Latest Videos

ಡೀಸೆಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತ KSRTC ಬಸ್; ಹಿಡಿಶಾಪ ಹಾಕಿದ ಪ್ರಯಾಣಿಕರು!

By Ravi JanekalFirst Published May 23, 2024, 3:26 PM IST
Highlights

ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಡೀಸೆಲ್  ಖಾಲಿಯಾಗಿ ನಡುರಸ್ತೆಯಲ್ಲಿ ನಿಂತ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ನಡೆದಿದೆ.

ಹೊಸನಗರ (ಮೇ.23): ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಡೀಸೆಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ನಡೆದಿದೆ.

ಇದ್ದಕ್ಕಿದ್ದಂತೆ ಬಸ್ ನಡುರಸ್ತೆಯಲ್ಲಿ ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಮದುವೆಗೆ, ಆಸ್ಪ್ರೆಗೆ ಇನ್ನಿತರ ಕಾರ್ಯಗಳಿಗೆ ಹೊರಟಿದ್ದವರು ಸರಿಯಾದ ಸಮಯಕ್ಕೆ ತಲುಪಲಾಗದೆ ಚಡಪಡಿಸಿದ್ದು ಒಂದೆಡೆಯಾದರೆ, ಮಂಜುಮುಸುಕಿದ ವಾತಾವರಣದಲ್ಲಿ ಮಕ್ಕಳು ವೃದ್ಧರು ರಸ್ತೆಯಲ್ಲಿ ನಿಲ್ಲುವಂತಾಯಿತು. ಡಿಸೇಲ್ ವ್ಯವಸ್ಥೆ ಮಾಡದ ಸಾರಿಗೆ ನಿಗಮಕ್ಕೆ ಪ್ರಯಾಣಿಕರು ಹಿಡಿಶಾಪ ಹಾಕಿದರು. ಪ್ರಯಾಣಿಕರು ಮುಂದೆ ಪ್ರಯಾಣಿಸಲು ಟಿಕೆಟ್ ಹಣ ವಾಪಸ್ ನೀಡಿದರು. ಬಳಿಕ ಬೇರೊಂದು ಬಸ್‌ಗಳಿಗೆ ಪ್ರಯಾಣಿಕರು ತೆರಳಿದರು.

ಉಗುಳಲು ಹೋಗಿ ಬಸ್ ಕಿಟಕಿಯೊಳಗೆ ಗೃಹಲಕ್ಷ್ಮೀ ತಲೆ ಲಾಕ್, ಇದು ನಿನಗೆ ಬೇಕಿತ್ತಾ ಎಂದ ನೆಟ್ಟಿಗರು

ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ನದ್ದೇ ಈ ಗತಿಯಾದರೆ ಏನು ಎಂದು ಪ್ರಯಾಣಿಕರು ಪ್ರಶ್ನಿಸಿದರು ಈ ವೇಳೆ, ಬಸ್‌ ಕಂಡಕ್ಟರ್, ಡ್ರೈವರ್, 'ಏನು ಮಾಡೋದು ಸಾರ್, ನಮ್ಮ ಹಣದಿಂದಲೇ ಡಿಸೇಲ್ ಹಾಕಿಸಿಕೊಂಡು ಬರಬೇಕೆಂದು ಆದೇಶ ಬಂದಿದೆ' ಎಂದು. ಅಸಹಾಯಕತೆ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಳೀಯರು ಜಮಾಯಿಸಿ ಕಳೆದೊಂದು ತಿಂಗಳಿಂದ ಇದೇ ಕತೆಯಾಗಿದೆ. ಎಲ್ಲೆಂದರಡಲ್ಲೇ ಡಿಸೇಲ್ ಖಾಲಿಯಾಗಿ ನಡುರಸ್ತೆ ನಿಲ್ಲುತ್ತಿವೆ ಎಂದರು.

ಮೆಟ್ರೋ ರೈಲು ಹತ್ತುವ ರೀಲ್ಸ್ ಹುಚ್ಚಾಟದಲ್ಲಿ ಯುವತಿ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲೇ ಬಾಕಿ!

ಶಕ್ತಿ ಯೋಜನೆ ಜಾರಿಯಿಂದ ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಹೇಳುತ್ತಿರುವ ಸಾರಿಗೆ ಸಚಿವರ ಮಾತು ಸುಳ್ಳಾ? ಕಂಡಕ್ಟರ್, ಡ್ರೈವರ್ ತಮ್ಮ ಹಣದಿಂದಲೇ ಡಿಸೇಲ್ ತುಂಬಿಸಬೇಕ? ಅಷ್ಟೊಂದು ಪ್ರಯಾಣಿಕರು ಇಲ್ಲದಿದ್ರೆ ಡಿಸೇಲ್ ಹಣ ಎಲ್ಲಿ ಬರುತ್ತೆ ಸ್ವಾಮಿ? ಒಟ್ಟಿನಲ್ಲಿ ಮೊದಲೇ ನಷ್ಟದಲ್ಲಿದ್ದ ಸಾರಿಗೆ ಇಲಾಖೆ ಶಕ್ತಿಯೋಜನೆ ಬಳಿಕ ಇನ್ನಷ್ಟು ನಷ್ಟಕ್ಕೀಡಾಗಿದೆ ಎಂಬುದು ಇಂತಹ ಘಟನೆಗಳಿಂದ ಅನುಮಾನ ಮೂಡಿಸಿರುವುದು ಹೌದು.

click me!