ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟೂಕೊಡಲ್ಲ, ಇಳಿಯೋದು ಇಲ್ಲ; ಕೋಡಿ ಮಠದ ಶ್ರೀಗಳ ಸ್ಫೋಟಕ ಭವಿಷ್ಯ!

Published : Jan 10, 2026, 01:33 PM IST
Kodi Mutt Siddu

ಸಾರಾಂಶ

ಕೋಡಿಮಠದ ಶ್ರೀಗಳು ರಾಜ್ಯ ರಾಜಕೀಯದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ, ಸಿದ್ದರಾಮಯ್ಯ ಅಧಿಕಾರ ಬಿಡುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಯುಗಾದಿವರೆಗೂ ಸಿಎಂ ಬದಲಾವಣೆ ಕಷ್ಟ ಎಂದಿರುವ ಅವರು, ದೇಶಕ್ಕೆ ದೊಡ್ಡ ಅಪಾಯ ಹಾಗೂ ಇಬ್ಬರು ಮಹನೀಯರ ಸಾವಿನ ಮುನ್ಸೂಚನೆಯನ್ನೂ ನೀಡಿದ್ದಾರೆ.

ಬೀದರ್ (ಜ.10): ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕುರಿತು ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, 'ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಕಷ್ಟ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ' ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಹಾಲುಮತದ ಇತಿಹಾಸ ಮತ್ತು ಅಧಿಕಾರ

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಹಾಲುಮತ ಸಮಾಜದ ಹಿನ್ನೆಲೆಯನ್ನು ಸ್ಮರಿಸಿದರು. 'ಹಾಲುಮತ ಸಮಾಜದವರ ಕೈಗೆ ಅಧಿಕಾರ ಬಂದರೆ ಅದನ್ನು ಬಿಡಿಸಿಕೊಳ್ಳುವುದು ಬಹಳ ಕಷ್ಟ. ವಿಜಯನಗರ ಸಾಮ್ರಾಜ್ಯ ಕಟ್ಟಿದ ಹಕ್ಕಬುಕ್ಕರು, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕಾಶಿಯ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಇದೇ ಪ್ರಾಚೀನ ಸಮಾಜಕ್ಕೆ ಸೇರಿದವರು. ಹಾಲುಮತ ಸಮಾಜವು ದೈವತ್ವಕ್ಕೆ ಹತ್ತಿರವಾದದ್ದು. ಅಂತಹ ಸಮಾಜದ ಮೊಟ್ಟಮೊದಲ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಕ್ಕಿದೆ, ಅವರನ್ನು ಇಳಿಸುವುದು ಸುಲಭವಲ್ಲ' ಎಂದು ವಿಶ್ಲೇಷಿಸಿದರು.

ಯುಗಾದಿವರೆಗೂ ಬದಲಾವಣೆ ಇಲ್ಲ

ಸಿಎಂ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ ಅವರು, 'ಯುಗಾದಿ ಹಬ್ಬದವರೆಗೂ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಗಳು ಆಗುವ ಲಕ್ಷಣಗಳಿಲ್ಲ. ಅವರಾಗಿಯೇ ಮನಸ್ಸು ಮಾಡಿ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಬೇರೆಯವರು ಮುಖ್ಯಮಂತ್ರಿಯಾಗಬಹುದು. ಯುಗಾದಿ ಕಳೆದ ನಂತರ ಈ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿಸುತ್ತೇನೆ' ಎಂದರು. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಮಗೆ ಆತ್ಮೀಯರು, ಆದರೆ ಅವರ ಸಿಎಂ ಪಟ್ಟದ ಬಗ್ಗೆ ಈಗಲೇ ಮಾತನಾಡುವ ಪ್ರಸಂಗ ಬಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ದೇಶಕ್ಕೆ ಕಾದಿದೆ ಅಪಾಯ-ಇಬ್ಬರು ಮಹಾನ್ ವ್ಯಕ್ತಿಗಳ ಸಾವು?

ರಾಜಕೀಯದ ಜೊತೆಗೆ ದೇಶದ ಭವಿಷ್ಯದ ಬಗ್ಗೆಯೂ ಆತಂಕಕಾರಿ ಮುನ್ಸೂಚನೆ ನೀಡಿದ ಕೋಡಿಮಠದ ಶ್ರೀಗಳು, "ದೇಶಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಅಪಾಯವಿದೆ. ಜನಸಾಮಾನ್ಯರಿಗೆ ಸಾವು-ನೋವಾಗುವ ಲಕ್ಷಣಗಳಿವೆ. ಅಷ್ಟೇ ಅಲ್ಲದೆ, ದೇಶದ ಇಬ್ಬರು ಮಹಾನ್ ವ್ಯಕ್ತಿಗಳು ಮರಣವನ್ನಪ್ಪುವ ಸಾಧ್ಯತೆಯಿದೆ," ಎಂದು ಭವಿಷ್ಯ ನುಡಿಯುವ ಮೂಲಕ ಜನರಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರ ಭೂಸ್ವಾಧೀನ ಹಣಕ್ಕೆ ಬಡ್ಡಿ ಕೊಡದ ಸರ್ಕಾರ; ರಾಷ್ಟ್ರೀಯ ಹೆದ್ದಾರಿ ಕಚೇರಿ ಜಪ್ತಿ ಮಾಡಿದ ಕೋರ್ಟ್!
2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ