ಕಜಿಕಿಸ್ತಾನದಿಂದ ಬೆದರಿಕೆ ಕರೆ ಎಂದು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಅವರಿಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿದ್ದಾರೆ.
ಶಿವಮೊಗ್ಗ (ಮೇ.15): ಕಜಿಕಿಸ್ತಾನದಿಂದ ಬೆದರಿಕೆ ಕರೆ ಎಂದು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಅವರಿಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿದ್ದಾರೆ. ಕಳೆದ ರಾತ್ರಿ ಮತ್ತು ಬೆಳಗ್ಗೆ ಕಜಿಕಿಸ್ತಾನದಿಂದ ಹಲವು ಬಾರಿ ಕರೆ ಬಂದಿದ್ದು ವಿಚಾರಣೆ ನಡೆಸಲು ದೂರು ಕೊಡಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಗೆ ಬೆದರಿಕೆ ಕರೆ ಮಾಡಿದ್ದ ಸಾಹಿಲ್ ಶೇಖ್ ವಿಚಾರಣೆ ಮೇಲೆ ಪಿಎಫ್ ಐ ವತಿಯಿಂದ ತಮ್ಮನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಾರೆ ಎನ್ನುವ ಬಗ್ಗೆ ದೂರಿನಲ್ಲಿ ಪ್ರಸ್ತಾಪವಾಗಿದೆ.
ಇನ್ನು ಈ ಬಗ್ಗೆ ಶಿವಮೊಗ್ಗದಲ್ಲಿ ಎಸ್ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬೆದರಿಕೆ ಕರೆ ಹಿನ್ನೆಲೆ ದೂರು ನೀಡಿದ್ದಾರೆ. ಕಜಿಕಿಸ್ತಾನದಿಂದ ತಮಗೆ ಬೆದರಿಕೆ ಕರೆ ಬಂದಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ರಾತ್ರಿ ಮತ್ತು ಬೆಳಗ್ಗೆ ಮೊಬೈಲ್ ಗೆ ಹಲವು ಬಾರಿ ಕರೆ ಬಂದ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ. ಸಾಹಿಲ್ ಶೇಖ್ ವಿಚಾರಣೆ ವೇಳೆ ತಮ್ಮನ್ನು ಪಿಎಫ್ ಐ ಹತ್ಯೆ ಮಾಡುವ ಸಂಚು ರೂಪಿಸಿರುವ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಎಲ್ಲದರ ಬಗ್ಗೆಯೂ ತನಿಖೆ ನಡೆಸಲಾಗುವುದು. ತನಿಖೆ ನಡೆಸಿ ಪ್ರಕರಣದ ಕೂಲಂಕುಶ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
Shivamogga: ಜಮೀನು ವಿವಾದ: ಮಹಿಳೆ ಮೇಲೆ ಹಲ್ಲೆ, ಮನೆ ಧ್ವಂಸ
ಕಳೆದ ವರ್ಷ ಆಗಸ್ಟ್ ನಲ್ಲಿ ಕೂಡ ಮಾಜಿ ಸಚಿವ ಈಶ್ವರಪ್ಪ (Eshwarappa) ಅವರಿಗೆ ಬೆದರಿಕೆ ಪತ್ರ ಬಂದಿತತ್ಉ. ‘ನಿನ್ನ ನಾಲಿಗೆ ಕಟ್ ಮಾಡುತ್ತೇನೆ ಹುಷಾರ್’ ಎಂದು ಅನಾಮಧೇಯ ಬೆದರಿಕೆ ಪತ್ರದಲ್ಲಿ ತಿಳಿಸಲಾಗಿತ್ತು. ಶಿವಮೊಗ್ಗದ ಮಲ್ಲೇಶ್ವರ ನಗರದ ಮುಖ್ಯ ರಸ್ತೆಯಲ್ಲಿರುವ ಅವರ ಮನೆಗೆ ಈ ಪತ್ರ ಬಂದಿತ್ತು.
ಕೊಡಗು ಕಾರ್ಮಿಕನ ಮೇಲೆ ಕಾಡಾನೆ ದಾಳಿ, ಮಂಗಳೂರಿನಲ್ಲಿ ರೈಲು ಡಿಕ್ಕಿಯಾಗಿ 17 ಜಾನುವಾರು ಬಲಿ!
2019ರಲ್ಲೂ ಸಹ ಈಶ್ವರಪ್ಪನವರಿಗೆ ಬೆದರಿಕೆ ಕರೆ ಬಂದಿತ್ತು. ಅನಾಮಧೇಯ ವ್ಯಕ್ತಿ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದ. ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ್ದ ಆತ "ಬಿಜೆಪಿ ಸಂಸದ ಸ್ಥಾನಗಳಿಗೆ ಏಕೆ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ? ನಿಮಗೆ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು" ಎಂದು ಜೀವ ಬೆದರಿಕೆ ಹಾಕಿದ್ದಎಂದು ಸ್ವತಃ ಈಶ್ವರಪ್ಪ ಮಾಧ್ಯಮಗಳಿಗೆ ಹೇಳಿದ್ದರು.