ಒಂದೊಮ್ಮೆ ಸಿದ್ದರಾಮಯ್ಯ ತಮ್ಮ (2023- 24) ಬಜೆಟ್ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಳಿಸಿದರೆ ರಾಜ್ಯದ ಒಟ್ಟು ಸಾಲ 2023-24ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಅಂದರೆ 2024ರ ಮಾರ್ಚ್ 31ಕ್ಕೆ 5.63 ಲಕ್ಷ ಕೋಟಿ ರು. ತಲುಪಲಿದೆ. ಮುಖ್ಯಮಂತ್ರಿಗಳು ಹೊಸದಾಗಿ 90 ಸಾವಿರ ಕೋಟಿಯಷ್ಟು ಸಾಲ ಪ್ರಸ್ತಾಪಿಸಲಿದ್ದು, ಒಟ್ಟು ಸಾಲದ ಪ್ರಮಾಣ ಅಂದಾಜು 6.47 ಲಕ್ಷ ಕೋಟಿ ರು.ಗೆ ತಲುಪುವ ಸಾಧ್ಯತೆಯಿದೆ
ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು(ಫೆ.14): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16 ರಂದು ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ಅಂದಾಜು 3.80 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡನೆಯಾಗಲಿದೆ. ಇದೇ ವೇಳೆ 2024-25ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯದ ಮೇಲಿನ ಋಣ ಭಾರ 6.45 ದಿಂದ 6.30 ಲಕ್ಷ ಕೋಟಿ ರು. ವರೆಗೆ ಸಾಧ್ಯತೆಯಿದೆ.
undefined
ತನ್ಮೂಲಕ ರಾಜ್ಯದ 6.11 ಜನಸಂಖ್ಯೆಗೆ ಜನಗಣತಿ) (20115 ಹೋಲಿಸಿದರೆ ಪ್ರತಿಯೊಬ್ಬರ ಮೇಲೆ 1.05 ಲಕ್ಷ ರು. ಸಾಲದ ಹೊರೆ ಉಂಟಾಗಲಿದೆ. 2024-25ನೇ ಸಾಲಿಗೆ ಅಂದಾಜಿಸಿರುವ ರಾಜ್ಯದ 7.24 ಕೋಟಿ ಜನಸಂಖ್ಯೆಗೆ ಹೋಲಿಸಿದರೂ ಪ್ರತಿಯೊಬ್ಬರ ಮೇಲೆ 90 ಸಾವಿರ ರು, ಪ್ರತಿಯೊಬ್ಬರ ಮೇಲೆ ಋಣ ಭಾರ ಉಂಟಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಕಳೆದ ಜುಲೈನಲ್ಲಿ ಮಂಡಿಸಿದ್ದ 2023-24ನೇ ಸಾಲಿನ ಬಜೆಟ್ ಭಾಷಣದಲ್ಲಿ 9.310 f 85,818 . ಪಡೆಯುವುದಾಗಿ ತಿಳಿಸಿದ್ದರು. ಇದರಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 8 ತಿಂಗಳಿಗೆ 38,000 ಕೋಟಿ ರು. ಮೀಸಲಿಟ್ಟಿದ್ದರು. ಇದೀಗ ಪಂಚ ಗ್ಯಾರಂಟಿಗಳಿಗೇ 55 ಸಾವಿರ ಕೋಟಿ ರು. ಮೀಸಲಿ ಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಪ್ರಧಾನಿ ಮೋದಿಯವರೇ ಉದ್ಯೋಗ ಮೇಳದ ನಾಟಕ ಸಾಕು, 20 ಕೋಟಿ ಉದ್ಯೋಗವೆಲ್ಲಿ? ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಒಂದೊಮ್ಮೆ ಸಿದ್ದರಾಮಯ್ಯ ತಮ್ಮ (2023- 24) ಬಜೆಟ್ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಳಿಸಿದರೆ ರಾಜ್ಯದ ಒಟ್ಟು ಸಾಲ 2023-24ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಅಂದರೆ 2024ರ ಮಾರ್ಚ್ 31ಕ್ಕೆ 5.63 ಲಕ್ಷ ಕೋಟಿ ರು. ತಲುಪಲಿದೆ. ಮುಖ್ಯಮಂತ್ರಿಗಳು ಹೊಸದಾಗಿ 90 ಸಾವಿರ ಕೋಟಿಯಷ್ಟು ಸಾಲ ಪ್ರಸ್ತಾಪಿಸಲಿದ್ದು, ಒಟ್ಟು ಸಾಲದ ಪ್ರಮಾಣ ಅಂದಾಜು 6.47 ಲಕ್ಷ ಕೋಟಿ ರು.ಗೆ ತಲುಪುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ವಿತ್ತೀಯ ಶಿಸ್ತಿನ ಅಡಿಯೇ ಸಾಲ
3.70 ರಿಂದ 3.80 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಈ ವರ್ಷ 17 ಲಕ್ಷ ಕೋಟಿ ರು. ಸಾಲ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತ್ತೀಯ ಶಿಸ್ತು ಕಾಪಾಡಿಕೊಂಡು ಜಿಎಸ್‌ಡಿಪಿ ಗಾತ್ರದ ಶೇ.25ರ ಮಿತಿಯಲ್ಲೇ ಸಾಲ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
2024-25ಕ್ಕೆ ರಾಜ್ಯದ ಸಾಲ 6.60 ಲಕ್ಷ ಕೋಟಿ
2024-25 ಆರ್ಥಿಕ ವರ್ಷಕ್ಕೆ ಒಟ್ಟು ಸಾಲ ಕ6.60 ಲಕ್ಷ ಕೋಟಿ ತುಲಪಲಿದೆ ಎಂದು 2022-25ರ ಮಧ್ಯಮಾವಧಿ ವಿತ್ತೀಯ ಯೋಜನೆ ಯಲ್ಲಿ (ಎಂಟಿಎಫ್ ಪಿ) ಸ್ಪಷ್ಟ ಅಂದಾಜು ಮಾಡಲಾ 2025-2687-38 0 ಕೋಟಿಗೆ ಹೆಚ್ಚಳವಾಗುವ ಬಗ್ಗೆಯೂ ತಿಳಿಸಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಕೇಸರಿ ಶಾಲು ಧರಿಸಿ ಜೈಶ್ರೀರಾಮ ಘೋಷಣೆ ಕೂಗಿದ ಬಿಜೆಪಿ ನಾಯಕರು; ಜೈ ಭೀಮ್ ಎಂದ ಕಾಂಗ್ರೆಸ್!
ಪ್ರತಿ ವ್ಯಕ್ತಿ ಮೇಲಿನ ಋಣ ಭಾರ
ವರ್ಷ
2015 25,802
2019 50,050
2024-25 0 1
ಬಿಜೆಪಿ ಅವಧಿಯಲ್ಲೇ ಹೆಚ್ಚು ಸಾಲ
ಸಿದ್ದರಾಮಯ್ಯ ಅವರ 2013-18ರ ಐದು ವರ್ಷದ ಅವಧಿಯಲ್ಲಿ 1.16 ಲಕ್ಷ ಕೋಟಿ ಸಾಲ ಮಾಡಿದ್ದರು. ತನ್ಮೂಲಕ 2018ಕ್ಕೆ ಒಟ್ಟು ಸಾಲ 2.42 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ 41,914 ಕೋಟಿ ರು. ಸಾಲ ಮಾಡಿತ್ತು. ಬಸವರಾಜ ಬೊಮ್ಮಾಯಿ ಅವರ 2023ರ ಫೆಬ್ರುವರಿ ಬಜೆಟ್ ಸೇರಿ 2.54 ಲಕ್ಷ ಕೋಟಿ ರು. ಸಾಲ ಘೋಷಿಸಿದ್ದು, ನಾಲ್ಕು ವರ್ಷದಲ್ಲಿ 1.77 ಲಕ್ಷ ಕೋಟಿ ರು. ಸಾಲ ಮಾಡಿದೆ.