
ಬೀದರ್ (ಜ.10): ಜಗತ್ತಿನಲ್ಲಿ ಸತ್ತಿರುವ ಈ ಕೋಟ್ಯಂತರ ಜನರ ಆತ್ಮಗಳಿಗೆ ಸರಿಯಾದ ಸಂಸ್ಕಾರವಾಗಿಲ್ಲ. ಈ ಅತೃಪ್ತ ಆತ್ಮಗಳು ಜಗತ್ತಿನಾದ್ಯಂತ ಸಂಚರಿಸುತ್ತಿರುವುದರಿಂದ ಮನುಕುಲಕ್ಕೆ ದೊಡ್ಡ ಅಪಾಯವಿದೆ. ಆದ್ದರಿಂದ 2025ಕ್ಕಿಂತಲೂ 2026ರಲ್ಲಿ ಜಗತ್ತಿಗೆ ಹತ್ತು ಪಟ್ಟು ಹೆಚ್ಚಿನ ಅಪಾಯವಿದೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ ಎಂಬ ಸ್ಪೋಟಕ ರಾಜಕೀಯ ಭವಿಷ್ಯವನ್ನು ಹೇಳಿದ ಬೆನ್ನಲ್ಲಿಯೇ ಜಾಗತಿಕ ಜೀವನಶೈಲಿ ಕುರಿತಾದ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 2025ಕ್ಕಿಂತಲೂ 2026ರಲ್ಲಿ ಜಗತ್ತಿಗೆ ಹತ್ತು ಪಟ್ಟು ಹೆಚ್ಚಿನ ಅಪಾಯವಿದೆ ಎಂದು ಎಚ್ಚರಿಸಿರುವ ಶ್ರೀಗಳು, ಪಂಚಭೂತಗಳ ದೋಷದಿಂದ ದೇಶಗಳೇ ನಾಶವಾಗಲಿವೆ ಎಂಬ ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ.
ಜಗತ್ತಿನಾದ್ಯಂತ ನೀರು ಮತ್ತು ಬೆಂಕಿಯ ಅನಾಹುತಗಳಿಂದ ಮಿಲಿಯನ್ ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ. ಆದರೆ, ಸತ್ತಿರುವ ಈ ಕೋಟ್ಯಂತರ ಆತ್ಮಗಳಿಗೆ ಸರಿಯಾದ ಸಂಸ್ಕಾರವಾಗಿಲ್ಲ. ಈ ಅತೃಪ್ತ ಆತ್ಮಗಳು ಜಗತ್ತಿನಾದ್ಯಂತ ಸಂಚರಿಸುತ್ತಿರುವುದರಿಂದ ಮನುಕುಲಕ್ಕೆ ದೊಡ್ಡ ಅಪಾಯವಿದೆ. ಜನರ ಮಾನಸಿಕ ಸ್ಥೈರ್ಯ ಕುಸಿಯುವುದು, ಏಕಾಂಗಿತನ ಕಾಡುವುದು, ಇದ್ದಕ್ಕಿದ್ದಂತೆ ಬೀಳುವುದು, ಹುಚ್ಚುತನ ಹಾಗೂ ಶರೀರದ ಅಂಗಾಂಗಗಳಲ್ಲಿ ವ್ಯತ್ಯಾಸವಾಗುವಂತಹ ವಿಚಿತ್ರ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ' ಎಂದು ವಿವರಿಸಿದರು.
2026ನೇ ವರ್ಷ ಕರ್ನಾಟಕಕ್ಕೆ ಶುಭ ತರಲಿದೆ. ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿರಲಿದೆ. ಆದರೆ ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಭೀಕರವಾಗಿರಲಿದೆ. ಹವಾಮಾನ ವೈಪರೀತ್ಯದಿಂದ ಸಾವು-ನೋವುಗಳು ಹೆಚ್ಚಾಗಲಿವೆ. ಸೂರ್ಯ ಗೃಹ ಬದಲಾವಣೆಯಾಗುತ್ತಿರುವುದರಿಂದ ಇದರ ಪ್ರಭಾವ ದೊಡ್ಡ ಉದ್ಯಮಿಗಳು, ಶ್ರೀಮಂತರು ಮತ್ತು ರಾಜಕೀಯ ವ್ಯಕ್ತಿಗಳ ಮೇಲೆ ಬೀಳಲಿದೆ. ಆಕಸ್ಮಿಕ ಅವಘಡಗಳು ಮತ್ತು ಮನುಷ್ಯನೇ ತಂದುಕೊಳ್ಳುವ ಆಪತ್ತುಗಳಿಂದ ದುಃಖದ ಮಾರುತಗಳು ಬೀಸಲಿವೆ' ಎಂದು ಶ್ರೀಗಳು ನುಡಿದರು.
ಪ್ರಾಕೃತಿಕ ದೋಷಗಳು ಅಂದರೆ ನೀರಿನ ಆಘಾತಗಳು ಹೆಚ್ಚಾಗಲಿವೆ. ಚಂದ್ರಮಾನ ಯುಗಾದಿ ಮತ್ತು ಉತ್ತರಾಯಣದ ಬದಲಾವಣೆಗಳ ನಡುವೆ ಸೂರ್ಯನ ಚಲನೆಯಿಂದಾಗಿ ಆರ್ಥಿಕವಾಗಿ ಪ್ರಭಾವಿ ವ್ಯಕ್ತಿಗಳಿಗೆ ಸಂಕಷ್ಟ ಎದುರಾಗಲಿದೆ. ಆದರೆ ಈ ಬಾರಿಯ ಸಂಕ್ರಾಂತಿಯಿಂದಲೇ ಅಂತಹ ದೊಡ್ಡ ಅಶುಭವೇನೂ ಸದ್ಯಕ್ಕೆ ಗೋಚರಿಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ