ಯಾವ ಮುಖವಿಟ್ಟುಕೊಂಡು ಮೋದಿ ಬರ್ತಿದ್ದಾರೆ ಎಂಬ ಸಿದ್ದು ಟ್ವೀಟ್‌ಗೆ ಪೂಜಾರಿ ಗುದ್ದು

By Gowthami K  |  First Published Jan 12, 2023, 2:06 PM IST

ಸಿದ್ದರಾಮಯ್ಯ ಅವರ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇವತ್ತು ವಿವೇಕಾನಂದ ಜನ್ಮದಿನಾಚರಣೆಯಲ್ಲಿ ಕರ್ನಾಟಕದಲ್ಲಿ ಉದ್ಘಾಟನೆ ಮಾಡ್ತಿದ್ದಾರೆ ಅನ್ನೋದು ರಾಜ್ಯಕ್ಕೆ ದೇಶಕ್ಕೆ ಸಂತೋಷದ ವಿಚಾರ.


ಉಡುಪಿ (ಜ.12): ಯಾವ ಮುಖವಿಟ್ಟುಕೊಂಡು ಮೋದಿ ರಾಜ್ಯಕ್ಕೆ ಬರ್ತಿದ್ದಾರೆ ಅಂತಾ ಸಿದ್ದರಾಮಯ್ಯ ಅವರ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇವತ್ತು ವಿವೇಕಾನಂದ ಜನ್ಮದಿನಾಚರಣೆಯಲ್ಲಿ ಕರ್ನಾಟಕದಲ್ಲಿ ಉದ್ಘಾಟನೆ ಮಾಡ್ತಿದ್ದಾರೆ ಅನ್ನೋದು ರಾಜ್ಯಕ್ಕೆ ದೇಶಕ್ಕೆ ಸಂತೋಷದ ವಿಚಾರ. ಇಡೀ ಕರ್ನಾಟಕ ಒಟ್ಟಾಗಿ ಅವರನ್ನ ಸ್ವಾಗತಿಸುತ್ತಿದೆ. ಅವರು ಬಂದಿರೋದು ಚುನಾವಣೆ ಪ್ರಕ್ರಿಯೆಗಲ್ಲ. ಅವರು ಬಂದು ಭಾಗವಹಿಸಿರುವ ಒಂದೊಂದು ಕಾರ್ಯಕ್ರಮವೂ ಕೂಡ ರಾಜಕೀಯವಾಗಿ ಮತ್ತು ಸರ್ಕಾರಕ್ಕೆ ಅತ್ಯಂತ ಹೆಚ್ಚು ಶಕ್ತಿಯನ್ನ ಕೊಡ್ತಿದೆ. ಸಿದ್ದರಾಮಯ್ಯನವರ ಮುಖಯಿಟ್ಟುಕೊಂಡು ಹೋಗೋದಿಲ್ಲ, ಮೋದಿಯವರ ಮುಖವಿಟ್ಟುಕೊಂಡು ಬರ್ತಿದ್ದಾರೆ ಅಂತಾ ಸಿದ್ದುಗೆ ತಿರುಗೇಟು ನೀಡಿದ್ದಾರೆ.

200 ಯೂನಿಟ್ ಉಚಿತವಾಗಿ ಕೊಡ್ತಿವಿ ಅಂತಾ ಕಾಂಗ್ರೆಸ್ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮುಂಚೆ ಗೆಲುವಿನ ಬಗ್ಗೆ ಆತಂಕದಲ್ಲಿದ್ದಾರೆ. ಭಯೋತ್ಪಾದನೆ ಬಗ್ಗೆ ನಿಮ್ಮ ನಿಲುವೇನು ಅಂತಾ ಕೇಳಿದ್ರೆ ಅದಕ್ಕೆ ಉತ್ತರ ಕೊಡ್ತಿಲ್ಲ, ಅದನ್ನ ಖಂಡಿಸ್ತಾನೂ ಇಲ್ಲ. ಅದರ ಬದಲಾಗಿ ಸಹಾನುಭೂತಿಯ ಮಾತುಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್ ಹತಾಷೆ ಭಾವನೆಯಲ್ಲಿದೆ. ದೇಶದ ಭದ್ರತೆ, ಅಭಿವೃದ್ಧಿ ಬಗ್ಗೆ ಮಾತನಾಡೋದನ್ನ ಬಿಟ್ಟು, ಬಿಜೆಪಿಯನ್ನ ದೂರುವುದಷ್ಟೇ ಕೆಲಸವಾಗಿದೆ.

Tap to resize

Latest Videos

ಬಿಜೆಪಿ ಬಹಳ ಪ್ರಭಾವಶಾಲಿಯಾಗಿ ತನ್ನ ಕೆಲಸ ಮಾಡ್ತಿದೆ. ಕಾಂಗ್ರೆಸ್ ನವರು ಬಸ್ ಯಾತ್ರೆ ಆರಂಭ ಮಾಡಿ ಅನೇಕ ಯೋಜನೆಗಳನ್ನ ಘೋಷಣೆ ಮಾಡ್ತಿದ್ದಾರೆ. ಗೆಲುವು ತಮ್ಮಿಂದ ದೂರವಾಗ್ತಿದೆ ಅನ್ನೋ ಆತಂಕದಿಂದ ಕಾಂಗ್ರೆಸ್ ಈ ರೀತಿ ಮಾಡ್ತಿದೆ. ಅವರು ಏನೇ ಮಾಡಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾವೂ 75 ಯೂನಿಟ್ ನ್ನ ಎಸ್ ಸಿ ಹಾಗೂ ಎಸ್ ಟಿ ಕುಟುಂಬಗಳಿಗೆ ಕೊಡ್ತಿದ್ದೇವೆ. ಆದ್ರೆ ಕಾಂಗ್ರೆಸ್ ನವರು ಏನ್ ಹೇಳಿದ್ದಾರೆ ಅಂತಾ ಗೊತ್ತಿಲ್ಲ. ಅದನ್ನ ಸಂಪೂರ್ಣವಾಗಿ ತಿಳಿದುಕೊಂಡು ಹೇಳುತ್ತೇನೆ. ಅಕ್ಕಿಗೆ 32 ರೂಪಾಯಿಗೆ ಖರೀಧಿ ಮಾಡಿ ಕೊಡಲಾಗುತ್ತಿದೆ. 28 ರೂಪಾಯಿ ಕೇಂದ್ರ ಸರ್ಕಾರ ಕೊಡ್ತಿದೆ. ರಾಜ್ಯ ಸರ್ಕಾರ 3 ರೂಪಾಯಿ ಕೊಡ್ತಿದೆ. 3 ರೂಪಾಯಿ ಕೊಡ್ತಿರುವವರ ಪ್ರಚಾರ ಆಗ್ತಿದೆ ಅಷ್ಟೇ ಎಂದಿದ್ದಾರೆ.

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರ: ಕರ್ನಾಟಕದಲ್ಲಿರುವ ಯಾವುದೇ ಕ್ಷೇತ್ರದಲ್ಲಿ ನಿಲ್ತೀನಿ ಅಂತಾ ಸಿದ್ದರಾಮಯ್ಯನವರು ಹೇಳಿದ್ದಾರೆ. ಅದು ಅವರ ಹಕ್ಕು ನಾವೇನು ಹೇಳೋಕೆ ಆಗಲ್ಲ. ಯಾವ ಕ್ಷೇತ್ರದಲ್ಲಿ ನಿಲ್ತೀರಿ ಅನ್ನೋದನ್ನ ಖಚಿತಪಡಿಸಿಕೊಳ್ಳಿ ಅಂತಾ ನಾವ್ ಹೇಳಿದ್ವಿ. ಅವರೀಗ ಕೋಲಾರದಲ್ಲಿ ನಿಲ್ತೀವಿ ಅಂದಿದ್ದಾರೆ. ಅಲ್ಲಿನ ವಿದ್ಯಮಾನಗಳನ್ನ ಗಮನಿಸಿದರೇ ಅಲ್ಲಿ ಕೂಡ ನಾವೇ ಗೆಲ್ಲುತ್ತೇವೆ.

Assembly election: ಸಿದ್ದು ಆಯ್ತು, ಈಗ ಶ್ರೀರಾಮುಲು ಕ್ಷೇತ್ರ ಚರ್ಚೆ: ಬೆಳಗಾವಿಯಲ್ಲಿ ಮಸೀದಿ ಪಾಲಿಟಿಕ್ಸ್

ಟ್ಯಾಬ್ಲೋಗೆ ಅವಕಾಶ ನೀಡಿದ ವಿಚಾರದಲ್ಲಿ ಕಡೆಗಣಿಸಿರಲಿಲ್ಲ, ರಾಜ್ಯ ಸರ್ಕಾರ ಇವತ್ತು ವಿನಂತಿ ಮಾಡಿತ್ತು. ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋಗಳಿಗೆ ಅವಕಾಶ ಸಿಕ್ಕಿದೆ ಎಂದಿದ್ದಾರೆ.

'ಸಿದ್ದು ನಿಜಕನಸುಗಳು' ಕೃತಿ ಬಿಡುಗಡೆ ವಿಚಾರ: ಬಿಜೆಪಿ ನಾಯಕರಿಗೆ ಸವಾಲು ಹಾಕಿ ಸಿದ್ದರಾಮಯ್ಯ ಸರಣಿ ಟ್ವೀಟ್

ಸ್ಯಾಂಟ್ರೋರವಿ ಬಂಧನ ವಿಳಂಬ ವಿಚಾರ. ಕಾನೂನು ತನ್ನದೇ ದಾರಿಯಲ್ಲಿ ಸಾಗುತ್ತದೆ. ಯಾರು ಸ್ಯಾಂಟ್ರೋ ರವಿ ಇರಲಿ, ಸ್ಯಾಂಟ್ರೋ ಅಲ್ಲದೇ ಇರೋ ರವಿ ಇರಲಿ, ನಮಗೆ ಎಲ್ಲರೂ ಒಂದೇ. ಕಾನೂನಿನ ಚೌಕಟ್ಟನ್ನ ವಿರೋಧ ಮಾಡಿದ್ದಾರೋ, ಅಂಥಹವರನ್ನ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಎಲ್ಲರನ್ನೂ ಕೂಡ ಕಾನೂನಿನ ಚೌಕಟ್ಟಿನೊಳಗೆ ತಂದೇ ತರುತ್ತೇವೆ. ನಮಗೆ ಸ್ಯ‌‍ಾಂಟ್ರೋ ರವಿನೂ ಒಂದೇ, ಕುಕ್ಕರ್ ಬ್ಲಾಸ್ಟ್ ಮಾಡಿದವನು ಒಂದೇ. ಇಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಅಪರಾಧಿಗಳೆಲ್ಲರೂ ಬಿಜೆಪಿ ಸರ್ಕಾರಕ್ಕೆ ಒಂದೇ. ಕಾನೂನಿನ ಚೌಕಟ್ಟಿನೊಳಗೆ ತರುತ್ತೇವೆ.

click me!