
ಬೆಂಗಳೂರು (ಫೆ.21): ಖಾಸಗಿ ಸ್ಲೀಪರ್ ಬಸ್‌ಗಳಿಗೆ ಸೆಡ್ಡು ಹೊಡೆಯಲು ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆ ಮುಂದಾಗಿದ್ದು, 20 ಅಂಬಾರಿ ಉತ್ಸವ ಸ್ಲೀಪರ್ ಬಸ್ ಸೇವೆ ಇಂದಿನಿಂದ ಆರಂಭಿಸಿದೆ. ವಿಮಾನಯಾನದ ಅನುಭವವನ್ನು ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 - 9600 ಸ್ಲೀಪರ್ ಬಸ್ಸುಗಳ ಮೂಲಕ ನೀಡಲಾಗುತ್ತಿದೆ. ಅಂಬಾರಿ ಉತ್ಸವ ಸಂಭ್ರಮದ ಪ್ರಯಾಣ ಎಂಬ ಘೋಷಣೆಯೊಂದಿದೆ ಹೊಸ ಬಸ್ ಸೇವೆಯನ್ನು ಕೆಎಸ್‌ಆರ್‌ಟಿಸಿ ಆರಂಭಿಸಿದೆ.
ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 - 9600 ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು. ಪ್ರಸ್ತುತ ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಗಳಿಗಿಂತ ಅತ್ಯುತ್ತಮ ಸೌಕರ್ಯ ಹೊಂದಿರುವ ಬಸ್ ಇದಾಗಿದೆ. ವಿಮಾನದಂತಹ ಪ್ರಯಾಣದ ಅನುಭವವನ್ನು ನೀಡುವ 15 ಮೀಟರ್ ಉದ್ದದ ಬಸ್‌ನಲ್ಲಿ ಪ್ರಯಾಣ ಅತ್ಯಂತ ಸುಖಕರ ಆಗಿರುತ್ತದೆ. ಇಂದಿನಿಂದ 20 ಮಲ್ಟಿ-ಆಕ್ಸಲ್ ವೋಲ್ವೋ 9600 ಸ್ಲೀಪರ್ ಬಸ್‌ಗಳು ರಸ್ತೆಗಿಳಿಯಲಿವೆ.
KSRTC : ಬಸ್ ಕಂಡಕ್ಟರ್ ಹುದ್ದೆಯಲ್ಲಿ ಮೋಸ: ಫಿಸಿಕಲ್ ಟೆಸ್ಟ್‌ನಲ್ಲಿ ಕಬ್ಬಿಣದ ರಾಡ್ ಕಟ್ಟಿಕೊಂಡ ಆಕಾಂಕ್ಷಿಗಳು
ಸಂಭ್ರಮದ ಪ್ರಯಾಣ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವೋಲ್ವೋ ಬಿಎಸ್-VI 9600s ಮಾದರಿಯ ಮಲ್ಟಿ ಆಕ್ಸಲ್ ಸ್ಲೀಪರ್ ವಾಹನಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ ಮೂಲಕ 'ಅಂಬಾರಿ ಉತ್ಸವ' ಎಂಬ ಬ್ರ್ಯಾಂಡ್ ಹೆಸರು ಮತ್ತು 'ಸಂಭ್ರಮದ ಪ್ರಯಾಣ' ಎಂಬ ಟ್ಯಾಗ್ ಲೈನ್ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8000 ಅನುಸೂಚಿಗಳಿಂದ 28 ಲಕ್ಷ ಕಿ.ಮೀ ಕ್ರಮಿಸುವುದರ ಮೂಲಕ 28 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ. ನಿಗಮವು ಪ್ರತಿ ದಿನ ರೂ.10 ಕೋಟಿ ಆದಾಯಗಳಿಸುತ್ತಿದೆ.
ಅಂಬಾರಿ ಉತ್ಸವ್ ಬಸ್ ವಿಶೇಷತೆಗಳು
* 40 ಆಸನಗಳುಳ್ಳ ಬಸ್ ಪ್ರಯಾಣಿಕರು ಮಲಗುವ ಮತ್ತು ಕುಳಿತುಕೊಳ್ಳುವ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯದ ಬಸ್
* ಪಿಯು ಫೋಮ್ ಸ್ಲೀಪರ್ ಆಸನ
* ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯ ಅಂಬಾರಿ ಉತ್ಸವ್ ಬಸ್
* ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್,
* USB ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯ
* 12 ಸ್ಪೀಡ್ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್,
* ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನ,
* 9600 ಮಾದರಿಯಲ್ಲಿ ಕವಚ ಜೊತೆಗೆ ಸುಧಾರಿತ ಅಬ್ಸರ್ವರ್
* ಗರಿಷ್ಠ ಪ್ಯಾಸೆಂಜರ್ ಕಾರ್ಗೋ ಶೇಖರಣೆ ವ್ಯವಸ್ಥೆ
* ಉನ್ನತ ದರ್ಜೆಯ ಪರೀಕ್ಷಿತ ಮತ್ತು ಮೌಲ್ಲೀಕರಿಸಿದ ವಸ್ತುಗಳ ಬಳಕೆ
* ಸಂಪೂರ್ಣ ಪೆನೆಲಿಂಗ್, ಬಂಡಿಂಗ್ ಪ್ರಕ್ರಿಯೆ ಇರಲಿದೆ.
ಈ 'ಅಂಬಾರಿ ಉತ್ಸವ' ವಾಹನಗಳ ಕಾರ್ಯಾಚರಣೆ ಮಾರ್ಗ:
KSRTC: ಸರ್ಕಾರದ ವಿರುದ್ಧ ಮತ್ತೆ ಸಾರಿಗೆ ನೌಕರರ ಸಮರ: ಮಾರ್ಚ್ 1ರಿಂದ ಬಸ್ ಬಂದ್ ಸಾಧ್ಯತೆ
350 ವಿದ್ಯುತ್ ವಾಹನಗಳ ಸೇರ್ಪಡೆ: ಗ್ರಾಮಾಂತರ ಪ್ರದೇಶದ ಪ್ರಯಾಣಿಕರು ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶದಿಂದ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳನ್ನು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ. ಅಂತರ ನಗರಗಳ ನಡುವೆ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಈಗಾಗಲೇ 01 Prototype ವಾಹನವು ಯಶಸ್ವಿ ಕಾರ್ಯಾಚರಣೆಗೊಳಿಸಿದ್ದು, ಮಾರ್ಚಿ-2023 ರೊಳಗಾಗಿ 50 ವಿದ್ಯುತ್ ಚಾಲಿತ ವಾಹನಗಳನ್ನು ಸೇರ್ಪಡೆಗೊಳಿಸಲಾಗುವುದು. ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಲಿಸುವ ಉದ್ದೇಶದಿಂದ ಹಂತ – ಹಂತವಾಗಿ 350 ವಿದ್ಯುತ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ