ಗಣಿ ಮತ್ತು ಖನಿಜ ಕಾಯ್ದೆ ಅಂಗೀಕಾರ : ಉದ್ಯೋಗ ಹೆಚ್ಚಳ

By Suvarna NewsFirst Published Mar 26, 2021, 12:09 PM IST
Highlights

ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆಯಾದ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಅಂಗೀಕಾರವಾಗಿದ್ದು,  ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು  ಕೃತಜ್ಞತೆ ಸಲ್ಲಿಸಿದ್ದಾರೆ. 

ಬೆಂಗಳೂರು (ಮಾ.26):  ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ತಿದ್ದುಪಡಿ ತಂದಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆ ಎಂದು   ಗಣಿ ಮತ್ತು ಖನಿಜಗಳ ಕಾಯ್ದೆ ಅಂಗೀಕಾರದ ಬಗ್ಗೆ  ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.  

ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆಯಾದ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಅಂಗೀಕಾರವಾಗಿದ್ದು,  ಈ ಕಾಯ್ದೆ ಅಂಗೀಕಾರಕ್ಕೆ ವಿಶೇಷ  ಆಸಕ್ತಿ ವಹಿಸಿದ ಪ್ರಧಾನ ಮಂತ್ರಿ ನರೇಂದ್ರಮೋದಿ ಹಾಗೂ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ  ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು  ಕೃತಜ್ಞತೆ ಸಲ್ಲಿಸಿದ್ದಾರೆ. 

ಖನಿಜ ಕ್ಷೇತ್ರದಲ್ಲಿ ನೀತಿ ಸುಧಾರಣೆಗಳು  ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಗಣಿಗಾರಿಕೆ ಕೃಷಿಯ ನಂತರದ ಸ್ಥಾನದಲ್ಲಿದ್ದು, ಖನಿಜ ಸಮೃದ್ಧ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಇದು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಶೀಘ್ರ ಹೊಸ ಮೈನಿಂಗ್‌ ಯೋಜನೆ: ಸಚಿವ ಮುರುಗೇಶ ನಿರಾಣಿ

ಸಾಂಪ್ರದಾಯಿಕವಾಗಿ, ಗಣಿಗಾರಿಕೆಯಲ್ಲಿ ಶೇ. 1 ಬೆಳವಣಿಗೆಯು ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯ ದರದಲ್ಲಿ ಶೇ. 1.2-1.4 ಹೆಚ್ಚಳಕ್ಕೆ ಕಾರಣವಾಗಿ, ನೇರ ಉದ್ಯೋಗವು 10 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದರು.  

ದೇಶದ  ಜಿಡಿಪಿಯಲ್ಲಿ ಖನಿಜ ಕ್ಷೇತ್ರದ ಕೊಡುಗೆ ತುಂಬಾ ಕಡಿಮೆಯಾಗಿದ್ದು, (ಜಿಡಿಪಿಯ 1.75%), ನಮ್ಮ ರಾಷ್ಟ್ರೀಯ ಖನಿಜ ನೀತಿ 7 ವರ್ಷಗಳಲ್ಲಿ ಖನಿಜಗಳ ಉತ್ಪಾದನೆಯನ್ನು ಶೇ. 200ರಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

ಭವಿಷ್ಯದಲ್ಲಿ ಇಂತಹ ಸನ್ನಿವೇಶಗಳನ್ನು ತಪ್ಪಿಸುವ ಸಲುವಾಗಿ, ಕಾಯಿದೆಯ ಸೆಕ್ಷನ್ 8 ಬಿ ಅಡಿಯಲ್ಲಿ ಅನುಮತಿಗಳು ಇತ್ಯಾದಿಗಳನ್ನು ವರ್ಗಾವಣೆ ಮಾಡುವ ಸೌಲಭ್ಯವನ್ನು ವಿಸ್ತರಿಸಿದರೆ ಹರಾಜು ಮಾಡಿದ ಗಣಿಗಳಿಂದ ಉತ್ಪಾದನೆಗೆ ಅನುಕೂಲವಾಗಲಿದೆ ಎಂದು ಸಚಿವ ನಿರಾಣಿ ಹೇಳಿದ್ದಾರೆ.

click me!