ನಿಖಿಲ್-ಡಿಕೆಶಿ ಸಪೋರ್ಟರ್ಸ್ ಗಲಾಟೆ : 'ಹುಡುಗ್ರು ನಾವ್ ತಲೆ ಕೆಡಿಸಿಕೊಳ್ಳೋಕಾಗುತ್ತಾ'

By Suvarna NewsFirst Published Mar 26, 2021, 1:11 PM IST
Highlights

ನಿಖಿಲ್ ಕುಮಾರಸ್ವಾಮಿ ಹಾಗೂ ಡಿಕೆಶಿ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, ಹುಡುಗ್ರು ನಾವ್ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲು ಆಗುತ್ತಾ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. 

ಬೆಂಗಳೂರು (ಮಾ.26): ನಾನು ಭಾನುವಾರ ಸಂಜೆ ಬೆಳಗಾವಿಗೆ ಹೋಗುತ್ತಿದ್ದೇನೆ. ಸಿಎಲ್‌ಪಿ ನಾಯಕರು ಅಲ್ಲಿಗೆ ಆಗಮಿಸಲಿದ್ದಾರೆ. ಬಳಿಕ ಉಪ ಚುನಾವಣಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಹೇಳಿದರು. 

ಬೆಂಗಳೂರಿನಲ್ಲಿಂದು ಮಾತನಾಡಿದ ಡಿಕೆ ಶಿವಕುಮಾರ್ ಮಸ್ಕಿ, ಬಸವ ಕಲ್ಯಾಣ ಕ್ಷೇತ್ರಗಳಲ್ಲಿ ನಮ್ಮ ನಾಯಕರ ಜೊತೆ ಗೂಡಿ ಉಪ ಚುನಾವಣೆಗೆ ಪ್ರಚಾರ ನಡೆಸುವುದಾಗಿ ಹೇಳಿದರು. 

ಗಲಾಟೆ ವಿಚಾರ ಪ್ರಸ್ತಾಪ : ಇನ್ನು ಇದೇ ವೇಳೆ  ಕನಕಪುರದ ಮರಳವಾಡಿ ಯಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಡಿಕೆಶಿ ಬೆಂಬಲಿಗರ ಗಲಾಟೆ ವಿಚಾರದ ಕುರಿತು ಮಾತನಾಡಿದ ಡಿಕೆಶಿ  ಹುಡುಗರು ಮಾತಾಡುತ್ತಾರೆ ಎಂದು ನಾವು ತಲೆ ಕೆಡಿಸಿಕೊಳ್ಳುವುದಕ್ಕೆ ಆಗುತ್ತಾ. ನಾನು ಏನ್ ಮಾಡಿದ್ದೇನೆ ಅಂತ ಜನರಿಗೆ ಗೊತ್ತಿದೆ. ಸತ್ಯಕ್ಕೂ ಸುಳ್ಳಿಗೂ  ವ್ಯತ್ಯಾಸಗಳು ಇವೆ.  ಕಿವಿಯಲ್ಲಿ ಕೇಳಿರುವುದು ಸುಳ್ಳು ಇರಬಹುದು, ಕಣ್ಣಲ್ಲಿ ಕಂಡಿದ್ದು ಸತ್ಯ ಇರುತ್ತೆ ಎಂದರು‌.

'ಸಿಡಿ ಪ್ರಕರಣದ ಮಹಾನ್ ನಾಯಕ ಯಾರು : ಡಿಕೆಶಿ ಯಾಕ್ ಹೀಗಂದ್ರು..?' .

ನಾನ್ ಏನ್ ಕೆಲಸ ಮಾಡಿದ್ದೀನಿ ಅಂತ ತಾಲೂಕಿನ ಜನರಿಗೆ ಗೊತ್ತು.  ಜನ ನೋಡಿದ್ದಾರೆ ಹುಡುಗರ  ಬಗ್ಗೆ ನಾನ್ ಏಕೆ ಮಾತಾಡಲಿ ಎಂದು ಡಿಕೆಶಿ ಹೇಳಿದರು. 

ರೈತರಿಗೆ ನಮ್ಮ ಬೆಂಬಲ :  ಇಂದು ರೈತರು ಕರೆ ನೀಡಿರುವ ಬಂದ್‌ ಬಗ್ಗಯೂ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು ಖಂಡಿತ  ರೈತರಿಗೆ ನಮ್ಮ ಬೆಂಬಲ ಇದೆ. ನಿನ್ನೆ  ರೈತ ಮುಖಂಡರ ಮೇಲೆ ಕೇಸ್ ಹಾಕಿದ್ದಾರೆ.  ಕರೋನ ಸಂದರ್ಭದಲ್ಲಿ ಬಿಜೆಪಿಯವರು ಮತೀಯ ಹೇಳಿಗಳನ್ನು ನೀಡಿದರೂ ಒಂದು ಕೇಸ್ ಹಾಕಲಿಲ್ಲ. ಈಗ ನೋಡಿದರೆ ರಾಕೇಶ್ ಠಿಕಾಯತ್ ಮೇಲೆ ಕೇಸ್ ಹಾಕಿಸಿದ್ದಾರೆ.  ಸರ್ಕಾರಕ್ಕೆ ಕಾಮನ್ ಸೆನ್ಸ್ ಇರಬೇಕು. ಪ್ರಜಾಪ್ರಭುತ್ವದಲ್ಲಿ ಹೋರಾಟಗಾರರನ್ನು ಕುಗ್ಗಿಸುವ ಕೆಲಸ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದರು. 

click me!