
ಬೆಂಗಳೂರು (ಆ.26): ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ನಿಗಾ ವಹಿಸುವ ಉದ್ದೇಶದೊಂದಿಗೆ ನಿಗಮದ ಎಲ್ಲ ಬಸ್‌ಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿಡಿ) ಅಳವಡಿಸಲು ಮತ್ತು ಬಸ್‌ಗಳ ಮೇಲೆ ನಿಗಾವಹಿಸಲು ಪ್ರತ್ಯೇಕ ಕಮಾಂಡ್ ಸೆಂಟರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕ ಸೇವೆ ನೀಡುವ ಎಲ್ಲ ವಾಹನಗಳಿಗೂ ವಿಎಲ್‌ಟಿಡಿ ಅಳವಡಿಕೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಅದರಂತೆ ಖಾಸಗಿ ವಾಹನಗಳಷ್ಟೇ ಅಲ್ಲದೆ ಸರ್ಕಾರಿ ವಾಹನಗಳಲ್ಲೂ ವಿಎಲ್‌ಟಿಡಿ ಅಳವಡಿಸಬೇಕಿದೆ. ಅದರಂತೆ ಕೆಎಸ್ಸಾರ್ಟಿಸಿಯ 6063 ಬಸ್‌ಗಳ ಪೈಕಿ 2344 ಬಸ್‌ಗಳಿಗೆ ಈಗಾಗಲೇ ವಿಎಲ್‌ಟಿಡಿ ಅಳವಡಿಸಲಾಗಿದೆ. ಅದರ ಜತೆಗೆ ಉಳಿದ 3743 ಬಸ್‌ಗಳಿಗೆ ವಿಎಲ್‌ಟಿಡಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಹಾಗೆಯೇ, ವಿಎಲ್‌ಟಿಡಿ ಮೂಲಕ ಬಸ್‌ಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ ಎಂಬುದು ಸೇರಿದಂತೆ ಮತ್ತಿತರ ಮಾಹಿತಿಯು ಲಭ್ಯವಾಗಲಿದೆ. ಆ ಮಾಹಿತಿಯನ್ನು ಸಂಗ್ರಹಿಸಿ, ಬಸ್‌ಗಳ ಮೇಲೆ ನಿಗಾ ವಹಿಸುವ ಉದ್ದೇಶದೊಂದಿಗೆ ಹೊಸದಾಗಿ ಕಮಾಂಡ್ ಸೆಂಟರ್ ನಿರ್ಮಾಣಕ್ಕೂ ಕೆಎಸ್ಸಾರ್ಟಿಸಿ ಮುಂದಾಗಿದೆ. ಅದಕ್ಕಾಗಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಕಮಾಂಡ್ ಸೆಂಟರ್ ಆರಂಭದ ನಂತರ ಬಸ್‌ಗಳ ಕ್ಷಣ ಮಾತ್ರದಲ್ಲಿ ಮಾಹಿತಿ ಲಭ್ಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ