಿಂದ ಸ್ಪರ್ಧೆ ಮಾಡೋಕೆ ಹಿಂಜರಿಕೆಯಿಲ್ಲ. ಆದರೆ, ಜೆಡಿಎಸ್‌ ಟಿಕೆಟ್‌ನಿಂದ ಸ್ಪರ್ಧೆ ಮಾಡೋಕೆ ಕಾರ್ಯಕರ್ತರು ಒಪ್ಪುತ್ತಿಲ್ಲ ಎಂದಿದ್ದರು.

click me!