ಉದ್ಘಾಟನೆಯಾಗದ ಲಿಫ್ಟ್ : ಫ್ಲಾಟ್ ಫಾರ್ಮಿಂದ ಹೊರಗೆ ಬರಲು ಪಡಬಾರದ ಕಷ್ಟಪಟ್ಟ ಕಾಲಿಲ್ಲದ ಯುವಕ

Published : Mar 27, 2026, 08:48 AM IST
disabled person at the Koppal railway station is crawling up the stairs

ಸಾರಾಂಶ

disabled person struggles at station: ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಎಸ್ಕಲೇಟರ್ ಮತ್ತು ಲಿಫ್ಟ್ ಉದ್ಘಾಟನೆಯಾಗದ ಕಾರಣ, ಚಿಕಿತ್ಸೆಗಾಗಿ ಬಂದ ವಿಶೇಷಚೇತನ ವ್ಯಕ್ತಿಯೊಬ್ಬರು ಮೆಟ್ಟಿಲುಗಳ ಮೇಲೆ ತೆವಳುತ್ತಾ ಸಾಗಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿತ್ತು.

ನಿರ್ಮಾಣವಾಗಿದ್ದರು ಉದ್ಘಾಟನೆಯಾಗದ ಎಸ್ಕಲೇಟರ್:

ಕೊಪ್ಪಳ: ಎಸ್ಕಲೇಟರ್ ನಿರ್ಮಾಣವಾಗಿದ್ದರು ಉದ್ಘಾಟನೆಯಾಗದೇ ಇರುವುದರಿಂದ ರೈಲ್ವೆ ನಿಲ್ದಾಣದಿಂದ ಹೊರ ಬರುವುದಕ್ಕೆ ಕಾಲು ಇಲ್ಲದ ವಿಶೇಷಚೇತನ ವ್ಯಕ್ತಿಯೊಬ್ಬರು ಪಡಬಾರದ ಕಷ್ಟಪಟ್ಟಂತಹ ಘಟನೆ ನಡೆದಿದೆ. ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ವಿಶೇಷಚೇತನ ವ್ಯಕ್ತಿಯೊಬ್ಬರು ಲಿಫ್ಟ್ ಇದ್ದರೂ ಉದ್ಘಾಟನೆಯಾಗದ ಕಾರಣ ಮೆಟ್ಟಿಲಿನಲ್ಲಿ ಬಹಳ ಕಷ್ಟದಿಂದಲೇ ತೆವಳುತ್ತಾ ಸಾಗಿದ್ದಾರೆ.

ರೈಲ್ವೆ ನಿಲ್ದಾಣದಿಂದ ಹೊರ ಬರುವುದಕ್ಕೆ ಭಾರಿ ಕಷ್ಟಪಟ್ಟ ವಿಶೇಷಚೇತನ ವ್ಯಕ್ತಿ:

ರೈಲ್ವೆ ಫ್ಲಾಟ್ ಫಾರ್ಮ್ ನಿಂದ ಹೊರಗಡೆ ಬರುವುದಕ್ಕೆ ವಿಶೇಷಚೇತನ ವ್ಯಕ್ತಿ ಭಾರಿ ಕಷ್ಟಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಮತ್ತೂರು ಗ್ರಾಮದ ಚಂದ್ರಶೇಖರ್ ಎಂಬುವವರು ಚಿಕಿತ್ಸೆಗೆಂದು ಕೊಪ್ಪಳದಿಂದ ಹುಬ್ಬಳ್ಳಿಗೆ ತೆರಳಿದ್ದರು. ಈ ವೇಳೆ ಎರಡನೇ ಫ್ಲಾಟ್‌ಫಾರ್ಮ್‌ಗೆ ಬಂದು ರೈಲು ನಿಂತಿದ್ದು, ಎರಡನೇ ಫ್ಲಾಟ್ ಫಾರ್ಮ್ ನಿಂದ ಹೊರಗಡೆ ಬರಲು ಚಂದ್ರಶೇಖರ್ ಕಷ್ಟಪಟ್ಟಿದ್ದಾರೆ. ಎಸ್ಕಲೇಟರ್, ಲಿಫ್ಟ್ ಇರದ ಕಾರಣ ತೆವಳುತ್ತಾ ಮೆಟ್ಟಿಲುಗಳಿಂದ ಇಳಿದು ಬಂದಿದ್ದಾರೆ. ಆದರೂ ಚಂದ್ರಶೇಖರ ಸಹಾಯಕ್ಕೆ ರೈಲ್ವೇ ನಿಲ್ದಾಣದ ಸಿಬ್ಬಂದಿ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಕೊಲೆ : ಮಾರಕಾಸ್ತ್ರಗಳಿಂದ ಕಡಿದು ಟಾಬ್ಲೆಟ್ ಆರಿಫ್ ಹತ್ಯೆ

ಮೆಟ್ಟಿಲುಗಳಲ್ಲಿ ತೆವಳುತ್ತಾ ಇಳಿದು ಬಂದ ಚಂದ್ರಶೇಖರ್ ಅವರು ಬಳಿಕ ವಾಕರ್ ಸಹಾಯದಿಂದ ರೈಲ್ವೇ ನಿಲ್ದಾಣದಿಂದ ಹೊರಗಡೆ ಬಂದಿದ್ದಾರೆ. ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಸ್ಕಲೇಟರ್,ಲಿಫ್ಟ್ ನಿರ್ಮಾಣ ಮಾಡಲಾಗಿದೆ. ಆದರೆ ನಾಲ್ಕೈದು ತಿಂಗಳು ಕಳೆದರೂ ಇನ್ನೂ ಲಿಫ್ಟ್ ಉದ್ಘಾಟನೆ ಆಗಿಲ್ಲ, ಶೀಘ್ರವೇ ಎಸ್ಕಲೇಟರ್, ಲಿಫ್ಟ್ ಉದ್ಘಾಟಿಸುವಂತೆ ಚಂದ್ರಶೇಖರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮರುಭೂಮಿಯ ನಡುವೆ 1.7 ಮೈಲಿ ಉದ್ದದ ಬೃಹತ್ ಕೃತಕ ಸರೋವರ ನಿರ್ಮಿಸಲು ಮುಂದಾದ ಸೌದಿ ಅರೇಬಿಯಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ: ಏ.9ಕ್ಕೆ ವಿಚಾರಣೆ | ಏನಿದು ಪ್ರಕರಣ?
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಕೊಲೆ : ಮಾರಕಾಸ್ತ್ರಗಳಿಂದ ಕಡಿದು ಟಾಬ್ಲೆಟ್ ಆರಿಫ್ ಹತ್ಯೆ