* ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಕೆಎಸ್ಆರ್‌ಟಿಸಿ ವಿಶೇಷ ಪ್ಯಾಕೇಜ್ ಘೋಷಣೆ
* ವೀಕೆಂಡಲ್ಲಿ ಟೂರ್ ಪ್ಲಾನ್ ಮಾಡಿದವರಿಗೆ ಬಂಪರ್ ಆಫರ್
* ಜುಲೈ 23 ಶುಕ್ರವಾರದಿಂದ ಎರಡು ದಿನದ ವೀಕೆಂಡ್ ಪ್ಯಾಕೆಜ್ ಟೂರ್
ಬೆಂಗಳೂರು, (ಜು.19): ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್ ಓಪನ್ ಅಗುತ್ತಿದ್ದಂತೆಯೇ ಜನರು ಪ್ರವಾಸಿ ತಾಣಗಳತ್ತ ಮುಖಮಾಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯೇ ಇದ್ದು ಸಾಕಾಗಿ ಇದೀಗ ಟೂರ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ.
ಅದರಂತೆಯೇ ಕೆಎಸ್‌ಆರ್‌ಟಿಸಿ ಕೂಡ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ವೀಕೆಂಡ್ ಆಫರ್ ಕೊಟ್ಟಿದ್ದು, ಬೆಂಗಳೂರಿನಿಂದ ಜೋಗಜಲಪಾತ ಮಾರ್ಗದ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ.
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್
ವಯಸ್ಕರಿಗೆ 1900, ಮಕ್ಕಳಿಗೆ (6ರಿಂದ 12ದವರಿಗೆ) 1700 ರೂ ನಿಗದಿ ಮಾಡಲಾಗಿದ್ದು, ಶಿವಮೊಗ್ಗ, ಸಾಗರ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಟ್ರಿಪ್ ಹೋಗುವ ಪ್ಲಾನ್ ಮಾಡಿದವರಿಗೆ ಇದು ಅನುಕೂಲವಾಗಲಿದೆ.
ಇದೇ ಜುಲೈ 23 ಶುಕ್ರವಾರದಿಂದ ಎರಡು ದಿನದ ವೀಕೆಂಡ್ ಪ್ಯಾಕೆಜ್ ಟೂರ್ ಆರಂಭವಾಗಲಿದೆ. ಕೆಎಸ್‌ಆರ್‌ಟಿಸಿ ಆನ್ ಲೈನ್ ಮೂಲಕ ಬುಕಿಂಗ್ ಮಾಡಲು ಅವಕಾಶ ಇದೆ.