'ಸ್ಟ್ರಾಂಗ್ ಕೇಸ್ ಇದ್ರು ಅರೆಸ್ಟ್ ಆಗಿಲ್ಲ : ಪೊಲೀಸ್‌ಗೆ ಬೆದರಿಕೆ'

By Suvarna News  |  First Published Mar 28, 2021, 4:01 PM IST


 ಪೊಲಿಟಿಕಲ್ ಷಡ್ಯಂತ್ರ ಬಳಸಿ ಯುವತಿ ಕುಟುಂಬಕ್ಕೆ ಬೆದರಿಕೆ ಹಾಕಲಾಗುತ್ತಿದೆ . ಸ್ಟ್ರಾಂಗ್ ಕೇಸ್ ಇದ್ದರೂ ತಪ್ಪು ಮಾಡಿದವರ ಬಂಧನವಾಗುತ್ತಿಲ್ಲ ಎಂದು ಕೈ ಮುಖಂಡರು ಆರೋಪಿಸಿದ್ದಾರೆ. 


ಬೆಂಗಳೂರು (ಮಾ.28):  ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಜಾರಕಿಹೊಳಿಯವರನ್ನು ಈ ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿಂದು   ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖಂಡರು ಯುವತಿ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದರು.  ಪೊಲಿಟಿಕಲ್ ಷಡ್ಯಂತ್ರ ಬಳಸಿ ಯುವತಿ ಕುಟುಂಬಕ್ಕೆ ಬೆದರಿಕೆ ಹಾಕಲಾಗುತ್ತಿದೆ ಎಂದು ಕೈ  ಮುಖಂಡ ಸಲೀಂ ಅಹಮದ್ ಆರೋಪಿಸಿದರು.  

Tap to resize

Latest Videos

ಇಂದು ಹೋಳಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು,  ಜೊತೆಗೆ ಕಾಮನ ದಹನ ಮಾಡಿದ ದಿನವೂ ಹೌದು. ಶಿವ ಕಾಮನನ್ನ ಸುಟ್ಟ ದಿನ ಇದು. ಇನ್ನೊಂದೆಡೆ ಮರಿಯಾದ ಪುರುಷೋತ್ತಮನ ದೇವಸ್ಥಾನ ಕಟ್ಟುತ್ತಿದ್ದಾರೆ.  ಆದರೆ ರಾಮನ ಆದರ್ಶ ಕಾಣಿಸುತ್ತಿಲ್ಲ. ರಾವಣನ ವರ್ತನೆ ಕಾಣಿಸ್ತಿದೆ ಎಂದು ಉಗ್ರಪ್ಪ ಆರೋಪಿಸಿದರು. 

ಹೆಣ್ಣಿನ ಮೇಲೆ ಆದ ದೌರ್ಜನ್ಯ ಆದ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಬೇಕು ಅನ್ನೋದಕ್ಕೆ ಸ್ಪಷ್ಟವಾದ ಕಾನೂನಿದೆ. ನನಗೆ ಓರ್ವ ವಕೀಲನಾಗಿ ಈಗಲೂ ಅರ್ಥವಾಗುತ್ತಿಲ್ಲ.  ಪ್ರಕರಣ ಬೆಳಕಿಗೆ ಬಂದು 25 -  26ದಿನ ಆಗುತ್ತಿದೆ. ಆ ಹೆಣ್ಣು ಮಗಳು ಪ್ರತಿನಿತ್ಯ ರಕ್ಷಣೆ ಕೊಡಿಸೋಕೆ ಕೇಳಿಕೊಳ್ತಿದ್ದಾಳೆ.  ಈ ರಾಜ್ಯದಲ್ಲಿ ಕಾನೂನು ಪರಿಪಾಲನೆ ಆಗುತ್ತಿದೆಯಾ .  ದಿನೇಶ್ ಕಲ್ಲಳ್ಳಿ ನೀಡಿದ ದೂರಿಗೆ ಎಫ್ಐಆರ್ ಆಗುತ್ತಿಲ್ಲ. ಯಾರ ಮೇಲೆ ಕೇಸ್ ಆಗಿದೆ 376 ಕೇಸ್ ಆಗಿದೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದರು.

ಆದ್ರೆ ಸಂತ್ರಸ್ಥ ಹೆಣ್ಣುಮಗಳ ಪೋಷಕರನ್ನ ಕರೆದು ಇಂಟಾರಾಗೇಟ್ ಮಾಡಿ ನಂತರ ಮಾಧ್ಯಮದ ಹೇಳಿಕೆ ಕೊಡುತ್ತಾರೆ. 376 ಅಡಿ ಕೇಸ್ ರಿಜಿಸ್ಟ್ರೇಷನ್ ಆದರೆ ಸಾಮಾನ್ಯ ವ್ಯಕ್ತಿಯಾಗಿದ್ದರೆ ಏನ್ ಮಾಡುತ್ತಿದ್ರಿ.  ಆ ವ್ಯಕ್ತಿ ಹೇಳ್ತಾರೆ ನಾನೂ ಯಾವುದೇ ಬೇಲ್ ಪಡೆಯೋದಿಲ್ಲ ಅಂತ ಅವರ ವರ್ತನೆ ಪೊಲೀಸರಿಗೆ ಬೆದರಿಕೆ ಒಡ್ಡಿದಂತಿದೆ ಎಂದರು. 

ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ : ಹೊಸ ಬಾಂಬ್ ...

 ಇನ್ನು  ಬ್ರಿಜೇಶ್ ಕಾಳಪ್ಪ ಮಾತನಾಡಿ ಹೋಳಿ ಹಬ್ಬದಂದು ಬಣ್ಣದಾಟದ ಬದಲು ಕೆಸರೆರಚಾಟ ನಡೆಯುತ್ತಿದೆ. ಈ ಒಂದು ಆರೋಪಕ್ಕೆ ಒಳಗಾಗುವ ವ್ಯಕ್ತಿಗೆ ಸಜೆ ಆಗೋದು ಸರ್ವೇ ಸಾಮಾನ್ಯ. ಆದರೆ ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಆಗುತ್ತಿಲ್ಲ. ಸಂತ್ರಸ್ತೆಯ ಹೇಳಿಕೆ ಪಡೆದು ಆರೋಪಿಯನ್ನು ಬಂಧಿಸಲೇಬೇಕು. ಸಂತ್ರಸ್ತೆಯದ್ದು ತಪ್ಪಿಲ್ಲ‌ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದರು.
 
ಕೆಪಿಸಿಸಿ ವಕ್ತಾರ ದಿವಾಕರ್ ಮಾತನಾಡಿ  ತನಿಖೆಯಲ್ಲಿ ರಾಜಕೀಯ ಮಧ್ಯೆ ಪ್ರವೇಶ ಆಗುತ್ತಿದೆ. ರಾಜಕೀಯ ಹಸ್ತಕ್ಷೇಪ ಆಗುತ್ತಿದ್ದರೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲ್ಲ.  376 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಓಪನ್ ಆಗಿ ಪ್ರೆಸ್‌ಮೀಟ್ ಮಾಡುತ್ತಿದ್ದಾರೆ. ಹಿಂದೆ ಗೃಹ ಸಚಿವರಾಗಿದ್ದ ಆರ್ ಎಲ್ ಜಾಲಪ್ಪನವರೇ ಅಪ್‌ಸ್ಕಾಂಡ್ ಆಗಿದ್ದರು.  ಸಾಮಾನ್ಯ ಡಿಜೆ ಹಳ್ಳಿ ಪ್ರಕರಣ ಆದಾಗ ಯಾವ ರೀತಿ ತನಿಖೆ ಮಾಡಿದ್ರೀ, ಬೇರೆಯವರ ಮೇಲೆ ಎಫ್‌ಐಆರ್ ಆದಾಗ ಯಾವ ರೀತಿ ನಡೆದುಕೊಂಡಿದ್ರಿ ಎಂದು ಪ್ರಶ್ನೆ ಮಾಡಿದರು. 

click me!