ಕಸ್ತೂರಿ ರಂಗನ್ ವರದಿ- ಜಡ್ಕಲ್ ಮುದೂರು ಗ್ರಾಮಸ್ಥರ ಬದುಕು ಅತಂತ್ರ ಆತಂಕ

By Suvarna News  |  First Published Sep 24, 2024, 4:25 PM IST

ಮಲೆನಾಡ ತಪ್ಪಲಲ್ಲಿ ಕಸ್ತೂರಿರಂಗನ್ ಕಿಚ್ಚು ಜೋರಾಗಿದೆ . ಪಶ್ಚಿಮಘಟ್ಟದ ತಪ್ಪಲು ಪ್ರದೇಶ ತಲ್ಲಣಗೊಂಡಿದೆ . ವರದಿಯ ಹೆಸರಲ್ಲಿ ತಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎಂದು , ಈ ಭಾಗದ ಬುಡಕಟ್ಟು ಜನರು ಸಹಾಯ ಕೇಳಿ ಜಿಲ್ಲಾಧಿಕಾರಿ ಕಚೇರಿ ವರೆಗೂ ಬಂದಿದ್ದಾರೆ . ಬೈಂದೂರು ತಾಲೂಕಿನ ಜಡ್ಕಲ್,  ಮುದೂರು ಗ್ರಾಮಸ್ಥರು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ .


ಉಡುಪಿ (ಸೆ.24): ಮಲೆನಾಡ ತಪ್ಪಲಲ್ಲಿ ಕಸ್ತೂರಿರಂಗನ್ ಕಿಚ್ಚು ಜೋರಾಗಿದೆ . ಪಶ್ಚಿಮಘಟ್ಟದ ತಪ್ಪಲು ಪ್ರದೇಶ ತಲ್ಲಣಗೊಂಡಿದೆ . ವರದಿಯ ಹೆಸರಲ್ಲಿ ತಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎಂದು , ಈ ಭಾಗದ ಬುಡಕಟ್ಟು ಜನರು ಸಹಾಯ ಕೇಳಿ ಜಿಲ್ಲಾಧಿಕಾರಿ ಕಚೇರಿ ವರೆಗೂ ಬಂದಿದ್ದಾರೆ . ಬೈಂದೂರು ತಾಲೂಕಿನ ಜಡ್ಕಲ್,  ಮುದೂರು ಗ್ರಾಮಸ್ಥರು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ .

ಕರ್ನಾಟಕದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ ಜೋರಾಗಿದೆ. ರಾಜ್ಯದ 11 ಜಿಲ್ಲೆಯಲ್ಲಿ ಆವರಿಸಿಕೊಂಡಿರುವ ಪಶ್ಚಿಮ ಘಟ್ಟದ ತಪ್ಪಲ ಜನಕ್ಕೆ ಆತಂಕ ಶುರುವಾಗಿದೆ. ಘಟ್ಟದ ತಪ್ಪಲ ಜನ ಪ್ರತಿಭಟನೆ  ನಡೆಸಿದ್ದಾರೆ. ಬೈಂದೂರು, ಜಡ್ಕಲ್ , ಮೂದುರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. 

Tap to resize

Latest Videos

undefined

ತಿರುಪತಿ ಪ್ರಸಾದಕ್ಕೆ ಕೊಬ್ಬು ಬಳಕೆ: ಪೇಜಾವರ ಶ್ರೀ ತೀವ್ರ ಆಕ್ಷೇಪ

ಪರಿಸರದ ಮೇಲೆ ಮನುಷ್ಯ ಪ್ರಾಣಿಯ ಅಟ್ಟಹಾಸ ಹೆಚ್ಚಾಗಿದ್ದು, ಪಶ್ಚಿಮ ಘಟ್ಟದ ಜೀವ ವೈವಿಧ್ಯ ಉಳಿವಿಗಾಗಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದು ಅನಿವಾರ್ಯ. ಭೂ ಕಬಳಿಕೆ, ಅಭಿವೃದ್ಧಿ ಹೆಸರಲ್ಲಿ ಕಾಡುನಾಶ, ಹಿಟ್ಯಾಚಿಗಳು ಭೂಗರ್ಭ ಬಗೆದು ಅವಾಂತರ ಸೃಷ್ಟಿ ಮಾಡುತ್ತಿವೆ. ಎಲ್ಲವನ್ನೂ ತಡೆದು ಪ್ರಾಕೃತಿಕ ಸಮತೋಲನ ಕಾಪಾಡಲು ಕಸ್ತೂರಿ ರಂಗನ್ ಸಿದ್ಧಪಡಿಸಿದ ಪಶ್ಚಿಮ ಘಟ್ಟ ಉಳಿಸುವ ವರದಿ ಜಾರಿಗೆ ಕೇಂದ್ರ ರಾಜ್ಯಕ್ಕೆ ಪ್ರಸ್ತಾಪವನ್ನು ಆರನೇ ಬಾರಿಗೆ ಕಳುಹಿಸಿದೆ. ಹಾಗ್ಗಾಗಿ ಬೈಂದೂರು ಜಡ್ಕಲ್ ,ಮೂದೂರು ಕಾರ್ಕಳ ಭಾಗದಲ್ಲಿ ಪ್ರತಿಭಟನೆ  ಜೋರಾಗಿದೆ.

ಕಸ್ತೂರಿಯಿಂದ ಜನರ ಪ್ರದೇಶವನ್ನು ಕೈಬಿಡಬೇಕು. ಜಡ್ಕಲ್ ಮುದೂರು ವ್ಯಾಪ್ತಿಯ ಸುಮಾರು 18 ಜನವಸತಿ ಪ್ರದೇಶಗಳು ವ್ಯಾಪ್ತಿಗೆ ಒಳಪಟ್ಟಿದೆ. ಈ ಜನ ವಸತಿ ಪ್ರದೇಶಗಳಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಅದರಲ್ಲೂ ಮುಖ್ಯವಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಜನಾಂಗ, ಮರಾಠಿ, ಹಸಲ ಸಮುದಾಯದವರೇ ಇಲ್ಲಿ ವಾಸ ಮಾಡುತ್ತಾರೆ. ಆದಿ ದ್ರಾವಿಡ ಜನಾಂಗದ ಪರಿಶಿಷ್ಟ ಜಾತಿ ಪಂಗಡದ ಜನರು ಹೆಚ್ಚಾಗಿ ಇಲ್ಲಿ ನೆಲೆಸಿದ್ದಾರೆ. ಅನಾದಿ ಕಾಲದಿಂದ ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಯೋಜಿತ ರೀತಿಯಲ್ಲಿ ಕಸ್ತೂರಿರಂಗನ್ ವರದಿ ಜಾರಿಯಾದರೆ ಮುಗ್ಧ ಜನರು ಬೀದಿಪಾಲಾಗುತ್ತಾರೆ ಎಂದು ಗಮನ ಸೆಳೆಯಲಾಯಿತು. ಸರ್ವ ಪಕ್ಷಗಳ ನಾಯಕರು ಕಾರ್ಯಕರ್ತರು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

ನಾಗಮಂಗಲ ಕೋಮುಗಲಭೆ ಪ್ರಕರಣ; ರಾಜ್ಯದ ಗೃಹಮಂತ್ರಿಯ ಉಡಾಫೆ ಹೇಳಿಕೆಗೆ ಸಂಸದ ಕೋಟ ಕಿಡಿ

ಸೆಪ್ಟೆಂಬರ್ 27 ರಾಜ್ಯ ಕೇಂದ್ರಕ್ಕೆ ತನ್ನ ನಿಲುವನ್ನು ಪ್ರಕಟಪಡಿಸಬೇಕೆಂಬ ಗಡುವು ನೀಡದೆ. 11 ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಈ ಬಗ್ಗೆ ಸಭೆಯಾಗಿದೆ. ಇನ್ನೆರಡು ದಿನಗಳಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ತನ್ನ ನಿಲುವು ತಿಳಿಸಬೇಕಾಗಿದೆ. ಪ್ರಕೃತಿ ಉಳಿಸಿಕೊಂಡು ಜನರ ಬದುಕನ್ನು ಕಾಪಾಡುವಲ್ಲಿ ಸರ್ಕಾರಗಳು ಗಮನ ಹರಿಸಲಿ ಅನ್ನೋದು ನಮ್ಮ ಆಶಯ.

click me!