
ಮೈಸೂರು(ಮೇ.19): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಬೇರೆ ಬೆರೆ ನಗರ ಪಟ್ಟಗಳಲ್ಲಿ, ಇತರ ರಾಜ್ಯಗಳಲ್ಲಿ ಸಿಲುಕಿಕೊಂಡವರನ್ನು ಮತ್ತೆ ತಮ್ಮ ತಮ್ಮ ಊರುಗಳಿಗೆ ಸೇರಿಸಲು ಕೇಂದ್ರ ಸರ್ಕಾರ ಶ್ರಮಿಕ ರೈಲು ಸೇವೆ ಆರಂಭಿಸಿದೆ. ಇದೀಗ ಸೌತ್ ವೆಸ್ಟರ್ನ್ ರೈಲ್ವೇ ಶ್ರಮಿಕ ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ನೀಡಿದೆ. ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ.
ಕಸಮುಕ್ತ ನಗರ: ಮತ್ತೆ ಟಾಪಾಗಿಬಂದ ಮೈಸೂರು! ಕರ್ನಾಟಕದ ಹಿರಿಮೆ
ಶ್ರಮಿಕ ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ನೀಡುವ ಮೂಲಕ ಮಕ್ಕಳ ಮುಖದಲ್ಲಿ ನಗು ನೋಡುತ್ತಿದ್ದೇವೆ. ಮಕ್ಕಳ ಸಂತೋಷದಲ್ಲಿ ನಾವು ಪಾಲುದಾರರುತ್ತಿರುವುದೇ ನಮಗೆ ಸಂತಸ ತಂದಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ಹೇಳಿದೆ. ಇಷ್ಟೇ ಅಲ್ಲ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿಬೇಕು ಈ ಮೂಲಕ ಸ್ವಾಲಂಬಿ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದ್ದರು.
ಇದೀಗ ಸೌತ್ ವೆಸ್ಟರ್ನ್ ರೈಲ್ವೇ ಚನ್ನಪಟ್ಟಣದಲ್ಲಿ ತಯಾರಾಗುವ ಜನಪ್ರಿಯ ಗೊಂಬೆಗಳನ್ನು ಮಕ್ಕಳಿಗೆ ನೀಡುವ ಮೂಲಕ ಪ್ರಧಾನಿ ಮಾತಿಗೆ ಸ್ಪಂದಿಸಿದೆ. ಪ್ರದಾನಿ ಮೋದಿ ಮಾತಿನಂತೆ ಸ್ಥಳೀಯ ಕಲಾಕಾರರನ್ನು ಪ್ರೋತ್ಸಾಹಿಸುವ ಅವಕಾಶವೂ ಸಿಕ್ಕಿದೆ ಎಂದು ಎರಡನೇ ಟ್ವೀಟ್ ಮಾಡಿದೆ.
ಚನ್ನಪಟ್ಟಣದ ಬೊಂಬೆಗಳಿಗೆ 200 ವರ್ಷದ ಇತಿಹಾಸವಿದೆ. ಮರದಿಂದ ಈ ಬೊಂಬೆಗಳನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕ ಮಾತ್ರವಲ್ಲ ಇತರ ರಾಜ್ಯಗಳಲ್ಲೂ ಚನ್ನಪಟ್ಟಣದ ಗೊಂಬೆಗಳು ಹೆಚ್ಚು ಪ್ರಸಿದ್ದಿ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ