Harsha Murder Case: ಯುವಕನ ಕೊಲೆಗೆ ಸಚಿವ ಈಶ್ವರಪ್ಪ ಪರೋಕ್ಷ ಕಾರಣ: ಹರಿಪ್ರಸಾದ್‌

Kannadaprabha News   | Asianet News
Published : Feb 22, 2022, 06:31 AM IST
Harsha Murder Case:  ಯುವಕನ ಕೊಲೆಗೆ ಸಚಿವ ಈಶ್ವರಪ್ಪ ಪರೋಕ್ಷ ಕಾರಣ: ಹರಿಪ್ರಸಾದ್‌

ಸಾರಾಂಶ

*  ‘ಅದಕ್ಕೇ ಮುಸ್ಲಿಂ ಗೂಂಡಾ ಎಂಬ ಆರೋಪ ಮಾಡಿದ್ದಾರೆ’ *  ಈಶ್ವರಪ್ಪಗೆ ಎಲ್ಲ ಬಗೆಯ ಮಾಹಿತಿ ಮೊದಲೇ ಗೊತ್ತಿತ್ತು  *  ಪೊಲೀಸ್‌ ತನಿಖೆ ನಡೆಯದೇ ಈಶ್ವರಪ್ಪ ಈ ರೀತಿ ಹೇಳಿಕೆ ನೀಡಿದ್ದಾರೆ 

ಬೆಂಗಳೂರು(ಫೆ.23):  ರಾಷ್ಟ್ರಧ್ವಜ ಅಪಮಾನ ಪ್ರಕರಣದಲ್ಲಿ ರಾಜೀನಾಮೆಯಿಂದ ತಪ್ಪಿಸಿಕೊಳ್ಳಲು ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಅವರು ಶಿವಮೊಗ್ಗದಲ್ಲಿ ಯುವಕನ ಕೊಲೆಗೆ ಪರೋಕ್ಷ ಕಾರಣರಾಗಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌(BK Hariprasad) ಆರೋಪಿಸಿದ್ದಾರೆ.

ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌(Congress) ಸದಸ್ಯರು ಪ್ರತಿಭಟನೆ ನಡೆಸುವ ವೇಳೆ ಮಾತನಾಡಿದ ಅವರು, ಯುವಕನ ಕೊಲೆ ಸಂಬಂಧ ಪೊಲೀಸ್‌ ತನಿಖೆ ನಡೆಯುವ ಮುನ್ನವೇ ಈಶ್ವರಪ್ಪ ಅವರು, ಮುಸ್ಲಿಂ(Muslim) ಗೂಂಡಾಗಳು ಕೊಲೆಗೆ ಕಾರಣ ಎಂದು ಹೇಳಿರುವುದನ್ನು ನೋಡಿದರೆ, ಅವರಿಗೆ ಎಲ್ಲ ಬಗೆಯ ಮಾಹಿತಿ ಮೊದಲೇ ಗೊತ್ತಿತ್ತು ಎಂದು ಕಾಣುತ್ತದೆ. ಘಟನೆ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕಿತ್ತು, ಘಟನೆ ಬಗ್ಗೆ ಪೊಲೀಸ್‌ ತನಿಖೆ ನಡೆಯದೇ ಈಶ್ವರಪ್ಪ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ, ಅವರಿಗೆ ಬಹುಶಃ ಸಂಪೂರ್ಣ ಮಾಹಿತಿ ಇತ್ತೆಂದು ಕಾಣುತ್ತದೆ ಎಂದು ಹೇಳಿದರು.

News Hour ಹರ್ಷಾ ಕೊಲೆ ಪ್ರಕರಣ ಸಂಬಂಧ 9 ಮಂದಿ ವಶಕ್ಕೆ, ರಾಷ್ಟ್ರಭಕ್ತನ ಹತ್ಯೆ ನುಂಗಲಾರದ ನೋವು ಎಂದ ಈಶ್ವರಪ್ಪ!

ಹರಿಪ್ರಸಾದ್‌ ಅವರ ಈ ಮಾತಿನಿಂದ ಸಿಟ್ಟಿಗೆದ್ದ ಬಿಜೆಪಿ(BJP) ಸದಸ್ಯರು ಒಟ್ಟಿಗೆ ಎದ್ದು ಆಕ್ರೋಶ ವ್ಯಕ್ತಪಡಿಸತೊಡಗಿದರು. ಆಡಿರುವ ಮಾತನ್ನು ಕಡತದಿಂದ ತೆಗೆಯಬೇಕು ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಆದರೆ ಗದ್ದಲದ ವಾತಾವರಣದಿಂದ ಯಾರು ಏನು ಹೇಳುತ್ತಿದ್ದಾರೆಂಬುದು ಕೇಳಲಿಲ್ಲ. ನಂತರ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು.

ಹರ್ಷ ಕೊಲೆ ಖಂಡಿಸಿದ ಸಚಿವ ರಾಜೀವ್ ಚಂದ್ರಶೇಕರ್, ತುರ್ತು ತನಿಖೆಗೆ ಒತ್ತಾಯ!

ಬೆಂಗಳೂರು: ಕರ್ನಾಟಕ(Karnataka) ಸೇರಿದಂತೆ ಭಾರತದಲ್ಲಿ ಇದೀಗ ಶಿವಮೊಗ್ಗದಲ್ಲಿ(Shivamogga) ನಡೆದ ಹರ್ಷಾ ಕೊಲೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ನಾಯಕರು, ಬಿಜೆಪಿ ನಾಯಕರು, ಸಚಿವರು ಕೊಲೆ ಖಂಡಿಸಿದ್ದಾರೆ. ಇದೇ ವೇಳೆ ಕೊಲೆ ಹಿಂದಿನ ದುಷ್ಟರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಇದೀಗ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ಹರ್ಷಾ ಕೊಲೆ(Harsha Murder) ಖಂಡಿಸಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಅಮಾನುಷ ಶಕ್ತಿಗಳನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ 26ರ ಹರೆಯದ ಬಜರಂಗದಳದ(Bajarangdal) ಯುವ ಸದಸ್ಯ ಹರ್ಷಾ ಯುವಕನ ಕೊಲೆ ಖಂಡನಾರ್ಹ. ಹರ್ಷ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಕೊಲೆ ಕೃತ್ಯದ ಹಿಂದಿರುವ ಅಮಾನುಷ ಶಕ್ತಿಗಳನ್ನು ತಕ್ಷಣವೇ ಬಂಧಿಸಿ, ಕರ್ನಾಟಕ ಸರ್ಕಾರ ನ್ಯಾಯ ಒದಗಿಸಬೇಕು ಎಂದು ರಾಜೀವ್ ಚಂದ್ರಶೇಕರ್ ಟ್ವೀಟ್ ಮಾಡಿದ್ದಾರೆ.

Harsha Murder case ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೃಹ ಸಚಿವರ ತಲೆದಂಡಕ್ಕೆ ಸಿದ್ದರಾಮಯ್ಯ ಆಗ್ರಹ!

ಕೊಲೆ ಘಟನೆಯಿಂದ ಶಿವಮೊಗ್ಗದಲ್ಲಿ ಗಲಭೆ, ಹಿಂಸಾಚಾರ ಘಟನೆಗಳು ನಡೆದಿದೆ. ಹೀಗಾಗಿ ರಾಜೀವ್ ಚಂದ್ರಶೇಕರ್ ಶಾಂತಿ ಪಾಲನೆಗೆ ಆಗ್ರಹಿಸಿದ್ದಾರೆ. ಎಲ್ಲರೂ ತಾಳ್ಮೆಯಿಂದ ಇರಬೇಕು. ಶಾಂತಿ ಕಾಪಾಡುವ ಮೂಲಕ ಸರ್ಕಾರ ತನಿಖೆಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಲು ಸಹಕರಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಹರ್ಷಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಮೂವರನ್ನು ಬಂಧಿಸಲಾಗಿದೆ. ತನಿಖೆ ಚುರುಗೊಳಿಸಲಾಗಿದೆ. ತನಿಖೆ ಪ್ರಾಥಮಿಕ ಹಂತದಲ್ಲಿರುವ ಕಾರಣ ಬಂಧಿಸಿರುವ ಆರೋಪಿಗಳ ಮಾಹಿತಿ ಸೇರಿದಂತೆ ಪ್ರಕರಣದ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!