ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಪ್ರಬುದ್ಧ ಹೇಳಿಕೆ| ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಪದ ಬಳಿಸಿದ ಗುಂಡೂರಾವ್| ಯಡಿಯೂರಪ್ಪ ವಾಸ್ತವ್ಯದ ಕುರಿತು ಪ್ರಶ್ನೆ ಕೇಳಿದ ದಿನೇಶ್ ಗುಂಡೂರಾವ್| 'ಸಿಎಂ ವಾಸ್ತವ್ಯ ಕೇಳಿದರೆ ನಾವು ನಿಮ್ಮ ವಾಸ್ತವ್ಯದ ಕುರಿತು ಪ್ರಶ್ನಿಸುತ್ತೇವೆ'
ಕೊಪ್ಪಳ(ಡಿ.10): ಕುಮಾರಸ್ವಾಮಿ ಎಲ್ಲಿ ಮಲಗ್ತಾರೆ ಅನ್ನೋದು ಖಾಸಗಿ ಸಂಗತಿಯಾಗಿದ್ದು, ಈ ವಿಷಯವನ್ನು ಯಡಿಯೂರಪ್ಪ ಮಾತನಾಡುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ವೇಳೆ ಯಡಿಯೂರಪ್ಪ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ದಿನೇಶ್ ಗುಂಡೂರಾವ್, ಕುಮಾರಸ್ವಾಮಿ ವಾಸ್ತವ್ಯದ ಕುರಿತು ಮಾತನಾಡೋ ಯಡಿಯೂರಪ್ಪ ಅವರ ವಾಸ್ತವ್ಯದ ಕುರಿತು ಏಕೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಸತ್ಯ ಹರಿಶ್ಚಂದ್ರರಾ? ಪ್ರಾಮಾಣಿಕರಾ? ಅವರ ಕಾಲದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ ಗುಂಡೂರಾವ್, ಸಿಎಂ ಕಮಾರಸ್ವಾಮಿ ವಾಸ್ತವ್ಯದ ಕುರಿತು ಯಡಿಯೂರಪ್ಪ ಪ್ರಶ್ನೆ ಕೇಳಿದರೆ ನಾವು ಅವರ ವಾಸ್ತವ್ಯದ ಕುರಿತು ಪ್ರಶ್ನಿಸಬೇಕಾಗುತ್ತದೆ ಎಂದು ಹರಿಹಾಯ್ದರು.
ಈ ವೇಳೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕೆಂದು ಸಲಹೆ ನೀಡಿದ ಗುಂಡೂರಾವ್, ಪ್ರಸಕ್ತ ಸಮ್ಮಿಶ್ರ ಸರ್ಕಾರ ೫ ವರ್ಷಗಳ ಕಾಲ ಅಧಿಕಾರ ನಡೆಸಲಿದೆ ಈ ಕುರಿತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವ ಅನುಮಾನವನ್ನೂ ಇಟ್ಟುಕೊಳ್ಳಬಾರದು ಎಂದು ಭರವಸೆ ನೀಡಿದರು.