ನಿಗಮಗಳ ಹೊಣೆಗಾರಿಕೆ ತಗ್ಗಿ ಸಲು, ಅದರಲ್ಲೂ ಭವಿಷ್ಯ ನಿಧಿ ಬಾಕಿ ಮೊತ್ತ ಪಾವತಿಸಲು ಅಗತ್ಯವಿರುವ ಅನುದಾನ ನೀಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಕಳೆದ ತಿಂಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಇದೀಗ ಅನುದಾನ ನೀಡುವ ಬದಲು ಆರ್ಥಿಕ ಸಂಸ್ಥೆ ಮೂಲಕ ₹2000 ಕೋಟಿ ಸಾಲ ಪಡೆಯಲು ಅನುಮತಿಸಿದೆ.
ಗಿರೀಶ್ ಗರಗ
ಬೆಂಗಳೂರು(ಡಿ.31): ನೌಕರರ ವೇತನದಲ್ಲಿ ಕಡಿತಗೊಳಿಸಲಾದ ಭವಿಷ್ಯ ನಿಧಿ ಪಾವತಿಸಲೂ ಸಾಧ್ಯವಾಗದೆ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆರ್ಥಿಕ ನೆರವು ನೀಡುವ ಬದಲು, ಆರ್ಥಿಕ ಸಂಸ್ಥೆ ಮೂಲಕ ಸಾಲ ಕೊಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇಂಧನ ಬೆಲೆ ಏರಿಕೆ, ಪ್ರಯಾಣ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು ಮತ್ತಿತರ ಕಾರಣಗಳಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು 2019-20ರಿಂದ 2023-240 5,209.35 ನಷ್ಟ ಅನುಭವಿಸಿವೆ. ಇದರಿಂದಾಗಿ ನಿಗಮಗಳು 2024ರ ನವೆಂಬರ್ ಅಂತ್ಯದವರೆಗೆ 6,24 4.29 ಕೋಟಿ ರು. ಹೊಣೆಗಾರಿಕೆ ಹೊಂದಿವೆ.
ನೌಕರರ ಭವಿಷ್ಯ ನಿಧಿ ಖಾತೆಗೆ ಪಾವತಿ ₹2994.46 3 20 ಉಳಿಸಿಕೊಂಡಿದೆ. ಹೀಗಾಗಿ ನಿಗಮಗಳ ಹೊಣೆಗಾರಿಕೆ ತಗ್ಗಿ ಸಲು, ಅದರಲ್ಲೂ ಭವಿಷ್ಯ ನಿಧಿ ಬಾಕಿ ಮೊತ್ತ ಪಾವತಿಸಲು ಅಗತ್ಯವಿರುವ ಅನುದಾನ ನೀಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಕಳೆದ ತಿಂಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಇದೀಗ ಅನುದಾನ ನೀಡುವ ಬದಲು ಆರ್ಥಿಕ ಸಂಸ್ಥೆ ಮೂಲಕ ₹2000 ಕೋಟಿ ಸಾಲ ಪಡೆಯಲು ಅನುಮತಿಸಿದೆ.
ಸರ್ಕಾರವೇ ಪಾವತಿಸಲಿದೆ ಅಸಲು, ಬಡ್ಡಿ:
ಸರ್ಕಾರ ನೀಡಿರುವ ಅನುಮತಿಯಂತೆ ನಿಗ ಮಗಳ ಆರ್ಥಿಕ ಸ್ಥಿತಿ ಸುಧಾರಿಸಲು ಸರ್ವೀಸ್ ಲೋನ್ ರೂಪದಲ್ಲಿ 2 ಸಾವಿರ ಕೋಟಿ ರು. ಸಾಲ ಪಡೆಯುವಂತೆ ಸೂಚಿಸಲಾಗಿದೆ. ಅದಕ್ಕೆ ಅಗತ್ಯವಿರುವ ಶೂರಿಟಿಯನ್ನು ನೀಡುವ ಸಂಸ್ಥೆಗೆ ಸರ್ಕಾರ ನೀಡಲಿದೆ. ಅಲ್ಲದೆ, ನಿಗಮಗಳು ಪಡೆಯುವ ಸಾಲವನ್ನು ಸರ್ಕಾರ ಕಾಲಕಾಲಕ್ಕೆ ತೀರಿಸಲಿದೆ. ಸಾರಿಗೆ ನೌಕರರ ಭವಿಷ್ಯ ನಿಧಿ ಬಾಕಿ ಮತ್ತು ಇಂಧನ ಪೂರೈಕೆದಾರರ ಬಾಕಿ ಪಾವತಿಸುವ ಸಲು ವಾಗಿಯೇ ನಿಗಮಗಳಿಗೆ ಸಾಲ ಪಡೆ ಯಲು ಅನುಮತಿಸಲಾಗಿದೆ.
₹6244.29 ಕೋಟಿ ಹೊಣೆ
4ಸಾರಿಗೆ ನಿಗಮಗಳು ನವೆಂಬರ್ ಅಂತ್ಯ ದವರೆಗೆ 6,468.34 ಕೋಟಿ ಹೊಣೆಗಾರಿಕೆಯನ್ನು ಹೊಂ ದಿದ್ದವು. ಅದರಲ್ಲಿ ನಿವೃತ್ತ ನೌಕರರ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಾಕಿ ಸೇರಿ ಮತ್ತಿತರ ಬಾಕಿಯೂ ಸೇರಿತ್ತು. ಆದರೆ, ಡಿಸೆಂಬರ್ನಲ್ಲಿ ನಿವೃತ್ತ ನೌಕರರಿಗೆ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಬಾಕಿ ಮೊತ್ತ ಕ224.05 ಕೋಟಿ ಪಾವತಿಸಲಾಗಿದೆ. ಒಟ್ಟು ₹6,224.29 ಕೋಟಿಗಳಷ್ಟಾಗಿದೆ. ನಿಗಮಗಳ ಹೊಣೆ ಗಾರಿಕೆ ಪೈಕಿ 2023ರ ಮಾರ್ಚ್ವರೆಗೆ ₹40 99.38 ಕೋಟಗಳಷ್ಟಿದ್ದರೆ, 2023ರ ಏಪ್ರಿಲ್ನಿಂದ 2024ರ ನವೆಂಬರ್ವರೆಗೆ 2,368.96 ಕೋಟಿ ಸೇರಿದೆ.
ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ₹2000 ಕೋಟಿ ಸರ್ವೀಸ್ ಲೋನ್ ಪಡೆ ಯಲು ಸರ್ಕಾರ ಅನುಮತಿಸಿದೆ. ಆ ಸಾಲದ ಅಸಲು, ಬಡ್ಡಿ ಸರ್ಕಾರವೇ ಭರಿಸಲಿದ್ದು ಅದ ರಿಂದ ಭವಿಷ್ಯ ನಿಧಿ ಬಾಕಿ, ಇಂಧನ ಸರಬರಾಜು ಬಾಕಿ ಪಾವತಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.