
ಬೆಂಗಳೂರು(ಮಾ.28): ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಈ ಕೂಡಲೇ ರಮೇಶ್ ಜಾರಕಿಹೊಳಿ ಅವರನ್ನ ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಸಂತ್ರಸ್ತ ಯುವತಿ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ. ಪೊಲಿಟಿಕಲ್ ಷಡ್ಯಂತ್ರ ಬಳಸಿ ಯುವತಿಯ ಕುಟುಂಬಕ್ಕೆ ಬೆದರಿಕೆ ಹಾಕಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದ್ದಾರೆ.
ಇಂದು(ಭಾನುವಾರ) ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಉಗ್ರಪ್ಪ ಅವರು, ಇಂದು ಹೋಳಿ ಹಬ್ಬ ಜೊತೆಗೆ ಕಾಮನ ದಹನ ಮಾಡಿದ ದಿನವೂ ಹೌದು. ಶಿವ ಕಾಮನನ್ನ ಸುಟ್ಟ ದಿನವಾಗಿದೆ. ಇನ್ನೊಂದೆಡೆ ಮರಿಯಾದ ಪುರುಷೋತ್ತಮನ ದೇವಸ್ಥಾನ ಕಟ್ಟುತ್ತಿದ್ದಾರೆ. ಆದ್ರೆ ರಾಮನ ಆದರ್ಶ ಕಾಣಿಸ್ತಿಲ್ಲ, ರಾವಣನ ವರ್ತನೆ ಕಾಣಿಸ್ತಿದೆ. ಹೆಣ್ಣಿನ ಮೇಲೆ ಆದ ದೌರ್ಜನ್ಯ ಆದ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಬೇಕು ಅನ್ನೋದಕ್ಕೆ ಸ್ಪಷ್ಟವಾದ ಕಾನೂನಿದೆ. ನನಗೆ ಓರ್ವ ವಕೀಲನಾಗಿ ಈಗಲೂ ಅರ್ಥವಾಗುತ್ತಿಲ್ಲ. ಪ್ರಕರಣ ಬೆಳಕಿಗೆ ಬಂದು 25 ರಿಂದ 26 ದಿನ ಆಗುತ್ತಿದೆ. ಆ ಹೆಣ್ಣು ಮಗಳು ಪ್ರತಿನಿತ್ಯ ರಕ್ಷಣೆ ಕೊಡಿಸೋಕೆ ಕೇಳಿಕೊಳ್ಳುತ್ತಿದ್ದಾಳೆ. ಈ ರಾಜ್ಯದಲ್ಲಿ ಕಾನೂನು ಪರಿಪಾಲನೆ ಆಗುತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ.
ದಿನೇಶ್ ಕಲ್ಲಳ್ಳಿ ನೀಡಿದ ದೂರಿಗೆ ಎಫ್ಐಆರ್ ಆಗುತ್ತಿಲ್ಲ. ಯಾರ ಮೇಲೆ ಕೇಸ್ ಆಗಿದೆ 376 ಕೇಸ್ ಆಗಿದೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಆದರೆ ಸಂತ್ರಸ್ತ ಹೆಣ್ಣುಮಗಳ ಪೋಷಕರನ್ನ ಕರೆದು ಇಂಟಾರಾಗೇಟ್ ಮಾಡಿ ನಂತರ ಮಾಧ್ಯಮದ ಹೇಳಿಕೆ ಕೊಡುತ್ತಾರೆ. 376 ಅಡಿ ಕೇಸ್ ರಿಜಿಸ್ಟ್ರೇಷನ್ ಆದ್ರೆ ಸಾಮಾನ್ಯ ವ್ಯಕ್ತಿಯಾಗಿದ್ರೆ ಏನ್ ಮಾಡ್ತಿದ್ರಿ?, ಆ ವ್ಯಕ್ತಿ ಹೇಳ್ತಾರೆ ನಾನೂ ಯಾವುದೇ ಬೇಲ್ ಪಡೆಯೋದಿಲ್ಲ ಅಂತ, ಅವರ ವರ್ತನೆ ಪೊಲೀಸರಿಗೆ ಬೆದರಿಕೆ ಒಡ್ಡಿದಂತಿದೆ. ಈ ಪ್ರಕರಣದಲ್ಲಿ ಪೊಲೀಸರನ್ನ ರಿಮೋಟ್ ಕಂಟ್ರೋಲ್‌ನಲ್ಲಿ ಆಡಿಸಿದಂತೆ ಕಾಣಿಸುತ್ತಿದೆ. ನನಗೂ ಆ ಹೆಣ್ಣು ಮಗಳಿಗೂ ಯಾವುದೇ ಸಂಬಂಧವಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. 376 ಅಡಿ ಕೇಸ್ ದಾಖಲಾದ ಮೇಲೆ ಆ ವ್ಯಕ್ತಿಯನ್ನ ಬಂಧಿಸಬೇಕು. ರಾಜ್ಯದ ಹೈ ಕೋರ್ಟ್ ಚೀಫ್ ಜಸ್ಟೀಸ್ ನೇತೃತ್ವದಲ್ಲಿ ತನಿಖೆ ಆಗಬೇಕು. ಇದು ನಮ್ಮ ಪಕ್ಷದ ಸ್ಪಷ್ಟ ನಿಲುವಾಗಿದೆ ಎಂದು ಹೇಳಿದ್ದಾರೆ.
ಸಿಡಿ ಕೇಸ್: ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ಸರ್ಕಾರವೇ ಕಾರಣ, ಸಿದ್ದು
ಇನ್ನು ಬ್ರಿಜೇಶ್ ಕಾಳಪ್ಪ ಮಾತನಾಡಿ, ಹೋಳಿ ಹಬ್ಬದಂದು ಬಣ್ಣದಾಟದ ಬದಲು ಕೆಸರೆರಚಾಟ ನಡಿತಿದೆ. ಈ ಒಂದು ಆರೋಪಕ್ಕೆ ಒಳಗಾಗುವ ವ್ಯಕ್ತಿಗೆ ಸಜೆ ಆಗೋದು ಸರ್ವೇ ಸಾಮಾನ್ಯ. ಆದ್ರೆ ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಆಗುತ್ತಿಲ್ಲ. ಸಂತ್ರಸ್ತೆಯ ಹೇಳಿಕೆ ಪಡೆದು ಆರೋಪಿಯನ್ನು ಬಂಧಿಸಲೇಬೇಕು. ಸಂತ್ರಸ್ತೆಯದ್ದು ತಪ್ಪಿಲ್ಲ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಹೀಗಾಗಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು. ಪೊಲೀಸರು ನಿಷ್ಪಕ್ಷಪಾತದಿಂದ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಳಿಕ ಮಾತನಾಡಿದ ಕೆಪಿಸಿಸಿ ವಕ್ತಾರ ದಿವಾಕರ್, ತನಿಖೆಯಲ್ಲಿ ರಾಜಕೀಯ ಮಧ್ಯೆ ಪ್ರವೇಶ ಆಗುತ್ತಿದೆ. ರಾಜಕೀಯ ಹಸ್ತಕ್ಷೇಪ ಆಗುತ್ತಿದ್ದರೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲ್ಲ. 376 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ರೂ ಓಫನ್ ಆಗಿ ಪ್ರೆಸ್‌ಮೀಟ್ ಮಾಡ್ತಿದ್ದಾರೆ. ಹಿಂದೆ ಗೃಹ ಸಚಿವರಾಗಿದ್ದ ಆರ್.ಎಲ್. ಜಾಲಪ್ಪನವರೇ ಅಬ್‌ಸ್ಕಾಂಡ್ ಆಗಿದ್ರು, ಸಾಮಾನ್ಯ ಡಿಜೆ ಹಳ್ಳಿ ಪ್ರಕರಣ ಆದಾಗ ಯಾವ ತರಾ ತನಿಖೆ ಮಾಡಿದ್ರೀ, ಬೇರೆಯವರ ಮೇಲೆ ಎಫ್‌ಐಆರ್ ಆದಾಗ ಯಾವ ರೀತಿ ನಡೆದುಕೊಂಡಿದ್ರಿ, ಈ ಪ್ರಕರಣದಲ್ಲಿ ಯಾವ ರೀತಿ ನಡೆದುಕೊಳ್ಳಿತ್ತಿದ್ದೀರಿ ಎಂದು ದಿವಾಕರ್ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ