
ವಿಜಯಪುರ (ಸೆ.15): ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣ ಬಿಟ್ಟರೆ ಬೇರೇನೂ ಮಾಡುವುದಿಲ್ಲ. ಕಾಂಗ್ರೆಸ್ ಅಂದ್ರೆ ಅದು ಮುಸ್ಲಿಂ ಪಾರ್ಟಿ ಎಂದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಕಾಂಗ್ರೆಸ್ ಅಂದ್ರೇನೆ ಮುಸ್ಲಿಂ ಪಾರ್ಟಿ ಇದ್ದಹಾಗೆ ಇದು ನಮ್ಮ ಹಿಂದೂಗಳಿಗೆ ಅರ್ಥಾಗ್ತಿಲ್ಲ. ಜಾಗೃತರಾಗುವ ಬದಲು ಜಾತ್ಯಾತೀತ ಭ್ರಮೆಯಲ್ಲಿ ಕಾಂಗ್ರೆಸ್‌ನಲ್ಲಿ ಸೇರಿದ್ದಾರೆ ಎಂದರು.
ರಾಹುಲ್ ಗಾಂಧಿ ಮೀಸಲಾತಿ ತೆಗೆಯುವ ಬಗ್ಗೆ ಮಾತನಾಡಿದ್ದಾರೆ, ದಲಿತರು ಯಾಕೆ ಸುಮ್ಮನಿದ್ದಾರೆ? ಯತ್ನಾಳ್ ಪ್ರಶ್ನೆ
ಕೆಲವರು ಮೋದಿ ಸೊಕ್ಕು ಕಡಿಮೆ ಆಯ್ತು ಅಂತಾ ಖುಷಿ ಪಡುತ್ತಿದ್ದಾರೆ. ಆದರೆ ಮೋದಿ ಸೊಕ್ಕು ಕಡಿಮೆ ಆಗಿಲ್ಲ. ಹಿಂದೂಗಳ ಶಕ್ತಿ ಕಡಿಮೆಯಾಗಿದೆ. ಹಿಂದೂಗಳು ಮೋದಿಗೆ 350 ಸೀಟ್ ಕೊಟ್ಟಿದ್ದರೆ ಇವರು ಕೊಂಯ್ ಅಂತಿರಲಿಲ್ಲ. ನಮ್ಮ ದೇಶದ ಜನರು ಪ್ರೀ ಬಸ್, ಫ್ರೀ ಅಕ್ಕಿಗೆ ತಾವು ಬಲಿಯಾಗಿದ್ದಲ್ಲದೆ, ಆ ಮೂಲಕ ದೇಶವನ್ನು ಬಲಿಕೊಡ್ತಿದ್ದಾರೆ. ಉಚಿತ ಆಸೆಗೆ ಕಾಂಗ್ರೆಸ್‌ಗೆ ಮತ ನೀಡಿ ಇದೀಗ ಹಿಂದೂಗಳ ತಲೆ ತಗ್ಗಿಸುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದ ನೋಯ್ಡಾ ಜಿಲ್ಲಾಧಿಕಾರಿ, ಕಾಂಗ್ರೆಸ್ ನಾಯಕರು ಗರಂ!
ಈಗ ನೋಡಿ ಕಾಂಗ್ರೆಸ್‌ಗೆ ವೋಟು ಹಾಕಿದ ಹಿಂದೂಗಳು ಸಹ ಗಣೇಶ ಹಬ್ಬ ಮಾಡುವಂತಿಲ್ಲ. ಕಾಂಗ್ರೆಸ್ ಗೆ ವೋಟು ಮಾಡಿದವರು ಇದರಲ್ಲಿ ಭಾಗಿಯಾದ್ರೂ ಬಂಧಿಸಲಾಗುತ್ತೆ ಮುಸ್ಲಿಂರನ್ನ ಖುಷಿ ಪಡಿಸೋಕೆ ಗಣೇಶ ಮೂರ್ತಿಗಳನ್ನೇ ಬಂಧಿಸಿದ್ದಾರೆ, ಮುಸ್ಲಿಂ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ನಾಯಕರು ದೇಶದ ವಿರುದ್ಧ ಮಾತನಾಡ್ತಿದ್ದಾರೆ. ಈ ಹಿಂದೆ ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ ನಡೆಸುತ್ತೇವೆ ಎಂದಿದ್ರು. ಇದೀಗ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದ್ರೆ ಬಾಂಗ್ಲಾ ಮಾದರಿಯಲ್ಲಿ ಸಂಸತ್ತು ಹೊಕ್ಕು ಮೋದಿಯನ್ನು ಹೊಡೆಯುತ್ತೇವೆ ರೋಣದ ಶಾಸಕ ಹೇಳಿದ್ದಾನೆ. ಒಂದು ತಿಳ್ಕೊಳ್ಳಬೇಕು ಹಿಂದೂಗಳು ತಿರುಗಿಬಿದ್ದರೆ ಕಾಂಗ್ರೆಸ್ ಉಳಿಯಲ್ಲ. ದೇಶ ವಿರೋಧಿ ಕೆಲಸ ಮಾಡೋ ಸಾಬರು ಉಳಿಯೊಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ