Latest Videos

ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ; ಕಾಂಗ್ರೆಸ್ ಸರ್ಕಾರದ ವಿರುದ್ಧ ಈಶ್ವರಪ್ಪ ಗರಂ

By Ravi JanekalFirst Published May 26, 2024, 1:36 PM IST
Highlights

ರಾಜ್ಯ ಸರ್ಕಾರದ ವ್ಯವಸ್ಥೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಚನ್ನಗಿರಿ ಲಾಕಪ್‌ ಡೆತ್ ಪ್ರಕರಣ ಸಂಬಂಧ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಬಾಗಲಕೋಟೆ (ಮೇ.26): ರಾಜ್ಯ ಸರ್ಕಾರದ ವ್ಯವಸ್ಥೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಚನ್ನಗಿರಿ ಲಾಕಪ್‌ ಡೆತ್ ಪ್ರಕರಣ ಸಂಬಂಧ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ಮೃತ ಆದಿಲ್ ತಂದೆಯೇ ಎರಡು ಹೇಳಿಕೆ ನೀಡಿದ್ದಾರೆ. ಒಂದು ಕಡೆ ಲೋ ಬಿಪಿ ಇತ್ತು ಅಂತಾ ಹೇಳಿದ್ರೆ, ಮತ್ತೊಂದು ಕಡೆ ಲಾಕಪ್ ಡೆತ್ ಅಂತಿದ್ದಾರೆ. ರಾಜ್ಯ ಸರ್ಕಾರ ಇನ್ನೂವರೆಗೆ ಪರಿಹಾರ ಕೊಟ್ಟಿಲ್ಲ ಅನ್ನೋದೇ ಆಶ್ಚರ್ಯವಾಗಿದೆ. ಮುಸ್ಲಿಂ ಅಂದೊಡನೇ ಪರಿಹಾರ ಘೋಷಣೆ ಮಾಡೋದು ಕಾಂಗ್ರೆಸ್ ಸರ್ಕಾರ. ಆದರೆ ಯಾಕೋ ಇನ್ನು ಪರಿಹಾರ ಘೊಷಣೆ ಮಾಡಿಲ್ಲ ಎಂದರು.

ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ; ಹೇಳಿದ್ದೇನು?

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹುಬ್ಬಳ್ಳಿ ನೇಹಾ, ಅಂಜಲಿ ಹತ್ಯೆ ಪ್ರಕರಣದಿಂದ ಚನ್ನಗಿರಿ ಪೊಲೀಸ್‌ ಠಾಣೆಗೆ ಕಲ್ಲು ತೂರಾಟದವರೆಗೂ ಗಮನಿಸಿ ನೋಡಿ. ಇವೆಲ್ಲ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿ ಹೇಳಿಕೆಗಳು, ಸಿಎಂ ಸಿದ್ದರಾಮಯ್ಯ ಒಂದು ರೀತಿ ಹೇಳಿಕೆ ನೀಡಿದ್ರೆ, ಗೃಹ ಸಚಿವ ಪರಮೇಶ್ವರ ಒಂದು ಹೇಳಿಕೆ ಕೊಡ್ತಾರೆ. ರಾಜ್ಯದಲ್ಲಿ ಏನೇ ಅನಾಹುತ ಆದ್ರೂ ವೋಟ್ ಬ್ಯಾಂಕ್‌ಗಾಗಿ ಕೊಡುವ ಬೇಜವಾಬ್ದಾರಿತನದ ಹೇಳಿಕೆಗಳನ್ನ ರಾಜ್ಯ ಜನರು ಗಮನಿಸುತ್ತಿದ್ದಾರೆ ಎಂದರು.

News Hour: ಡಿಜೆ ಹಳ್ಳಿ, ಕೆಜಿ ಹಳ್ಳಿ ನೆನಪಿಸಿದ ಚನ್ನಗಿರಿ ಗಲಭೆ , ಪೊಲೀಸರ ಮೇಲೆ ಪುಂಡರ ದಾಳಿ!

ಏನೇ ತೀರ್ಮಾನಕ್ಕೆ ಬರಬೇಕಾದರೂ ತನಿಖೆ ನಂತರ ಬರಬೇಕು. ನೇಹಾ ಪ್ರಕರಣ ಸಿಬಿಐ ತನಿಖೆಗೆ ಕೊಡಬೇಕು. ನೇಹಾ ಪೋಷಕರೇ ಸಿಬಿಐಗೆ ಕೊಡುವಂತೆ ಒತ್ತಾಯಿಸಿದ್ದಾರೆ ಹೀಗಿರುವಾಗ ರಾಜ್ಯ ಸರ್ಕಾರ ಸಿಬಿಐಗೆ ಯಾಕೆ ವಹಿಸುತ್ತಿಲ್ಲ? ಅದು ಕೂಡ ತನಿಖೆ ನಡೆಸುತ್ತಿರಲಿಲ್ಲ. ಹಿಂದೂ ಸಂಘಟನೆಗಳ ತೀವ್ರ ಹೋರಾಟದಿಂದ ಕಾಟಾಚಾರಕ್ಕೆ ಸಿಐಡಿಗೆ ನೀಡಿದೆ. ಆದರೆ ಸಿಐಡಿ ತನಿಖೆ ಏನಾಗುತ್ತೆಂಬುದು ಗೊತ್ತೇ ಇದೆ. ಪೋಷಕರು ಸಹ ಸಿಐಡಿ ತನಿಖೆ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಏಕೆಂದರೆ ಸಿಐಡಿ ರಾಜ್ಯ ಸರ್ಕಾರದ ಕಂಟ್ರೋಲ್‌ನಲ್ಲಿದೆ ಸರ್ಕಾರ ಏನು ಹೇಳಿಕೆ ಕೊಡ್ತದೋ ಅದೇ ಹೇಳಿಕೆಯನ್ನ ಸಿಐಡಿ ಕೊಡುತ್ತೆ. ಇದರಿಂದ ತಪ್ಪಿತಸ್ಥರಿಗೆ ಶಿಕ್ಷೆ, ನೊಂದವರಿಗೆ ನ್ಯಾಯ ದೂರದ ಮಾತು ಎಂದು ಕಿಡಿಕಾರಿದರು.

click me!