ಖಾಸಗಿ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ..!

By Suvarna NewsFirst Published May 19, 2020, 4:29 PM IST
Highlights

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಗೆ ಯಾವುದೇ ವಾಹನಗಳು ಇಳಿದಿರಲಿಲ್ಲ. ಹೀಗಾಗಿ ಖಾಸಗೀ ವಾಹನ ಮಾಲೀಕರು ತೆರಿಗೆ ಹೇಗಪ್ಪಾ ಕಟ್ಟೋದು ಎಂಬ ಯೋಚನೆಯಲ್ಲಿದ್ದರು. ಇವರಿಗೆ ಇದೀಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.

ಬೆಂಗಳೂರು, (ಮೇ.19): ಖಾಸಗಿ ವಾಹನಗಳ ಮೇಲಿನ 2 ತಿಂಗಳ ತೆರಿಗೆ ವಿನಾಯಿತಿ ನೀಡಲಾಗಿದೆ. ಖಾಸಗಿ ಟೆಂಪೋ, ಟ್ಯಾಕ್ಸಿ, ಬಸ್ಸುಗಳ ಮೇಲಿನ ಎರಡು ತಿಂಗಳ ತೆರಿಗೆ ಕಟ್ಟುವಂತಿಲ್ಲ. 

 ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ಟ್ಯಾಕ್ಸ್ ಮೇಲೆ ರಾಜ್ಯ ಸಾರಿಗೆ ಇಲಾಖೆ ವಿನಾಯಿತಿ ನೀಡಿದೆ. ಒಂದು ವೇಳೆ ಈಗಾಗಲೇ ಟ್ಯಾಕ್ಸ್ ಕಟ್ಟಿರುವವರಿಗೆ ಆ ಹಣ ಮುಂದಿನ ತಿಂಗಳಿಗೆ ಕ್ಯಾರಿ ಓವರ್ ಆಗಲಿದೆ. ಇದರಿಂದ ಖಾಸಗಿ ವಾಹನ ಮಾಲೀಕರಿಗೆ ಸ್ವಲ್ಪ ಮಟ್ಟಿಗಿನ ರಿಲೀಫ್ ಸಿಕ್ಕಂತಾಗಿದೆ.

ಪ್ರಯಾಣಿಕರಿಗೆ ಬಿಗ್ ಶಾಕ್: 4 ತಿಂಗ್ಳು ಬಸ್ ರಸ್ತೆಗಿಳಿಯಲ್ಲ

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಲಾಕ್ ಡೌನ್ ನಿಂದಾಗಿ ಖಾಸಗಿ ವಾಹನಗಳ ಸಂಚಾರ ನಿಲುಗಡೆಯಾಗಿ, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಟೆಂಪೋ, ಟ್ಯಾಕ್ಸಿ, ಖಾಸಗಿ ಬಸ್ ಮೇಲಿನ ತೆರಿಗೆಯನ್ನು ಕಟ್ಟೋದಕ್ಕೆ 2 ತಿಂಗಳ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದರು.

"

  ಈಗಾಗಲೇ ಟ್ಯಾಕ್ಸ್ ಕಟ್ಟಿದ್ರೆ ಕ್ಯಾರಿ ಓವರ್ ಆಗಲಿದ್ದು, ಈ ಸಂಬಂಧ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಲಿದೆ ಎಂದು ತಿಳಿಸಿದರು.

ತೆರಿಗೆ ವಿನಾಯಿತಿ ನೀಡುವಂತೆ ಖಾಸಗಿ ಬಸ್​ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು. ಅಲ್ಲದೇ ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಸೆಪ್ಟೆಂಬರ್​ ವರೆಗೆ ಬಸ್​ಗಳನ್ನು ರಸ್ತೆಗೆ ಇಳಿಸುವುದಿಲ್ಲ ಎನ್ನುವ ಎಚ್ಚರಿಕೆ ನೀಡಿತ್ತು.

click me!