ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.5) : ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮಡಿಕೇರಿ ಮಹದೇವಪೇಟೆಯಲ್ಲಿ ಇರುವ ಚೌಡೇಶ್ವರಿ ದೇವಾಲಯದಿಂದ ಗಾಂಧಿ ಮೈದಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ದೇವಾಲಯದ ಮುಂಭಾಗದಲ್ಲಿ ಶಂಕನಾದ ಮೊಳಗಿಸಿ ಬಳಿಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಚೌಡೇಶ್ವರಿ ದೇವಾಲಯದ ಬಳಿಯಿಂದ ಹೊರಟ ಮೆರವಣಿಗೆಯು ಇಂದಿರಾಗಾಂಧಿ ವೃತ್ತ, ಖಾಸಗಿ ಹಳೇ ಬಸ್ಸು ನಿಲ್ದಾಣ, ಮೊಂಗೇರಿರ ಮುತ್ತಣ್ಣ ವೃತ್ತ ಮೂಲಕ ಹಾದು ಗಾಂಧಿ ಮೈದಾನ ತಲುಪಿತು.
'ಸಿದ್ದರಾಮಯ್ಯ ನನ್ನಿಂದ ಬೆಳೆದ' ಅಂತಾರೆ' ನಾನು ಇಲ್ಲಂದಿದ್ರೆ ದೇವೇಗೌಡರು ಸಿಎಂ ಆಗ್ತಿರಲಿಲ್ಲ: ಸಿಎಂ ವಾಗ್ದಾಳಿ
ಮೆರವಣಿಗೆಯುದ್ಧಕ್ಕೂ ಬಾಂಗ್ಲಾ ದೇಶದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಮುಂತಾದ ಘೋಷಣೆಗಳನ್ನು ಕೂಗಿದರು. ಅಲ್ಲದೆ ಮುಸ್ಲಿಂ ಭಯೋತ್ಪಾದಕರ ವಿರುದ್ಧವೂ ಧಿಕ್ಕಾರ ಕೂಗಿ ಹೊರ ಹಾಕಿದರು. ಮೆರವಣಿಗೆ ಬಳಿಕ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಹಿಂದೂ ಹಿತರಕ್ಷಣಾ ಸಮಿತಿ ಕೊಡಗು ಜಿಲ್ಲಾ ಅಧ್ಯಕ್ಷ ಅಜಿತ್ ಬಾಂಗ್ಲಾ ದೇಶದಲ್ಲಿ ಹಲವು ವರ್ಷಗಳ ಕಾಲ ಸಾವಿರಾರು ಜನರಿಗೆ ಅನ್ನ ಹಾಕಿದ ಇಸ್ಕಾನ್ ಅಧ್ಯಕ್ಷರನ್ನು ಜೈಲಿನಲ್ಲಿ ಇರಿಸಲಾಗಿದೆ. ಅವರನ್ನು ನೋಡಲು ಅಥವಾ ಮಾತನಾಡಿಸಲು ಹೋದವರನ್ನು ಬಂಧಿಸಲಾಗುತ್ತಿದೆ. ಇದು ಎಂತಹ ಹೀನ ಕೃತ್ಯ ಅಲ್ಲವೆ.? ಬಾಂಗ್ಲಾದಲ್ಲಿ ಕಂಡ ಕಂಡ ಹಿಂದೂಗಳನ್ನು ಬೀದಿ, ಬೀದಿಗಳಲ್ಲಿ ಗಲ್ಲಿ, ಗಲ್ಲಿಗಳಲ್ಲಿ ಓಡಾಡಿಸಿಕೊಂಡು ಹೊಡೆಯಲಾಗುತ್ತಿದೆ. ಹಾಗಾದರೆ ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿರುವ ನಾಲ್ಕು ಕೋಟಿ ಅಧಿಕ ಸಂಖ್ಯೆಯಲ್ಲಿ ಇರುವ ಬಾಂಗ್ಲಿಗರನ್ನು ನಾವೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಸಾಯೋವರೆಗೂ ಸಿದ್ದರಾಮಯ್ಯ ಜೊತೆ ನಿಲ್ಲುತ್ತೇನೆ: ಜನಕಲ್ಯಾಣ ಸಮಾವೇಶದಲ್ಲಿ ಡಿಕೆಶಿ ಶಪಥ!
ಹಿಂದೂ ಹಿತ ರಕ್ಷಣಾ ಸಮಿತಿ ರಾಜ್ಯ ಮುಖಂಡ ಮುರಳಿ ಮಾತನಾಡಿ, ಬಾಂಗ್ಲಾದಲ್ಲಿ ಇರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಯ ವಿರುದ್ಧ ಭಾರತ ಎದ್ದು ನಿಲ್ಲಬೇಕಾಗಿದೆ. ಅಷ್ಟೇ ಅಲ್ಲ, ಜಗತ್ತಿನಲ್ಲಿರುವ ಎಲ್ಲಾ ಹಿಂದೂಗಳು ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಹಿಂದೂ ಸಮಾಜ ಎದ್ದು ನಿಂತಿದೆ ಎಂದರೆ ಮುಸ್ಲಿಂ ಮೂಲಭೂತವಾದಿಗಳಿಗೆ ಎಚ್ಚರಿಕೆ ಕೊಟ್ಟಂತೆ ಇರಬೇಕು. ಅದಕ್ಕಾಗಿ ಹಿಂದೂ ಧರ್ಮ ಅಂತ ಬಂದಾಗ ನಾನು ಒಕ್ಕಲಿಗ, ನಾನು ಕೊಡವ, ಹಿಂದುಳಿದ ವರ್ಗ ಮತ್ತೊಂದು ಜಾತಿ ಎಂದು ಯೋಚಿಸದೆ ಹಿಂದೂ ನಾವೆಲ್ಲಾ ಒಂದು ಎಂದು ಒಗ್ಗಟ್ಟಾಗಬೇಕಾಗಿದೆ ಎಂದರು.