ಪಾಕಿಸ್ತಾನ ಪರ ಘೋಷಣೆ ಕೂಗಿದ್ರೂ ಅರೆಸ್ಟ್ ಇಲ್ಲ, 500 ಜನ ದೇಶಭಕ್ತರ ಮೇಲೆ ಕೇಸು, ಸಿಎಂ ಸಿದ್ದರಾಮಯ್ಯ ನೀವು ದೇಶದ್ರೋಹಿಗಳ ಪರ ಇದ್ದೀರಾ?: ಕೆಎಸ್ ಈಶ್ವರಪ್ಪ ಗರಂ

Published : Sep 10, 2025, 12:39 PM IST
KS Eshwarappa

ಸಾರಾಂಶ

ಮದ್ದೂರಿನ ಗಣೇಶ ಮೆರವಣಿಗೆಯ ಮೇಲಿನ ಕಲ್ಲು ತೂರಾಟ ಪೂರ್ವನಿಯೋಜಿತ ಸಂಚು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ. ಮಸೀದಿಗಳಲ್ಲಿ ಮೊದಲೇ ಕಲ್ಲುಗಳನ್ನು ಸಂಗ್ರಹಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಈ ಘಟನೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಯಿತು.

ಶಿವಮೊಗ್ಗ (ಸೆ.10): ಮದ್ದೂರಿನಲ್ಲಿ ನಡೆದ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟದ ಘಟನೆ ಆಕಸ್ಮಿಕ ಅಲ್ಲ, ಅದು ಪೂರ್ವ ನಿಯೋಜಿತ ಸಂಚು. ಮಸೀದಿಗಳಲ್ಲಿ ಮೊದಲೇ ಪ್ಲಾನ್ ಮಾಡಿ ಲೋಡ್‌ಗಟ್ಟಲೆ ಕಲ್ಲನ್ನು ಇಟ್ಟುಕೊಂಡಿದ್ದರು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಶಿವಮೊಗ್ಗದ ರಾಷ್ಟ್ರಭಕ್ತರ ಬಳಗದಿಂದ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಕೆಎಸ್ ಈಶ್ವರಪ್ಪ ಅವರು, ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲುತೂರಾಟ ಮಸೀದಿಯಿಂದಲೇ ನಡೆಸಿದ್ದಾರೆ. ಭದ್ರಾವತಿಯಲ್ಲಿ ಈದ್ ಮಿಲಾದ್ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಒಬ್ಬರು ಕೂಡ ಇದನ್ನೂ ವಿರೋಧ ಮಾಡಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ನೀವು ದೇಶದ್ರೋಹಿಗಳ ಪರ ಇದ್ದೀರಾ?

ಗಣೇಶ ಮೆರವಣಿಗೆ ವೇಳೆ ಮದ್ದೂರಿನಲ್ಲಿ ಲೈಟ್ ಯಾಕೆ ಆಫ್ ಮಾಡಿದ್ರು? ಮಸೀದಿಯೊಳಗೆ ಕಲ್ಲು ಯಾಕೆ ತಂದು ಇಟ್ಟುಕೊಂಡ್ರು? ಇಷ್ಟೆಲ್ಲ ಯೋಜಿಸಿ ಕಲ್ಲು ತೂರಾಟ ನಡೆಸಿದರೂ ಸಿಎಂ ಹೇಳ್ತಾರೆ ಬಿಜೆಪಿಯವರ ಪ್ರಚೋದನೆ ಎಂದು. ಸಿಎಂ ಸಿದ್ದರಾಮಯ್ಯ ಅವರೇ ನೀವು ಯಾರ ಪರವಾಗಿದ್ದೀರಾ? ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿದವರ ಮೇಲೆ ತಕ್ಷಣ ಕ್ರಮ ಜರುಗಿಸಿದ್ದರೆ ಯಾವ ಪ್ರತಿಭಟನೆಯೂ ಆಗುತ್ತಿರಲಿಲ್ಲ. 22 ದೇಶದ್ರೋಹಿಗಳನ್ನು ಬಂಧಿಸಿ, 500 ಜನ ದೇಶಭಕ್ತರ ಮೇಲೆ ಕೇಸು ಹಾಕಿದ್ದೀರಲ್ಲ. ಸಿಎಂ ಈ ಸರ್ಕಾರ ದೇಶದ್ರೋಹಿಗಳ ಪರ ನಿಂತಿರುವುದು ಸ್ಪಷ್ಟವಾಗುತ್ತಿದೆ.

ಮದ್ದೂರಿನಲ್ಲಾದಂತೆ ಸಾಗರದ ಗಣಪತಿ ವಿಸರ್ಜನೆ ವೇಳೆಯೂ ಅಹಿತಕರ ಘಟನೆ ನಡೆದಿದೆ. ದರ್ಮಸ್ಥಳದ ಮಂಜುನಾಥನ ಮೇಲೆ ಕಪ್ಪು ಚುಕ್ಕೆ ಹಾಕುವ ಪ್ರಯತ್ನ ನಡೆಯಿತು. ಆದರೆ ಹಿಂದೂಗಳು ಧರ್ಮಸ್ಥಳ ಮತ್ತು ವೀರೇಂದ್ರ ಹೆಗಡೆಯವರ ಮೇಲೆ ಅಪಪ್ರಚಾರ ನಡೆಸಲು ಬಿಡೋಲ್ಲ ಎಂದು ಹಿಂದೂ ಸಮಾಜ ಜಾಗೃತವಾಗಿದೆ. ಬುರುಡೆ ಅನಾಮಿಕನನ್ನು ಎಡಪಂಥಿಯರು, ಕಮ್ಯುನಿಷ್ಟರು ಎತ್ತಿ ಕಟ್ಟಿದ್ದಾರೆ ಅವನ್ನನ್ನು ಅರೆಸ್ಟ್ ಮಾಡಿ ಎಂದು ಮೊದಲೇ ಹೇಳಿದ್ದೆ. ಯಾರೋ ಹೇಳಿ ಕೊಟ್ಟಿದ್ದನ್ನು ಹೇಳಿದೆ ಎಂದು ಅವನು ಬಾಯಿಬಿಟ್ಟಿದ್ದಾನೆ. ಹಿಂದೂ ಧರ್ಮದ ಪುಣ್ಯಕ್ಷೇತ್ರದ ಬಗ್ಗೆ ಕೈ ಹಾಕಿದರೆ ಪ್ರಾಣ ಹೋದರೂ ಬಿಡೋಲ್ಲ ಅದನ್ನು ಉಳಿಸಿಕೊಳ್ತೇವೆ. ಧರ್ಮವನ್ನು ಉಳಿಸುತ್ತೇವೆ ಎಂದು ಎಲ್ಲ ಸಾಧು ಸಂತರೂ ತೀರ್ಮಾನ ಮಾಡಿದ್ದಾರೆ.

ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂರು ತಂಡಗಳನ್ನು ರಚನೆ ಮಾಡಿದ್ದೇನೆ. ಪ್ರಕರಣ ಗಂಭೀರವಾಗಿ ತೆಗೆದು ಕೊಂಡಿದ್ದೇನೆ ಎಂದು ಹೇಳಿದ ಎಸ್ ಪಿ ಅವರಿಗೆ ಶಭಾಷ್ ಹೇಳುತ್ತೇನೆ. ಆದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳನ್ನು ಇದುವರೆಗೂ ಕೂಡ ಅರೆಸ್ಟ್ ಮಾಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳಿಂದಲೂ ಹೇಳಿಕೆ ಬಂದಿಲ್ಲ. ಮೂಲ ಕಾಂಗ್ರೆಸ್ ಗೆ ಈಗಿರುವ ನಾಟಕೀಯ ಕಾಂಗ್ರೆಸ್ ಡೂಪ್ಲಿಕೇಟ್ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು.

ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತೀಯ? ಹಿಂದೂವಾಗಿ ಸ್ಪರ್ಧೆ ಮಾಡ್ತಿಯಾ? ಮುಸ್ಲಿಮನಾಗಿ ಸ್ಪರ್ಧೆ ಮಾಡ್ತೀಯಾ? ನಿನಗೆ ತಾಕತ್ತಿದ್ದರೆ ಅಭ್ಯರ್ಥಿಯಾಗಿ ಈಗಲೇ ಘೋಷಣೆ ಮಾದು ಎಂದು ಶಾಸಕ ಸಂಗಮೇಶ ವಿರುದ್ಧ ವಾಗ್ದಾಳಿ ನಡೆಸಿದರು.

ಹೇಗಿದ್ರು ಮುಸಲ್ಮಾನರು ಕಾಂಗ್ರೆಸ್ ಗೆ ವೋಟ್ ಕೊಡುತ್ತಾರೆ. ಹೀಗಾಗಿ ಹಿಂದುಗಳ ಜಾತಿ ಜಾತಿಯನ್ನು ಹೊಡೆದು ಸಂಗಮೇಶ್ವರ ನಾಯಕರು ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಂಗಮುಲ್ಲಾ ಖಾನ್ ಎಂದು ಕಾಂಗ್ರೆಸ್ ಅಭ್ಯರ್ಥಿ ಆಗಲಿ. ಭದ್ರಾವತಿಯ ಹಿಂದುಗಳು ನೀವು ಹಿಂದೂ ಎಂದು ಮತ ನೀಡಿದ್ದಾರೆ ಹೊರತ ಮುಸಲ್ಮಾನ ಎಂದು ಮತ ನೀಡಿಲ್ಲ. ಕಾಂಗ್ರೆಸ್ ಪಕ್ಷದ ಈ ನಾಟಕೀಯ ಮನಸ್ಥಿತಿಯನ್ನು ಇಡೀ ರಾಜ್ಯ ನೋಡುತ್ತಿದೆ ಉತ್ತರ ಪ್ರದೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರೆ ಯೋಗಿ ಆದಿತ್ಯನಾಥ್ ಎಲ್ಲರನ್ನೂ ಎನ್‌ಕೌಂಟರ್ ಮಾಡಿಸುತ್ತಿದ್ದರು. ಆದರೆ ಈ ಸರ್ಕಾರ ದೇಶದ್ರೋಹಿಗಳ ಪರವಾಗಿದೆ ಎಂದರೆ ರಾಜ್ಯ ಮತ್ತು ದೇಶಕ್ಕೆ ಇವರೆಷ್ಟು ಅಪಾಯಕಾರಿ ಎಂಬುದು ಅರಿಯಬೇಕು ಎಂದರು.

ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ಈ ಮುಸ್ಲಿಮರ ಕೇಸ್‌ಗಳನ್ನ ಮುಸ್ಲಿಮ ಸರ್ಕಾರ ವಾಪಸ್ ಪಡೆದಿದೆ. ರಕ್ಷಣೆ ಕೊಡುವ ಪೊಲೀಸ್ ಇಲಾಖೆಗೆ ರಕ್ಷಣೆ ಇಲ್ಲವಾ ಎನ್ನುವ ಪರಿಸ್ಥಿತಿ ಕರ್ನಾಟಕದಲ್ಲಿದೆ. ನಾವು ಕೊನೆ ಉಸಿರು ಇರುವರೆಗೂ ಹಿಂದೂ ಧರ್ಮವನ್ನು ಭಾರತಾಂಬೆಯನ್ನು ಉಳಿಸುತ್ತೇವೆ. ಯಾವುದೇ ಕಾರಣಕ್ಕೂ ಮತ ಮತಾಂತರಕ್ಕೆ ಅವಕಾಶ ಕೊಡಲ್ಲ, ದೇಶದ್ರೋಹಿಗಳಿಗೆ ಬೆಂಬಲ ಕೊಡಲ್ಲ ಎಂದು ಕಾಂಗ್ರೆಸ್ಸಿಗರು ಹೇಳಬೇಕು ಮುಸ್ಲಿಂಮರ ಬಗ್ಗೆ ಕ್ರಮ ತೆಗೆದುಕೊಂಡರೆ ಕಾಂಗ್ರೆಸ್ ಸರ್ಕಾರ ತೊಂದ್ರೆ ಕೊಡುತ್ತೆ ಎಂದು ಪೊಲೀಸರು ಕ್ರಮ ಜರುಗಿಸಲು ಹೆದರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್