ಚಲಿಸುತ್ತಿರುವಾಗಲೇ ರಾಜಹಂಸ ಚಾಲಕನಿಗೆ ಹೃದಯಾಘಾತ, ಬಸ್ ಪಲ್ಟಿಯಾಗಿ 14 ಮಂದಿಗೆ ಗಾಯ!

By Suvarna NewsFirst Published Oct 24, 2022, 4:13 PM IST
Highlights

ರಾಯಚೂರಿನಲ್ಲಿ ಹೃದಯವಿದ್ರಾವಕ ಹಾಗೂ ಭಯಾನಕ ಘಟನೆಯೊಂದು ನಡೆದಿದೆ. ರಾಜಹಂಸ ಬಸ್ ಚಾಲಕ ಕರ್ತವ್ಯದಲ್ಲಿರುವಾಗಲೇ ಹೃದಾಯಘಾತವಾಗಿದೆ. ಇದರ ಪರಿಣಾಮ ಬಸ್ ಅಪಘಾಕ್ಕೀಡಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ರಾಯಚೂರು(ಅ.24):  31 ಪ್ರಯಾಣಿಕರನ್ನು ಹೊತ್ತು ರಾಜಹಂಸ ಬಸ್ ರಾಯಚೂರಿನಿಂದ ಬೆಳಗಾವಿ ಕಡೆ ಸಂಚರಿಸುತ್ತಿತ್ತು. ಇದಕ್ಕಿದ್ದಂತೆ ಬಸ್ ಚಾಲಕನಿಗೆ ಹೃದಯಾಘಾತವಾಗಿದೆ. ತೀವ್ರ ಹೃದಯಾಘಾತದಿಂದ ಬಳಲಿದ ಚಾಲಕ ಬಸ್ ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ಚಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪರಿಣಾಮ ಬಸ್ ಅಪಘಾತಕ್ಕೀಡಾಗಿದೆ. ಇದರಿಂದ ಬಸ್ ಪ್ರಯಾಣಿಕರ ಪೈಕಿ 14 ಮಂದಿಗೆ ಗಾಯಗಳಾಗಿವೆ.  ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ 51 ವರ್ಷದ ಬಸ್ ಚಾಲಕ ಶ್ರೀನಿವಾಸ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ರಾಯಚೂರು(Raichur)) ಲಿಂಗಸೂಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದ ಬಳಿ ಘಟನೆ ನಡೆದಿದೆ. ರಾಯಚೂರಿನಿಂದ ಸರಿಸುಮಾರು 90 ಕಿಲೋಮೀಟರ್ ಬಸ್ ಪ್ರಯಾಣಿಸಿದೆ. ಈ ವೇಳೆ ಈ ದುರ್ಗಟನೆ(Bus Accident) ನಡೆದಿದೆ. ಬಸ್ ಚಾಲಕ ತೀವ್ರ ಹೃದಯಾಘಾತ(Heart Attack) ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಬಸ್ ನಿಯಂತ್ರಿಸಲು ಯತ್ನಿಸಿದ್ದಾರೆ. ಬಸ್ ಚಾಲನಕ(Bus Driver) ಪ್ರಯತ್ನದಿಂದ ಬಸ್ ವೇಗ ಕಡಿತಗೊಂಡಿದೆ. ಆದರೆ ಬಸ್ ನಿಲ್ಲಿಸುವ ಮೊದಲೇ ಚಾಲಕ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಬಸ್ ಅಪಘಾತಕ್ಕೀಡಾಗಿದೆ.  

 

Koppal: ಮದುವೆ ದಿಬ್ಬಣದ ಮಿನಿ ಬಸ್ ಪಲ್ಟಿ: 10 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಆಗಸ್ಟ್ 23ರ ತಡ ರಾತ್ರಿ ರಾಯಚೂರಿನಿಂದ ಬೆಳಗಾವಿಗೆ(Raichur to Belagavi) ಬಸ್ ಪ್ರಯಾಣ ಬೆಳೆಸಿತ್ತು. 31 ಪ್ರಯಾಣಿಕರನ್ನು ಹೊತ್ತು ಸಾಗಿದ ಬಸ್ ಚಿಕ್ಕಹೆಸರೂರು ಬಳಿ ಬರುತ್ತಿದ್ದಂತೆ ಚಾಲಕ ಶ್ರೀನಿವಾಸ್‌ಗೆ ಹೃದಯಾಘಾತವಾಗಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಹೊಸಕ್ಕೆ ಪಲ್ಟಿಯಾಗಿದೆ(Bus Accident). 31 ಪ್ರಯಾಣಿಕರ ಪೈಕಿ 14 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆ ಕುರಿತು ರಾಜಹಂಸ ಬಸ್ ನಿರ್ವಾಹಕ ಗೋವಿಂದ್‌ರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!