ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಹಿರೇಮಠದ ಪೀಠಾಧಿಪತಿ ಷ. ಬ್ರ. ಶ್ರೀ ವೀರಮಹಾಂತ ಶಿವಾಚಾರ್ಯರು ಬುಧವಾರ ರಾತ್ರಿ (48) ತೀವ್ರ ಹೃದಯಘಾತದಿಂದ ಲಿಂಗೈಕ್ಯರಾಗಿದ್ದಾರೆ. ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದ ಶ್ರೀಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬೆಂಗಳೂರು ಪೂರ್ವ ಕಂಟೋನ್ಮೆಂಟ್ ಸಿಟಿ ಆಸ್ಪತ್ರೆಗೆ ದಾಖಲಿಸಿತ್ತಾದರೂ, ಅಷ್ಟೊತ್ತಿಗಾಗಲೇ ಶ್ರೀಗಳು ಇಹಲೋಕ ತ್ಯಜಿಸಿದ್ದರು
ಯಾದಗಿರಿ (ಜ.12) : ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಹಿರೇಮಠದ ಪೀಠಾಧಿಪತಿ ಷ. ಬ್ರ. ಶ್ರೀ ವೀರಮಹಾಂತ ಶಿವಾಚಾರ್ಯರು ಬುಧವಾರ ರಾತ್ರಿ (48) ತೀವ್ರ ಹೃದಯಘಾತದಿಂದ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರು ರೈಲು ನಿಲ್ದಾಣದಲ್ಲಿ ತೀವ್ರ ಹೃದಯಾಘಾತ ಆದಾಗ, ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಶ್ರೀಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮುಂದಿನ ತಿಂಗಳ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಗಣ್ಯರಿಗೆ ಆಹ್ವಾನ ನೀಡಲು ಶ್ರೀಗಳು ಬೆಂಗಳೂರಿಗೆ ತೆರಳಿದ್ದರು. ಇಂದು ಬುಧವಾರ ರಾತ್ರಿ ವಾಪಸ್ಸಾಗುವ ಸಂದರ್ಭ ರೈಲು ನಿಲ್ದಾಣದಲ್ಲೇ ಹೃದಯಾಘಾತ ಆಗಿದೆ. ಬೆಂಗಳೂರಿನಲ್ಲಿ ಬಿ. ವೈ. ವಿಜಯೇಂದ್ರ ಸೇರಿದಂತೆ ಮತ್ತಿತರ ಗಣ್ಯರಿಗೆ ಕಾರ್ಯಕ್ರಮದ ಆಹ್ವಾನ ನೀಡಿ, ರೈಲು ಮೂಲಕ ಯಾದಗಿರಿಗೆ ವಾಪಸ್ ಆಗುತ್ತಿದ್ದರು. ಮಠದ ಭಕ್ತರಾದ ರಾಯಪ್ಪಗೌಡ ದರ್ಶನಾಪುರ ಮತ್ತು ಷಣ್ಮುಖಪ್ಪ ಕಕ್ಕೇರಿ ಎನ್ನುವವರು ಶ್ರೀಗಳ ಜೊತೆಗಿದ್ದರು.
undefined
ಯಾದಗಿರಿಯಲ್ಲಿ ಸಾಲ ಭಾದೆಯಿಂದ ರೈತ ಆತ್ಮಹತ್ಯೆ
ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದ ಶ್ರೀಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬೆಂಗಳೂರು ಪೂರ್ವ ಕಂಟೋನ್ಮೆಂಟ್ ಸಿಟಿ ಆಸ್ಪತ್ರೆಗೆ ದಾಖಲಿಸಿತ್ತಾದರೂ, ಅಷ್ಟೊತ್ತಿಗಾಗಲೇ ಶ್ರೀಗಳು ಇಹಲೋಕ ತ್ಯಜಿಸಿದ್ದರು ಈ ಸುದ್ದಿ ತಿಳಿಯುತ್ತಿದ್ದಂತೆಯೇ, ದೋರನಹಳ್ಳಿ ಗ್ರಾಮದ ಮಠದ ಆವರಣದಲ್ಲಿ ಭಕ್ತರು ದಂಡು ಸೇರತೊಡಗಿದೆ. ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರತಿ ವರ್ಷ ಅದ್ಧೂರಿ ಜಾತ್ರೆ, ಸಾಮೂಹಿಕ ವಿವಾಹ ಹಾಗೂ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರು. ಲಕ್ಷಾಂತರ ಭಕ್ತ ವೃಂದವನ್ನು ಶ್ರೀಗಳು ಹೊಂದಿದ್ದಾರೆ. ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ "ಶ್ರೀ ವೀರ ಮಹಾಂತ ಪ್ರಶಸ್ತಿ' ನೀಡಿ ಶ್ರೀಗಳು ಸನ್ಮಾನಿಸುತ್ತಿದ್ದರು.
ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಶಂಕರ ಬಿದರಿ ಸೇರಿದಂತೆ, ನಮ್ಮ ಸುವರ್ಣ ನ್ಯೂಸ್ ಕನ್ನಡಪ್ರಭ ಸಮೂಹದ ಮುಖ್ಯಸ್ಥರಾದ ಶ್ರೀ ರವಿ ಹೆಗಡೆ, ಅಜೀತ್ ಹನುಮಕ್ಕನವರ್ ಸೇರಿದಂತೆ ಮುಂತಾದವರು ಕಳೆದೆರಡು ವರ್ಷಗಳ ಹಿಂದೆ ಶ್ರೀ ಮಠದ ಈ ಸನ್ಮಾನಕ್ಕೆ ಭಾಜನರಾಗಿದ್ದರು. ಯಾದಗಿರಿ: ಜವರಾಯನ ಅಟ್ಟಹಾಸಕ್ಕೆ ರಾಜ್ಯಮಟ್ಟದ ಇಬ್ಬರು ಖೋಖೋ ಕ್ರೀಡಾಪಟುಗಳು ಸಾವು