ಬಂಡೀಪುರದಲ್ಲೊಂದು ದಿ ಎಲಿಫೆಂಟ್ ವಿಸ್ಪರರ್ಸ್ ಕಥನ: ಅನಾಥ ಆನೆ ಮರಿಗೆ ಆಸರೆಯಾದ ಕಾವಾಡಿ ದಂಪತಿ

By Govindaraj S  |  First Published Jul 19, 2023, 8:14 AM IST

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ 'ದಿ ಎಲಿಫೆಂಟ್ ವಿಸ್ಪರರ್ಸ್' ಕಿರುಚಿತ್ರದಲ್ಲಿ ವಿಶ್ವದ ಗಮನ ಸೆಳೆದ ಬೆಳ್ಳಿ-ಬೊಮ್ಮನ್ ಬಂಡೀಪುರದಲ್ಲೂ ಇದ್ದಾರೆ. ಹೌದು! ಮನುಷ್ಯ -ಪ್ರಾಣಿ ನಡುವಿನ ಬಾಂಧವ್ಯ ಹಾಗು ಸಹಬಾಳ್ವೆಗೆ ಪ್ರತೀಕವಾಗಿದೆ ಈ ನೈಜ ಸಂಗತಿ. 


ಗುಂಡ್ಲುಪೇಟೆ (ಜು.19): ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ 'ದಿ ಎಲಿಫೆಂಟ್ ವಿಸ್ಪರರ್ಸ್' ಕಿರುಚಿತ್ರದಲ್ಲಿ ವಿಶ್ವದ ಗಮನ ಸೆಳೆದ ಬೆಳ್ಳಿ-ಬೊಮ್ಮನ್ ಬಂಡೀಪುರದಲ್ಲೂ ಇದ್ದಾರೆ. ಹೌದು! ಮನುಷ್ಯ -ಪ್ರಾಣಿ ನಡುವಿನ ಬಾಂಧವ್ಯ ಹಾಗು ಸಹಬಾಳ್ವೆಗೆ ಪ್ರತೀಕವಾಗಿದೆ ಈ ನೈಜ ಸಂಗತಿ. ಅಂದರೆ, ಅವರ ರೀತಿಯಲ್ಲೇ ಕಾವಾಡಿ ದಂಪತಿ ಸ್ವಂತ ಮಗುವಿನಂತೆ ತಾಯಿಂದ ಬೇರ್ಪಟ್ಟಿರುವ ಆನೆ ಮರಿಯೊಂದನ್ನು ಸಲಹುತ್ತಿದ್ದಾರೆ. 

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಗೆ ‘ವೇದಾ’ ಮೊದಲನೇ ಹೆಣ್ಣು ಮಗಳು. ಈ ವೇದಾ ಮತ್ಯಾರೂ ಅಲ್ಲ. ಕಳೆದ ಏಳು ತಿಂಗಳ ಹಿಂದೆ ನುಗು ವಲಯದ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 7 ತಿಂಗಳ ಹೆಣ್ಣು ಆನೆ ಮರಿ. ಕೆಲವೇ ವರ್ಷಗಳ ಹಿಂದೆ ವಿವಾಹವಾಗಿರುವ ರಾಜು ಮತ್ತು ರಮ್ಯ ಮಡಿಲು ಸೇರಿರುವ ವೇದಾ ಇವರಿಗೆ ಮೊದಲ ಮಗುವಿನ ಪಾಲನೆಯ ಅನುಭವ ನೀಡುತ್ತಿದ್ದಾಳೆ.

Tap to resize

Latest Videos

undefined

ಕೆಂಪೇಗೌಡ ಪ್ರಶಸ್ತಿಗೆ ಬೆಂಗಳೂರು ವಾಸ ಕಡ್ಡಾಯ: ಬಿಬಿಎಂಪಿ

ಏಳು ತಿಂಗಳ ಹಿಂದೆ ನುಗು ಅರಣ್ಯ ಪ್ರದೇಶದಲ್ಲಿ ಈ ಆನೆ ಮರಿ ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟಾಗ 14 ದಿನಗಳ ಮಗು. ನಿಂತ ಜಾಗದಲ್ಲೇ ನಿಂತು ಕಾದು ಕನಲಿದರೂ ಅಮ್ಮ ಬರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮರಿಯನ್ನು ರಕ್ಷಣೆ ಮಾಡಿತು. ಮೈಸೂರು ಮೃಗಾಲಯಕ್ಕೆ ಕಳುಹಿಸಲು ನಿರ್ಧರಿಸಿ ಕೊನೆಗೆ ರಾಂಪುರ ಶಿಬಿರಕ್ಕೆ ಕರೆತರಲಾಯಿತು. ವೇದಾ ಎಂದು ಹೆಸರು ನಾಮಕರಣ ಮಾಡಲಾಯಿತು. 

ರೈತರ ಆತ್ಮಹತ್ಯೆ, ಬರಗಾಲ ಬಗ್ಗೆ ಚರ್ಚೆ ಮಾಡಲು ಪ್ರತಿಪಕ್ಷಗಳ ನಿರ್ಧಾರ: ಬೊಮ್ಮಾಯಿ

ರಾಜು ರಮ್ಯ ದಂಪತಿಗೆ ಅರಣ್ಯ ಇಲಾಖೆ ಆನೆ ಮರಿಯ ಪೋಷಣೆ ಜವಾಬ್ದಾರಿಯನ್ನು ನೀಡಿದ್ದು, 7 ತಿಂಗಳಿಂದ ಕಾವಾಡಿ ದಂಪತಿ  ಆನೆ ಮರಿಯನ್ನು ಜತನದಿಂದ ಕಾಪಾಡುತ್ತಿದ್ದಾರೆ. ಪುಟಾಣಿ ಆನೆಗೆ ನಿತ್ಯ ಹಾಲು ಕುಡಿಸುವುದು, ಸ್ನಾನ ಮಾಡಿಸುವುದು, ವಾಕಿಂಗ್ ಕರೆದೊಯ್ಯುವುದು, ಹುಲ್ಲು ತಿನ್ನುವ ಅಭ್ಯಾಸ ಮಾಡಿಸುವುದು  ಹೀಗೆ ಅದರೆ ಪಾಲನೆ, ಪೋಷಣೆಯಲ್ಲಿ ರಾಜು-ರಮ್ಯ ನಿರತರಾಗಿದ್ದಾರೆ. ಒಟ್ಟಿನಲ್ಲಿ ಅನಾಥವಾಗಿದ್ದ ವೇದಾಳಿಗೆ ತಾಯಿಯ ಮಮತೆ ತಂದೆಯ ಪ್ರೀತಿ ಸಿಗುತ್ತಿದ್ದು, ರಾಜು-ರಮ್ಯರನ್ನು ಆನೆ ಮರಿ ಬಹಳವಾಗಿ ಹಚ್ಚಿಕೊಂಡಿದೆ.

click me!