ಕಾರವಾರ ಸೇತುವೆ ಕುಸಿತ, ಪೊಲೀಸರು ಬರದೇ ಇದ್ದಿದ್ರೆ ಮತ್ತಷ್ಟು ದುರಂತ, ಡೈವರ್ ಬದುಕುತ್ತಿರಲಿಲ್ಲ!

By Gowthami K  |  First Published Aug 7, 2024, 1:00 PM IST

 ಗೋವಾ- ಕಾರವಾರ ಸಂಪರ್ಕಿಸುವ  ಸೇತುವೆ ಕುಸಿದ ಹಿನ್ನೆಲೆ ಕಾಳಿ ನದಿಯ ಮೇಲಿನ ಮತ್ತೊಂದು ಸೇತುವೆಯ ದೃಢತೆಯ ಬಗ್ಗೆ ಪರಿಶೀಲನೆ ಪ್ರಮಾಣ ಪತ್ರ ನೀಡಲು ಉತ್ತರಕನ್ನಡ ಜಿಲ್ಲಾಧಿಕಾರಿ ಆದೇಶ.


ಕಾರವಾರ (ಆ.7): ಮಧ್ಯರಾತ್ರಿ  ಗೋವಾ- ಕಾರವಾರ ಸಂಪರ್ಕಿಸುವ ಸೇತುವೆ ಏಕಾ ಏಕಿ ಕುಸಿದ ಹಿನ್ನೆಲೆ ಕಾಳಿ ನದಿಯ ಮೇಲಿನ ಮತ್ತೊಂದು ಸೇತುವೆಯ ದೃಢತೆಯ ಬಗ್ಗೆ ಪರಿಶೀಲನೆ ಪ್ರಮಾಣ ಪತ್ರ ನೀಡಲು ಉತ್ತರಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಿನ್ನೆ ತಡರಾತ್ರಿ ಸುಮಾರು 1ಗಂಟೆಗೆ ಸೇತುವೆ ಮೂರು ಕಡೆಗಳಲ್ಲಿ ಕುಸಿತವಾಗಿತ್ತು. ನದಿಗೆ ಬಿದ್ದಿದ್ದ ಲಾರಿ ಚಾಲಕನನ್ನು ಸುರಕ್ಷಿತವಾಗಿ ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕದಳ, ಪೊಲೀಸರಿಂದ ನಡೆದ ರಕ್ಷಣಾ ಕಾರ್ಯಾಚರಣೆ ಮಾಡಿತ್ತು. ತಮಿಳುನಾಡು ಮೂಲದ ಬಾಲ ಮುರುಗನ್ ಅವರನ್ನು ರಕ್ಷಣೆ ಮಾಡಲಾಗಿತ್ತು.

Latest Videos

undefined

ಉತ್ತರ ಕನ್ನಡ: ಮಧ್ಯರಾತ್ರಿ ಕುಸಿದು ಕಾಳಿ ನದಿ ಪಾಲಾದ 1 ಕಿಮೀ ಉದ್ದದ ಸೇತುವೆ, ಟ್ರಕ್‌ ಡ್ರೈವರ್ ಬಚಾವ್!

ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆ್ಯಕ್ಟ್ 2005ರ ಸೆಕ್ಷನ್ 33 ಹಾಗೂ 34ರಡಿ ಆದೇಶ ಮಾಡಲಾಗಿದ್ದು, ಇಂದು ಮಧ್ಯಾಹ್ನ 12ಗಂಟೆಯ ಒಳಗೆ ವರದಿ ನೀಡಲು  ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಒಂದು ವೇಳೆ ವರದಿ ನೀಡಲು‌ ನಿರ್ಲಕ್ಷ್ಯ, ವಿಳಂಬ ಮಾಡಿದ್ದಲ್ಲಿ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆ್ಯಕ್ಟ್‌ 2005 ಸೆಕ್ಷನ್ 51 ಹಾಗೂ 60ರಡಿ ಕ್ರಮ‌ ಕೈಗೊಳ್ಳುವ ಎಚ್ಚರಿಕೆ ಕೂಡ ನೀಡಲಾಗಿದೆ.

ಇನ್ನು‌ ಸೇತುವೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರೀ ದುರ್ಘಟನೆ ತಪ್ಪಿಸುವಲ್ಲಿ  ಚಿತ್ತಾಕುಲ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದರು. ನಿನ್ನೆ ರಾತ್ರಿ ದುರ್ಘಟನೆ ಬಗ್ಗೆ ಸ್ಥಳೀಯರಿಂದ ಚಿತ್ತಾಕುಲ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಚಿತ್ತಾಕುಲ ಠಾಣಾ ಪಿಎಸ್‌ಐ ಮಹಂತೇಶ್ ಹಾಗೂ ಕಾನ್ಸ್‌ಸ್ಟೇಬಲ್ ವಿನಯ್ ಕಾಣಕೋಣಕರ್. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿರದಿದ್ದರೆ ತಮಿಳುನಾಡು ಚಾಲಕ ಬಾಲಮುರುಗನ್ ನೀರಿಗೆ ಬಿದ್ದದ್ದು ಕೂಡಾ ಗೊತ್ತಾಗುತ್ತಿರಲಿಲ್ಲ.

ವಿರೋಧಿಗಳಿಗೆ ದುಃಸ್ವಪ್ನವಾಗಿರುವ ಕ್ರಿಕೆಟಿಗ ಶಮಿ ಆಸ್ತಿ ಮೌಲ್ಯ, ವೇತನ, ಫಾರ್ಮ್ ಹೌಸ್‌ ಎಷ್ಟು ಎಕರೆಯಲ್ಲಿದೆ?

ಪೊಲೀಸರು ಕೂಡಲೇ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿ ಎರಡೂ ಕಡೆಗಳಿಂದ ರಸ್ತೆ ಬಂದ್ ಮಾಡಿಸಿದರು. ಈ ಮೂಲಕ ಪಿಎಸ್‌ಐ ಮಹಂತೇಶ್ ಹಾಗೂ ಪಿಸಿ ವಿನಯ್ ಮತ್ತಷ್ಟು ವಾಹನಗಳು ನೀರಿಗೆ ಬೀಳೋದನ್ನು ತಪ್ಪಿಸಿದರು. ಅಲ್ಲದೇ, ತಮಿಳುನಾಡು ಲಾರಿ ಚಾಲಕ ಬಾಲ ಮುರುಗನ್ ರಕ್ಷಣಾ ಕಾರ್ಯಾಚರಣೆಯಲ್ಲೂ ಭಾಗಿಯಾದರು.

ಈ ಹಿನ್ನೆಲೆ ಪಿಎಸ್‌ಐ ಮಹಂತೇಶ್, ಪಿಸಿ ವಿನಯ್ ಹಾಗೂ ಸ್ಥಳೀಯ ಮೀನುಗಾರರಿಗೆ ಸಚಿವ ಮಾಂಕಾಳು ವೈದ್ಯ ಅಭಿನಂದನೆ ಸಲ್ಲಿಸಿದ್ದಾರೆ. ಆಗಸ್ಟ್ 15ರಂದು ಪಿಎಸ್‌ಐ ಮಹಂತೇಶ್, ಪಿಸಿ ವಿನಯ್ ಹಾಗೂ ರಕ್ಷಣೆಯಲ್ಲಿ ಭಾಗವಹಿಸಿದ ಸ್ಥಳೀಯ ಮೀನುಗಾರರನ್ನು ಗೌರವಿಸಲು ನಿರ್ಧಾರ ಮಾಡಲಾಗಿದೆ.

click me!