ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಗಲಭೆಯಲ್ಲಿ ಕೇರಳದ ಮುಸ್ಲಿಂ ಸಂಘಟನೆಗಳ ಸದಸ್ಯರ ಲಿಂಕ್ ಇದೆಯೇ ಎಂಬ ಅನುಮಾನ ಕಂಡುಬಂದಿದೆ. ಬಂಧಿತರಲ್ಲಿ ಇಬ್ಬರು ಕೇರಳದ ಮುಸ್ಲಿಂ ಯುವಕರು ಇರುವುದು ಪತ್ತೆಯಾಗಿದೆ.
ಮಂಡ್ಯ (ಸೆ.15): ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಗಲಭೆ ನಡೆದಿದ್ದು, ಇದಕ್ಕೆ ಕೇರಳದ ಮುಸ್ಲಿಂ ಸಂಘಟನೆಗಳ ಸದಸ್ಯರ ಲಿಂಕ್ ಇದೆಯೇ ಎಂಬ ಅನುಮಾನ ಕಂಡುಬಂದಿದೆ. ಗಲಭೆಯಲ್ಲಿ ಭಾಗಿಯಾದವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿದ 154 ಜನರ ಪೈಕಿ ಇಬ್ಬರು ಕೇರಳದ ಮಸ್ಲಿಂ ಯುವಕರು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಪಿಎಫ್‌ಐ ಸಂಘಟನೆ ಕೈವಾಡವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಹೌದು, ನಾಗಮಂಗಲ ಗಲಭೆ ಪ್ರಕರಣ. ಕೋಮುಗಲಭೆಗೆ ಕೇರಳ ಲಿಂಕ್ ಆರೋಪ? ಕೇಳಿಬಂದಿದೆ. ಈಗಾಗಲೇ ಪ್ರಕರಣ ಸಂಬಂಧ ಕೇರಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ. ನಾಗಮಂಗಲ ಗಲಭೆ ಪ್ರಕರಣದ ಆರೋಪಿಗಳ ಪೈಕಿ 44 ಆರೋಪಿ ಯೂಸುಫ್, 61ನೇ ಆರೋಪಿ ನಾಸೀರ್ ಕೇರಳ ರಾಜ್ಯದ ಮಲಪ್ಪುರಂ ಮೂಲದವರು ಎಂಬುದು ಪತ್ತೆಯಾಗಿದೆ. ಹೀಗಾಗಿ, ರಾಜ್ಯದ ಪೊಲೀಸರು ಈ ಇಬ್ಬರು ಮುಸ್ಲಿಂ ಯುವಕರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್ಯದ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ರವಾನಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಕಿಸ್ತಾನದಲ್ಲಿ ಇದೆಯೇ?, ಕಾಂಗ್ರೆಸ್ ಎಂದಿಗೂ ಹಿಂದೂ ವಿರೋಧಿ: ಪ್ರಹ್ಲಾದ್ ಜೋಶಿ
ನಾಗಮಂಗಲದ ಗಲಭೆ ನಡೆಯಲು ಕೇರಳದಿಂದ ಬಂದ ವ್ಯಕ್ತಿಗಳೇ ಕಾರಣವಾಗಿದ್ದಾರಾ? ಎಂಬ ಅನುಮಾನಗಳು ಕೂಡ ವ್ಯಕ್ತವಾಗಿದೆ. ಈ ಇಬ್ಬರು ಮುಸ್ಲಿಂ ವ್ಯಕ್ತಿಗಳು ಕೇಂದ್ರ ಸರ್ಕಾರದಿಂದ ನಿಷೇಧ ಮಾಡಲಾದ ಪಿಎಫ್‌ಐ ಸಂಘಟನೆಯ ಸದಸ್ಯರಾ ಎ<ಬ ಅನುಮಾನವೂ ಕಂಡುಬಂದಿದೆ. ಜೊತೆಗೆ, ಈ ಹಿಂದೆ ಯಾವುದಾದರೂ ಪ್ರಕರಣಗಳು ಇವರಾ ಮೇಲೆ ಇದೀಯಾ. ಯಾವುದಾದರೂ ಗಲಾಟೆಯಲ್ಲಿ ಪಾಲ್ಗೊಂಡಿದ್ದಾರಾ.? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮುಂದಾಗಿದ್ದಾರೆ. ಈ ಆರೋಪಿಗಳಿಬ್ಬರೂ ನಿಷೇಧಿತ PFI ಸಂಘಟನೆ ಸದಸ್ಯರು ಎಂದು ವಿಹೆಚ್‌ಪಿ ಆರೋಪ ಮಾಡಿದೆ. ಇನ್ನು ಓ ಪಗ್ರಕರಣದಲ್ಲಿ ಭಾಗಿಯಾದ 55 ಜನರನ್ನು ಪೊಲೀಸ್ ಇಲಾಖೆಯಿಂದ ಬಂಧಿಸಲಾಗಿದೆ.
ಇನ್ನು ಪೊಲಸರು ಎಫ್‌ಐಆರ್‌ನಲ್ಲಿ ದಾಖಲಿಸಿರುವ ಕೇರಳದ ಇಬ್ಬರು ಯುವಕರು ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಮಾಡುವುದಕ್ಕೆ ಮೊದಲೇ ಪ್ಲಾನ್ ಮಾಡಿ, ಶಾಂತವಾಗಿದ್ದ ನಾಗಮಂಗಲಕ್ಕೆ ಕೊಳ್ಳಿ? ಇಟ್ಟಿದ್ದಾರಾ ಎಂಬ ಅನುಮಾನಗಳೂ ವ್ಯಕ್ತವಾಗಿವೆ. FIRನಲ್ಲಿ ದಾಖಲಿಸಲಾದ ಈ ಎರಡು ಹೆಸರುಗಳು ಇಂತಹ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿವೆ. ಪೊಲೀಸರು ದಾಖಲಿಸಿದ FIRನಲ್ಲಿ 74 ಆರೋಪಿಗಳ ಪೈಕಿ ಇಬ್ಬರು ಕೇರಳದವರು. 4ನೇ ಅರೋಪಿ ಯೂಸುಫ್, 61ನೇ ಆರೋಪಿ ನಾಸೀರ್ ಕೇರಳದವರು. ಆರೋಪಿಗಳಿಬ್ಬರೂ ನಿಷೇಧಿತ PFI ಸಂಘಟನೆ ಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪ ಮಾಡಿದೆ.
ರಾಜ್ಯದಲ್ಲಿ ತಾಲಿಬಾನ್ ಸರ್ಕಾರವಿದೆ: ವಿಪಕ್ಷ ನಾಯಕ ಆರ್ ಆಶೋಕ್ ವಾಗ್ದಾಳಿ
ನಾಗಮಂಗಲದ ಗಲಭೆ ನಡೆಸಲು ಪೂರ್ವ ತಯಾರಿ ನಡೆದಿದೆ. ಇನ್ನು ಗಲಭೆ ನಡೆಸಲು ಪೂರ್ವ ತಯಾರಿ ಮಾಡಲಾಗಿದ್ದು, ಗಲಾಟೆ ನಡೆದ ದಿನ ಮೆಡಿಕಲ್ ನಲ್ಲಿ 200 ಮಾಸ್ಕ್ ಖರೀದಿ ಮಾಡಲಾಗಿದೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡದ ಇದೆ ಎಂದು ಆರೋಪ ಕೇಳಿಬಂದಿದ್ದು, ಪ್ರಕರಣದ ತನಿಖೆಯನ್ನ NIA ನಡೆಸಬೇಕೆಂದ ವಿಶ್ವ ಹಿಂದೂ ಪರಿಷರ್ ಆಗ್ರಹ ಮಾಡಿದೆ.