ಸರ್ಕಾರದ ಅಡಿಯಲ್ಲಿಯೇ ಕೆಲಸ ಮಾಡುವ ನಿಗಮವೊಂದು, ಸರ್ಕಾರದ ಇಲಾಖೆಗೆ ಸೈಟ್ ನೀಡಲು ಮೀನಮೇಷ ಎಣಿಸುತ್ತಿದ್ದು, ಖಾಸಗಿಯವರಿಗೆ ಬೇಕು ಬೇಕೆಂದಾಗ ಸಿಎ ಸೈಟ್ ಹಂಚಿಕೆ ಮಾಡಿರುವುದು ಗೊತ್ತಾಗಿದೆ.
ಬೆಂಗಳೂರು (ಸೆ.3): ಸರ್ಕಾರದ ಅಡಿಯಲ್ಲಿಯೇ ಕೆಲಸ ಮಾಡುವ ನಿಗಮ, ಸರ್ಕಾರದ ಇಲಾಖೆಗೆ ಸೈಟ್ ನೀಡಲು ಮೀನಮೇಷ ಎಣಿಸುತ್ತಿದೆ. ಇದೇ ನಿಗಮ, ಖಾಸಗಿಯವರಿಗೆ ಬೇಕು ಬೇಕೆಂದಾಗ ಸಿಎ ಸೈಟ್ ಹಂಚಿಕೆ ಮಾಡಿರುವುದು ಗೊತ್ತಾಗಿದೆ. ಕೆಐಎಡಿಬಿ ಸಿಎ ನಿವೇಶನ ಹಂಚಿಕೆಯಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿರುವುದು ಗೊತ್ತಾಗಿದೆ. ಸರ್ಕಾರದ ಇಲಾಖೆಗೆ ಜಾಗ ನೀಡಲು ಕೆಐಎಡಿಬಿ ಮೀನಾಮೇಷ ಎಣಿಸಿದೆ. ಇದೇ ಸಮಯದಲ್ಲಿ ಖಾಸಗಿ ಟ್ರಸ್ಟ್, ಕಂಪೆನಿಗಳಿಗೆ ಸಿಎ ನಿವೇಶನ ನೀಡಲು ನಾಮುಂದು, ತಾಮುಂದು ಎಂದು ನಿಂತಿದೆ. ಸರ್ಕಾರದ ಇಲಾಖೆ ಕೇಳಿದ್ದಕ್ಕೆ ಸಿಎ ಜಾಗ ನೀಡದ ಕೆಐಎಡಿಬಿ ಖಾಸಗಿಯವರು ಇದೇ ಸೈಟ್‌ಗಳನ್ನು ಕೇಳಿದರೆ ಅನಾಮತ್ತಾಗಿ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಜಾಗ ನೀಡುವ ಕೆಐಎಡಿಬಿ, ಸರ್ಕಾರದ ಇಲಾಖೆ ಹಲವು ವರ್ಷಗಳಿಂದ ಸೈಟ್‌ಗಾಗಿ ಬೇಡಿಕೆ ಇರಿಸಿದ್ದರೂ ಅದನ್ನು ಕನಿಷ್ಠ ಪರಿಗಣನೆಯನ್ನೂ ಮಾಡಿಲ್ಲ. ಇದೇ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಲ್ಲೇ ಸಮಾಜ ಕಲ್ಯಾಣ ಇಲಾಖೆ ಸಿಎ ಜಾಗಕ್ಕಾಗಿ ಅರ್ಜಿ ಹಾಕಿತ್ತು.
ಎರಡು ಎಕರೆ ಜಾಗ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಮನವಿ ಮಾಡಿದ್ದರು. ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಸ್ಕಿಲ್ ಡೆವಲಪ್ಮೆಂಟ್ ಕೇಂದ್ರ ಮಾಡಲು ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಎರಡು ಎಕರೆ ಜಾಗ ಕೇಳಿದ್ದರು. ಕಾರ್ಯನಿರತ ಪುರುಷ ಹಾಗೂ ಮಹಿಳೆಯರ ಹಾಸ್ಟೆಲ್ ಮಾಡಲು ಇಲಾಖೆ ಜಾಗ ಕೇಳಿತ್ತು. ಆದರೆ ಸಮಾಜ ಕಲ್ಯಾಣ ಇಲಾಖೆಯ ಮನವಿಗೆ ಈವರೆಗೂ ಕೆಐಎಡಿಬಿ ಜಾಗ ನೀಡಿಲ್ಲ.
ನನ್ನ ತಂಟೆಗೆ ಬಂದವರನ್ನ ಹಿಂದೆಯೂ ಬಿಟ್ಟಿಲ್ಲ ಮುಂದೆಯೂ ಬಿಡಲ್ಲ: ಏಕವಚನದಲ್ಲೇ ನಿರಾಣಿಗೆ ಎಂ.ಬಿ. ಪಾಟೀಲ್ ತಿರುಗೇಟು ..!
ಜಾಗ ಹಂಚಿಕೆ ಏಕಗವಾಕ್ಷಿ ಸಮಿತಿ ಸಮಾಜ ಕಲ್ಯಾಣ ಇಲಾಖೆ ಮನವಿ ಪುರಸ್ಕರಿಸಬಹುದು ಎಂದು ಶಿಫಾರಸು ಮಾಡಿತ್ತು. ಆದರೆ ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಕೆಐಎಡಿಬಿ ಅರ್ಜಿ ಪರಿಗಣನೆಯನ್ನೇ ಮಾಡಿರಲಿಲ್ಲ.
ರಾಷ್ಟ್ರೋತ್ಥಾನ ಪರಿಷತ್, ಚಾಣಕ್ಯ ವಿವಿಗೆ ನೀಡಿದ ಭೂಮಿ ವಾಪಸ್?: ಎಂ.ಬಿ. ಪಾಟೀಲ