Dharmasthala Burude Gang: ಇದನ್ನೇ ನಾವು ಬಡ್ಕೊಂಡಿದ್ದು, ಅವರು ಹೇಳ್ತಿರೋದು ಸುಳ್ಳು: ಕಿರಿಕ್ ಕೀರ್ತಿ

Published : Oct 30, 2025, 10:29 AM IST
Kirik Keerthi on Dharmasthala case

ಸಾರಾಂಶ

Dharmasthala case update: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿದ್ದ 'ಬುರುಡೆ ಗ್ಯಾಂಗ್', ಇದೀಗ ತಾವೇ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂಳಲಾಗಿದೆ ಎಂದು ಆರೋಪಿಸಿದ್ದವರೇ ಇದೀಗ ಆ ಪ್ರಕರಣ ಹಿಂಪಡೆಯಲು ಮುಂದಾಗಿದ್ದಾರೆ. ಯೂ ಟರ್ನ್‌ ಹೊಡೆದಿರುವ ‘ಬುರುಡೆ ಗ್ಯಾಂಗ್‌’, ಇದೀಗ ದೂರುದಾರ ಚಿನ್ನಯ್ಯ (Mask Man Chinnaiah) ಹೇಳಿಕೆ ಮೇರೆಗೆ ದಾಖಲಾಗಿದ್ದ ಮೂಲ ಪ್ರಕರಣವನ್ನೇ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದೆ. ಧರ್ಮಸ್ಥಳದ ಪರವಾಗಿ, ಬುರಡೆ ಗ್ಯಾಂಗ್ ವಿರುದ್ಧ ಬಿಗ್‌ಬಾಸ್ ಸ್ಪರ್ಧಿ, ಕಿರಿಕ್ ಕೀರ್ತಿ ಹೋರಾಟ ನಡೆಸಿದ್ದರು. ಪ್ರಕರಣದ ತನಿಖೆ ಆರಂಭದ ದಿನದಿಂದಲೂ ಇದರಲ್ಲಿ ಷಡ್ಯಂತ್ಯವಿದೆ ಎಂದು ಕಿರಿಕ್ ಕೀರ್ತಿ (Kirik Keerthi) ಅನುಮಾನ ವ್ಯಕ್ತಪಡಿಸಿದ್ದರು.

ಅವರು ಹೇಳ್ತಿರೋದು ಸುಳ್ಳು ಸುಳ್ಳು ಸುಳ್ಳು

ಇದೀಗ ಬುರುಡೆ ಗ್ಯಾಂಗ್ ರಿಟ್ ಅರ್ಜಿ ಸಲ್ಲಿಸಿರುವ ಕುರಿತು ಕಿರಿಕ್ ಕೀರ್ತಿ ಪ್ರತಿಕ್ರಿಯಿಸಿದ್ದು, ಇನ್‌ಸ್ಟಾಗ್ರಾಂ ಏಷ್ಯಾನೆಸ್ ಸುವರ್ಣ ನ್ಯೂಸ್ ವರದಿಯ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೇ ನಾವು ಬಡ್ಕೊಂಡಿದ್ದು. ಅವರು ಹೇಳ್ತಿರೋದು ಸುಳ್ಳು ಸುಳ್ಳು ಸುಳ್ಳು ಅಂತ. ಇವತ್ತು ಅವರೇ ಒಪ್ಪಿಕೊಂಡು ಕೊಟ್ಟ ಕೇಸ್‌ನ ಅರ್ಜಿ ವಾಪಾಸ್ ಕೋರಿ ಅರ್ಜಿ ಹಾಕಿದ್ದಾರಂತೆ ಬುರುಡೆ ಗ್ಯಾಂಗ್. ಹೇಳಿದ್ದಕ್ಕೆ ನಮ್ಮನ್ನೇ ಕೆಟ್ಟವರಾಗಿಸಿದ್ರಿ. ಈಗೇನಂತೀರಿ ಎಂದು ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದ್ದಾರೆ.

ವಸಂತ್ ಗಿಳಿಯಾರ್ ಪ್ರತಿಕ್ರಿಯೆ

ಇನ್ನು ಧರ್ಮಸ್ಥಳದ ಪರವಾಗಿ ನಿಂತಿದ್ದ ಮತ್ತೋರ್ವ ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್, SIT ತನಿಖೆಗೆ ಸ್ಟೇ ತರಲು ಹೊರಟ ಬುರುಡೆ ಗ್ಯಾಂಗಿಗೆ ಕರ್ನಾಟಕದ ಜನರು ಯಾವುದರಲ್ಲಿ ಹೊಡೆಯಬೇಕು ಹೇಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಸರ್ಕಾರ ಆ ಬುರುಡೆ ಗ್ಯಾಂಗ್ ನ್ನು ಒದ್ದು ಒಳಗೆ ಹಾಕಬೇಕು. ಇಷ್ಟೆಲ್ಲ ಡ್ರಾಮಾವನ್ನು ಆ ಬುರುಡೆ ಗ್ಯಾಂಗ್ ಮಾಡಿದ್ರೂ ಸುಮ್ಮನೆ ಬಿಟ್ಟಿದ್ದಾರಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನ್‌ಸ್ಪೆಕ್ಟರ್‌ ಮಂಜುನಾಥ ಗೌಡಗೆ ಮುಂಭಡ್ತಿ

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Timorodi) ಹಾಗೂ ತಂಡದ ವಿರುದ್ಧ ಪೊಲೀಸರು ಬೆನ್ನುಬಿದ್ದಿರುವಂತೆಯೇ ಅವರಿಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ SIT)ದಲ್ಲಿದ್ದ ಇನ್‌ಸ್ಪೆಕ್ಟರ್‌ ಮಂಜುನಾಥ ಗೌಡಗೆ ಮುಂಭಡ್ತಿ ಲಭಿಸಿದ್ದು, ಅವರಿಗೆ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಆಗಿ ಭಡ್ತಿ ನೀಡಲಾಗಿದೆ.

ಇದನ್ನೂ ಓದಿ: 'ಬಿಚ್ಕೊಂಡು ನಿಂತ್ರೂ ವಿಡಿಯೋ ಮಾಡ್ತೀರೇನ್ರಿ?' ಮಾಧ್ಯಮಗಳ ಮೇಲೆ ಸುಜಾತಾ ಭಟ್ ಕೆಂಡಾಮಂಡಲ!

ಬುರುಡೆ ಕೇಸಿನ ಆರೋಪಿ ಚಿನ್ನಯ್ಯನಿಗೆ ಬೆದರಿಸಿ ವಿಡಿಯೋ ಹೇಳಿಕೆ ಕೊಡಿಸಿದ್ದಾರೆ ಎಂದು ಮಂಜುನಾಥ ಗೌಡರ ವಿರುದ್ಧ ತಿಮರೋಡಿ, ತಂಡ ಗಂಭೀರ ಆರೋಪ ಮಾಡಿತ್ತು. ಇದಲ್ಲದೆ ಅನಾಥ ಶವಗಳ ಉತ್ಖನನ ವೇಳೆ ಪಾಯಿಂಟ್ ನಂಬರ್‌ 2, 3, 4 ಅನ್ನು ಅಗೆಯುವಾಗ ಆರೋಪಿ ಚಿನ್ನಯ್ಯನ ಷಡ್ಯಂತ್ರದ ಬಗ್ಗೆ ಇನ್‌ಸ್ಪೆಕ್ಟರ್‌ ಮಂಜುನಾಥ ಗೌಡರು ವಿಡಿಯೋ ಮಾಡಿ ಬಯಲಿಗೆಳೆದಿದ್ದರು. ಹೀಗಾಗಿ, ಎಸ್‌ಐಟಿ ತನಿಖಾ ತಂಡದಿಂದ ಮಂಜುನಾಥ ಗೌಡರನ್ನು ಹೊರಗಿಡುವಂತೆ ತಿಮರೋಡಿ, ತಂಡ ಹಿರಿಯ ಪೊಲೀಸ್‌ ಅಧಿಕಾರಿಗಳ ಪಟ್ಟು ಹಿಡಿದಿತ್ತು. ಅಲ್ಲದೆ, ಮಂಜುನಾಥಗೌಡರನ್ನು ಅಮಾನತು ಮಾಡಲು ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದರು. ಇದೀಗ ಡಿವೈಎಸ್ಪಿಯಾಗಿ ಮುಂಭಡ್ತಿ ಪಡೆದು ಮಂಜುನಾಥ ಗೌಡ ಅವರು ಎಸ್ಐಟಿಯಲ್ಲೇ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಇದನ್ನೂ ಓದಿ: ತಾವೇ ಕೊಟ್ಟ ಕೇಸ್ ರದ್ದುಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ, ಅರೆಸ್ಟ್ ತಪ್ಪಿಸಲು ಕೊನೆ ಪ್ರಯತ್ನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್