ಹಾಲು, ಮೊಸರಿನ ದರ ಏರಿಕೆ: ರೈತರ ಹೆಸರಲ್ಲಿ ಗ್ರಾಹರಿಗೆ ಬರೆ..!

Published : Jan 30, 2020, 05:27 PM ISTUpdated : Jan 30, 2020, 07:14 PM IST
ಹಾಲು, ಮೊಸರಿನ ದರ ಏರಿಕೆ: ರೈತರ ಹೆಸರಲ್ಲಿ ಗ್ರಾಹರಿಗೆ ಬರೆ..!

ಸಾರಾಂಶ

ನಿರೀಕ್ಷೆಯಂತೆ ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆಯಾಗಿದ್ದು, ರೈತರಿಗೆ ಬಂಪರ್‌ ಸಿಕ್ಕಂತಾದ್ರೆ, ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಹಾಗಾದ್ರೆ ಹಾಲಿನ ಬೆಲೆ ಎಷ್ಟು ಏರಿಕೆ..? ಯಾವಾಗಿನಿಂದ ಜಾರಿಗೆ? ಇಲ್ಲಿ ಸಂಪುರ್ಣ ಮಾಹಿತಿ

ಬೆಂಗಳೂರು, (ಜ.30): ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಇದೇ ಫೆಬ್ರವರಿ 1ರಿಂದ ನೂತನ ದರ ಜಾರಿಗೆ ಬರಲಿದೆ.

"

ಹಾಲು ಮತ್ತು ಮೊಸರು ಪ್ರತಿ ಲೀಟರ್‌ಗೆ 2 ರೂ. ಏರಿಕೆ ಮಾಡಲಾಗಿದೆ ಎಂದು ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇಂದು (ಗುರುವಾರ) ಅಧಿಕೃತವಾಗಿ ತಿಳಿಸಿದ್ದಾರೆ. 

ನಂದಿನಿ ಹಾಲು ದರ 3 ರು. ಏರಿಕೆ : ರೈತರಿಗೆ ಬಂಪರ್

ಹಾಲು, ಮೊಸರು ಬೆಲೆ ಏರಿಕೆಯಿಂದಾಗಿ ರೈತರಿಗೆ ಬಂಪರ್ ಆದ್ರೆ, ಗ್ರಾಹಕರಿಗೆ ಬರೆ ಎಳೆದಂತಾಗಿದೆ.

ಇತ್ತೀಚೆಗೆ ಕೆಎಂಎಫ್ ಈ ಬಗ್ಗೆ ಸಭೆ ನಡೆಸಿದ್ದು, ನಂದಿನಿ ಹಾಲು-ಮೊಸರು ದರದಲ್ಲಿ 3 ರೂ. ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತವಾನೆ ಸಲ್ಲಿಸಿತ್ತು. ಆದ್ರೆ, ಸರ್ಕಾರ 2 ರೂ. ಏರಿಕೆಗೆ ಒಪ್ಪಿಗೆ ಸೂಚಿಸಿದೆ.

 ರೈತರಿಗೆ ಲಾಭ ನೀಡುತ್ತೇವೆ ಎಂಬ ಉದ್ದೇಶದಿಂದ ಹಾಲಿನ ದರ ಹೆಚ್ಚಳ ಮಾಡಿರುವ ಕೆಎಂಎಫ್, ರೈತರಿಗೆ 1 ರೂಪಾಯಿ ಕೊಟ್ಟು ಇನ್ನುಳಿದ 1 ರೂ.ಅನ್ನು ತನ್ನ ಅಕೌಂಟಿಗೆ ಹಾಕಿಕೊಳ್ಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

KSRTC ಪ್ರಯಾಣಿಕರಿಗೆ ಬಿಗ್ ಶಾಕ್! ಇಂಧನ ಬೆಲೆ ಏರಿಕೆ ನೆಪ, ಶೀಘ್ರ ಬಸ್‌ ದರ ಹೆಚ್ಚಳ, ಸಾರಿಗೆ ಸಚಿವ ಮಹತ್ವದ ಸುಳಿವು
80ನೇ ಸ್ವಾತಂತ್ರ್ಯ ದಿನ: 72,000 ಸರ್ಕಾರಿ ನೌಕರಿ, ಉಚಿತ ಕೋಡಿಂಗ್, AI ವಿವಿ ಘೋಷಿಸಿದ ಸಿಎಂ ಡಿ.ಕೆ.ಶಿವಕುಮಾರ್!