ರಾಜ ಕಾಲುವೆಯಲ್ಲಿ ಜಲಮಾರ್ಗ! ಕೋರಮಂಗಲ ರಾಜಕಾಲುವೆ ಅಭಿವೃದ್ಧಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ | ಧರ್ಮಾಂಬುದಿ ಕೆರೆಯಿಂದ ಬೆಳ್ಳಂದೂರು ಕೆರೆವರೆಗೆ ಹರಿಯುವ ರಾಜಕಾಲುವೆ
ಬೆಂಗಳೂರು(ಜ.04): ನಗರದ ಕೋರಮಂಗಲ ರಾಜಕಾಲುವೆಯನ್ನು ಪ್ರವಾಸಿ ತಾಣದ ಮಾದರಿಯಲ್ಲಿ ಅಭಿವೃದ್ಧಿಗೆ ಬಿಬಿಎಂಪಿ ಆಯುಕ್ತರು ಸಲ್ಲಿಸಿದ 169 ಕೋಟಿ ವೆಚ್ಚದ ‘ನಗರ ಜಲಮಾರ್ಗ ಯೋಜನೆ’ಯ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿನೂತನ ಹಾಗೂ ವೈವಿಧ್ಯಮಯ ಯೋಜನೆಯನ್ನು ಕೋರಮಂಗಲ (ಕಣಿವೆ) ರಾಜಕಾಲುವೆಯಲ್ಲಿ ಅನುಷ್ಠಾನಕ್ಕೆ ಬಿಬಿಎಂಪಿ ತೀರ್ಮಾನಿಸಿದೆ. ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿನ ಚಿಯೊಂಗ್ಗೀಚಿಯಾನ್ ನದಿ, ಹಾಗೂ ಪುಣೆಯ ಮುಲಾ-ಮುತಾ ಮಾದರಿಯಲ್ಲಿ ರಾಜಕಾಲುವೆಯನ್ನು ಅಭಿವೃದ್ಧಿಪಡಿಸಲು ವಿನ್ಯಾಸ ಸಿದ್ಧಪಡಿಸಲಾಗಿದೆ.
35 ದೇಶಗಳಲ್ಲಿ ಲಸಿಕೆ ವಿತರಣೆ: ವಿತರಣೆಯಲ್ಲಿ ಇಸ್ರೇಲ್ ನಂ.1!
ಯೋಜನೆ ಅನುಷ್ಠಾನದಿಂದ ನಗರದ ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ರಾಜಕಾಲುವೆ ಸಮಸ್ಯೆ ಕೂಡ ಪರಿಹಾರವಾಗಲಿದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಗೆ ಸಂಪುಟ ಅನುಮೋದನೆ ಸೇರಿದಂತೆ ಇನ್ನಿತರೆ ಷರತ್ತು ವಿಧಿಸಿ ಆಡಳಿತಾತ್ಮಕ ಅನುಮೋದನೆ ಲಭ್ಯವಾಗಿದೆ.
ಕೋರಮಂಗಲದ ಈ ರಾಜುಕಾಲುವೆ ಕೆ.ಆರ್.ಮಾರುಕಟ್ಟೆಯ ಧರ್ಮಾಂಬುದಿ ಕೆರೆಯಿಂದ ಆರಂಭಗೊಂಡು ಶಾಂತಿನಗರ, ಹೊಸೂರು ರಸ್ತೆ, ಕೋರಮಂಗಲ ಮೂಲಕ ಬೆಳ್ಳಂದೂರು ಕೆರೆಗೆ ಸೇರುತ್ತದೆ. ಒಟ್ಟು 12 ಕಿ.ಮೀ ಉದ್ದ ಕಾಲುವೆ ಹರಿಯುತ್ತದೆ. ಕಾಲುವೆಯ ಎರಡೂ ಕಡೆ ಒತ್ತುವರಿ ತೆರವುಗೊಳಿಸುವುದರೊಂದಿಗೆ ಕೈ ತೋಟ ನಿರ್ಮಾಣ, ಕಾಲುವೆಯಲ್ಲಿ ಮೆಟ್ಟಿಲುಗಳ ನಿರ್ಮಾಣ, ಕಾಲುವೆ ಹರಿದು ಹೋಗುವ ಮಾರ್ಗದಲ್ಲಿ ಬರುವ ಸೇತುವೆಗಳ ಕೆಳಭಾಗದಲ್ಲಿ ವಿದ್ಯುತ್ ದೀಪಗಳ ಅಳವಡಿಕೆ, ರಾಜಕಾಲುವೆ ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡುವುದು (ಚಚ್‌ರ್ ಸ್ಟ್ರೀಟ್ ಮಾದರಿ) ರಾಜಕಾಲುವೆ ಬಳಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಲು ಸೂಕ್ತ ಕಡೆಗಳಲ್ಲಿ ಸುರಕ್ಷಿತ ರೀತಿಯಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಬೇಕು. ರಾಜಕಾಲುವೆ ಇಕ್ಕೆಲಗಳಲ್ಲಿ ಅಡ್ಡಗೋಡೆ ನಿರ್ಮಾಣ. ರಾಜಕಾಲುವೆÜ ಇಕ್ಕೆಲಗಳಲ್ಲಿ ಹೂಳು ತೆಗೆಯಲು ಅನುವಾಗುವಂತೆ ರಸ್ತೆ ನಿರ್ಮಾಣ ಸೇರಿದಂತೆ ಮೊದಲಾದ ಅಭಿವೃದ್ಧಿಯನ್ನು ಈ ಯೋಜನೆ ಒಳಗೊಂಡಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಪ್ರಪ್ರಥಮ ವರ್ಚುವಲ್ ಚಿತ್ರಸಂತೆ ಶುರು, 1,100 ಕಲಾವಿದರ ವೆಬ್‌ಪೇಜ್ ಸೃಷ್ಟಿ
ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದ ನಂತರ ಪ್ರತಿದಿನ 10 ದಶಲಕ್ಷ ಲೀಟರ್ ತ್ಯಾಜ್ಯ ನೀರನ್ನು ಶುದ್ದೀಕರಣ ಮಾಡುವ ಯೋಜನೆ ಕಾರ್ಯಗತವಾಗಲೇಬೇಕು. ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಬೇಕು.
ರಾಜಕಾಲುವೆ ಸುಮಾರು 20 ವಾರ್ಡ್‌ಗಳಲ್ಲಿ ಹಾದು ಹೋಗಲಿದೆ. ಕಾಲುವೆಗೆ ಅನಧಿಕೃತವಾಗಿ ಕೊಳಚೆ ನೀರು ಹರಿಸಲಾಗುತ್ತಿರುವುದನ್ನು ಗುರುತಿಸಲಾಗಿದೆ. ಈಗಾಗಲೇ 750 ಅನಧಿಕೃತ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಇನ್ನು ರಾಜಕಾಲುವೆ ಒತ್ತುವರಿ ತೆರವು ಹಾಗೂ ಹೂಳು ತೆಗೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಿನ ಭವಿಷ್ಯ: ಈ ರಾಶಿಯವರ ನರಗಳಿಗೆ ತೊಂದರೆ, ಮನಸ್ಸಿಗೆ ಅಸಮಾಧಾನ!
ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ .169 ಕೋಟಿ ಆಡಳಿತಾತ್ಮಕ ಅನುಮೋದನೆಯೊಂದಿಗೆ ಕೆಟಿಪಿಪಿ ಕಾಯ್ದೆಗೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆ ನಡೆಸುವುದು ಹಾಗೂ ಐದು ವರ್ಷ ನಿರ್ವಹಣೆಯ ವೆಚ್ಚ (ವಾರ್ಷಿಕ .4.25 ಕೋಟಿ) ಬಿಬಿಎಂಪಿ ಅನುದಾನದಲ್ಲಿ ಭರಿಸುವುದಕ್ಕೆ ಸೂಚಿಸಲಾಗಿದೆ.
ಷರತ್ತುಗಳು:
*ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನ ಪಾಲನೆ
*ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಮಂಡಳಿಯ ಅನುಮತಿ ಕಡ್ಡಾಯ
*ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಮೇಲುಸ್ತುವಾರಿ ಸಮಿತಿ ಷರತ್ತಿನೊಂದಿಗೆ ಅನುಮತಿ ನೀಡಿದೆ.
*ಅನುಮೋದನೆ ನೀಡಿದ ಕ್ರಿಯಾ ಯೋಜನೆಯಂತೆ ಅನುಷ್ಠಾನಗೊಳಿಸಬೇಕು.