ಮರಾಠಿ ಮಾತನಾಡುವಂತೆ ಕನ್ನಡ ಕಂಡಕ್ಟರ್ ಮೇಲೆ ಪುಂಡರ ಹಲ್ಲೆ, ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ!

Published : Feb 22, 2025, 01:02 PM ISTUpdated : Feb 22, 2025, 01:17 PM IST
ಮರಾಠಿ ಮಾತನಾಡುವಂತೆ ಕನ್ನಡ ಕಂಡಕ್ಟರ್ ಮೇಲೆ  ಪುಂಡರ ಹಲ್ಲೆ,  ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ!

ಸಾರಾಂಶ

ಬೆಳಗಾವಿಯಲ್ಲಿ ಮರಾಠಿ ಮಾತನಾಡದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದೆ. ಗಾಯಗೊಂಡ ಕಂಡಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಆದರೆ, ಇನ್ನೂ ಹಲವರು ಭಾಗಿಯಾಗಿದ್ದಾರೆಂದು ಕಂಡಕ್ಟರ್ ಆರೋಪಿಸಿದ್ದಾರೆ. ಇದೇ ವೇಳೆ, ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ಕರವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಘಟನೆ ಉಭಯ ರಾಜ್ಯಗಳ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ.

ಬೆಳಗಾವಿ (ಫೆ.22): ಮರಾಠಿ ಮಾತನಾಡದಿದ್ದಕ್ಕೆ ಪುಂಡರ ಗುಂಪೊಂದು  ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಪ್ರಕರಣ ಸಂಬಂಧ ಮಾರಿಹಾಳ ಠಾಣೆ ‌ಪೊಲೀಸರಿಂದ ಓರ್ವ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳ ಬಂಧನವಾಗಿದೆ. ಮಾರುತಿ ತುರುಮುರಿ, ರಾಹುಲ್ ರಾಜು ನಾಯ್ಡು, ಬಾಳು ಗೋಜಗೇಕರ್ ಬಂಧಿತರು. ಬಂಧಿತರೆಲ್ಲರೂ ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದವರು ಎಂದು ತಿಳಿದುಬಂದಿದೆ.

ಫೆಬ್ರವರಿ 21 ಮಧ್ಯಾಹ್ನ 12.30ರ ಸುಮಾರಿಗೆ ಸುಳೇಭಾವಿ ಬಳಿ ಬಸ್ ಕಂಡಕ್ಟರ್ ಜೊತೆ ಬಸ್‌ನಲ್ಲಿ ಕುಳಿತ ಹುಡುಗಿ, ಹುಡುಗನ ಜೊತೆ ಮಾತಿನ ಚಕಮಕಿ ನಡೆದಿದೆ. ಮರಾಠಿ ಭಾಷೆ ಬರದ ಕಾರಣ ಕಂಡಕ್ಟರ್ ಕನ್ನಡದಲ್ಲಿ ಮಾತನಾಡುತ್ತಾರೆ. ಇದಕ್ಕೆ ಮರಾಠಿ ಕಲಿಯಬೇಕು ಅಂತಾ ಹೇಳಿ ಬಸ್‌ನಲ್ಲಿ ಇದ್ದ ಯುವಕ ತನ್ನ ಸ್ನೇಹಿತನ ಕರೆಯಿಸಿ ಹಲ್ಲೆ ಮಾಡಿಸಿದ್ದಾರೆ ಎಂದು ಕಂಡಕ್ಟರ್ ಆರೋಪವಾಗಿದೆ.

ಬೆಳಗಾವಿ ಬಸ್‌ನಲ್ಲಿ ಕನ್ನಡ ಮಾತನಾಡಿದ ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರು!

ಕನ್ನಡದಲ್ಲಿ ಮಾತನಾಡಿದಕ್ಕೆ ಮರಾಠಿ ಪುಂಡರಿಂದ ಕಂಡಕ್ಟರ್ ‌ಮೇಲೆ ಹಲ್ಲೆ ಪ್ರಕರಣ ಸಂಬಂಧ ಹಲ್ಲೆ ವೇಳೆ ಆದ ಒಳಪೆಟ್ಟಿನ ಗಾಯಗಳಿಂದ   ಕಂಡಕ್ಟರ್  ಕಣ್ಣಿರು ಹಾಕಿದ್ದಾರೆ. ಕೇವಲ ನಾಲ್ವರಲ್ಲ, ಇನ್ನಷ್ಟು ಜನರ ಬಂಧನ ಆಗಬೇಕು ಎಂದು ಬೆಳಗಾವಿಯಲ್ಲಿ ಕಂಡಕ್ಟರ್ ಮಹಾದೇವಪ್ಪ ಹುಕ್ಕೇರಿ ಒತ್ತಾಯಿಸಿದ್ದಾರೆ.ಹಲ್ಲೆ ಪ್ರಕರಣ ಮಾರಿಹಾಳ ಪೊಲೀಸರಿಂದ ನಾಲ್ಕು ಜನ ಅರೆಸ್ಟ್ ಆಗಿದ್ದಾರೆ. ನಾಲ್ಕು ಜನ ಅಷ್ಟೇ ಅಲ್ಲಾ ಐದರಿಂದ ಏಳು ಜನ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಉಳಿದವರನ್ನೂ ಪೊಲೀಸರು ಅರೆಸ್ಟ್ ಮಾಡಬೇಕು. ಹಲ್ಲೆ ಮಾಡಿದವರನ್ನ ಅರೆಸ್ಟ್ ಮಾಡಿ ತಕ್ಕ ಪಾಠ ಕಲಿಸಬೇಕು.ನನ್ನ ಮೇಲೆ ಹಲ್ಲೆ ಮಾಡುವಂತಹ ಸಂದರ್ಭದಲ್ಲಿ ಐದಾರ ಜನ ಬಸ್ ಒಳಗಡೆ ಹತ್ತಿ ಬಂದಿದ್ದರು. ಕೆಳಗಡೆ ಕೂಡಾ ಸಾಕಷ್ಟು ಜನ ನಿಂತಿದ್ದರು.

ಹಲ್ಲೆ ಮಾಡುವ ಸಂದರ್ಭದಲ್ಲಿ ನನಗೆ ಬಸ್ ನಿಂದ ಇಳಿಯಲು ಕೊಡ ಬಿಡಲಿಲ್ಲ. ನನ್ನ ಮೇಲೆ ಸಾಕಷ್ಟು ಹಲ್ಲೆ ಮಾಡಿದ್ದಾರೆ ಕಾಲಿನಿಂದ ಒದ್ದಿದ್ದಾರೆ, ಬಡಿದಿದ್ದಾರೆ. ಎಲ್ಲರೂ ಪಂತ ಬಾಳೇಕುಂದ್ರಿ ಗ್ರಾಮದವರೇ ಆಗಿದ್ದಾರೆ. ನನಗೆ ಆಗಿರುವ ನೋವು ಸಹಿಸಿಕ್ಕೊಳ್ಳಲಿಕೆ ಆಗ್ತಿಲ್ಲ. ಸಿಕ್ಕಾಪಟ್ಟೆ ಒಳಪೆಟ್ಟಾಗಿದೆ ಹೇಳಲೂ ಆಗುತ್ತಿಲ್ಲ. ಊರಿನ ಗ್ರಾಮಸ್ಥರು ಒಬ್ಬರೂ ಬಿಡಸಲಿಕ್ಕೆ ಬರಲಿಲ್ಲ,‌ಮಹಿಳೆಯರು ಮಾತ್ರ ಬಿಡ್ರಿ ಬಡಿಬೇಡಿ ಎಂದರು.ಹತ್ತರಿಂದ ಹದಿನಾರು ವರ್ಷ ನಾನು ಅದೇ ರೂಟ್ ನಲ್ಲಿ ಕೆಲಸ ಮಾಡಿದ್ದೇನೆ. ಸಣ್ಣ ಪುಟ್ಟ ಜಗಳ ಆಗಿದೆ ಆದರೆ ಈ ರೀತಿ ಆಗಿದ್ದು ನಮ್ಮ ದುರ್ದೈವ. ಇನ್ನೊಮ್ಮ ಕಾಕಿ ಬಟ್ಟೆ ಹಾಕಿದವರಿಗೆ ಈ ರೀತಿ ಆಗಬಾರದು ಎಂದು ಒಳಪೆಟ್ಟಿನ ಗಾಯಗಳಿಂದ ಕಂಡಕ್ಟರ್ ಮಹಾದೇವ ಹುಕ್ಕೇರಿ ಕಣ್ಣಿರು ಹಾಕಿದರು.

ಮಹಾರಾಷ್ಟ್ರ ಬಳಿಕ ಗುಯಿಲಿನ್-ಬಾರ್‌ ಸಿಂಡ್ರೋಮ್‌ಗೆ ಕರ್ನಾಟಕದ ಬೆಳಗಾವಿಯಲ್ಲಿ ಮೊದಲ ಬಲಿ!

ಕಂಡಕ್ಟರ್‌ ಮೇಲೆ ಪೋಕ್ಸೋ ಕೇಸ್!
ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಈಗ ಮತ್ತೊಂದು ತಿರುವು ಸಿಕ್ಕಿದೆ. ಕಂಡಕ್ಟರ್ ಮೇಲೆ ಹಲ್ಲೆಗೈದ ಮರಾಠಾ ಪುಂಡರು ಈಗ ಹೊಸ ವರಸೆ ತೆಗೆದಿದ್ದು, ಅಪ್ರಾಪ್ತ ಬಾಲಕಿಯಿಂದ ನಿರ್ವಾಹಕನ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮಾರಿಹಾಳ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ರೊಚ್ಚಿಗೆದ್ದ ಕರವೇ:
ಘಟನೆ ಸಂಬಂಧ ಕರವೇ ರೊಚ್ಚಿಗೆದ್ದಿದೆ  ಕಂಡಕ್ಟರ್‌ ಮೇಲಿನ ಪೋಕ್ಸೋ ಕೇಸ್ ಪಡೆಯದಿದ್ರೆ ಮಾರಿಹಾಳ ಠಾಣೆ ಮುತ್ತಿಗೆ ಹಾಕ್ತಿವಿ ಎಂದು ಬೆಳಗಾವಿ ಪೊಲೀಸರಿಗೆ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಕಂಡಕ್ಟರ್ ಮೇಲೆ ಈ ರೀತಿ ಕೇಸ್ ಹಾಕಲಾಗಿದೆ. ಕಂಡಕ್ಟರ್ ನೆರವಿಗೆ ಬರಬೇಕಿದ್ದ ಪೊಲೀಸರು ಈ ರೀತಿ ವರ್ತಿಸಿದ್ದು ಸರಿಯಲ್ಲ. ಇಡೀ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗ್ತಿದೆ, ಪ್ರಕರಣ ದಿಕ್ಕು ತಪ್ಪಿಸುವ ಕೆಲಸವನ್ನು ಪೊಲೀಸರು ಮಾಡ್ತಿದ್ದಾರೆ ಎಂದ ಘಟನೆ ಬಗ್ಗೆ ಮೌನ ವಹಿಸಿರುವ ರಾಜಕೀಯ ನಾಯಕರ ಬಗ್ಗೆಯೂ ದೀಪಕ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ  ಶಿವಸೇನೆ, ಕರ್ನಾಟಕದಲ್ಲಿ ಕರವೇ ಪ್ರತಿಭಟನೆ:
ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ ಉಭಯ ರಾಜ್ಯಗಳ ಗಡಿಯಲ್ಲಿ ದ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಕರ್ನಾಟಕದಲ್ಲಿ ಕರವೇ ಪ್ರತಿಭಟನೆ ನಡೆಸುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಪ್ರತಿಭಟನೆ ನಡೆಸುತ್ತಿದೆ. 

ಬೆಳಗಾವಿಯ ಅಶೋಕ ವೃತ್ತದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ ನಡೆಸುತ್ತಿದೆ. ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರ, ಬೆಳಗಾವಿ ಪೊಲೀಸರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಾರಿಹಾಳ ಠಾಣೆ ಮುತ್ತಿಗೆಗೆ ಕರವೇ ಕಾರ್ಯಕರ್ತರು ಮುಂದಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ಶಿವಸೇನೆ ( ಠಾಕರೆ ಬಣ ) ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕ ಸರ್ಕಾರ ಮತ್ತು ಕರವೇ ಕಾರ್ಯಕರ್ತರ ವಿರುದ್ಧ ಘೋಷಣೆ ಹಾಕಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಾತ್ರವಲ್ಲ ಕರ್ನಾಟಕಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿ ಶಿವಸೇನೆ ಪ್ರತಿಭಟನೆ ನಡೆಸುತ್ತಿದೆ. ರಾಜ್ಯ ಸಾರಿಗೆ ಬಸ್ ಮೇಲೆ ಭಗವಾ ಧ್ವಜವನ್ನು ಕಟ್ಟಿದ ಮಹಾರಾಷ್ಟ್ರದ ಪುಂಡರು ಉದ್ಧಟತನ ಮೆರೆದಿದ್ದಾರೆ.

ತುಟಿ ಬಿಚ್ಚದ ರಾಜಕೀಯ ನಾಯಕರು:
ಬೆಳಗಾವಿ ರಾಜಕಾರಣಿಗಳ ಮರಾಠಿ ಪ್ರೀತಿ ಮುಂದುವರೆದಿದೆ. ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಬೆಳಗಾವಿ ನಾಯಕರು ಮೌನವಹಿಸಿದ್ದಾರೆ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಎಲ್ಲರೂ ದಿವ್ಯಮೌನ ವಹಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಘಟನೆ ಖಂಡಿಸುವ ಬದಲು ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಲು ನಾಯಕರು ಸೂಚಿಸಿದ್ರಾ ಎಂದು ಪ್ರಶ್ನೆ ಹುಟ್ಟಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ