ನಮಾಜ್ ಬಿದ್ದ ಜಾಗವೆಲ್ಲ ವಕ್ಫ್ ಆಸ್ತಿ ಅಂತಾರೆ, ಹುಚ್ಚು ಧೈರ್ಯ ಎನ್ನಬೇಕ? ಮೈಯೊಳಗಿನ ಸೊಕ್ಕು ಎನ್ನಬೇಕಾ? ಪ್ರಲ್ಹಾದ್ ಜೋಶಿ ಗರಂ

By Ravi Janekal  |  First Published Oct 29, 2024, 1:58 PM IST

ವಿಜಯಪುರ ಜಿಲ್ಲೆಯ ಹಿಂದೂ ರೈತರ ಜಮೀನು, ವಕ್ಫ್ ಮಂಡಳಿ ಹೆಸರಿನಲ್ಲಿ ದಾಖಲಾಗಿರುವುದು ಮಾತ್ರವಲ್ಲದೇ ಧಾರವಾಡ ಜಿಲ್ಲೆಯಲ್ಲೂ ಇಂತಹ ಉದಾಹರಣೆಗಳು ಪತ್ತೆಯಾಗಿದ್ದು, ಜಿಲ್ಲೆಯ ರೈತರಲ್ಲಿ ಆತಂಕ ಶುರುವಾಗಿದೆ.


ಧಾರವಾಡ (ಅ.29): ವಿಜಯಪುರ ಜಿಲ್ಲೆಯ ಹಿಂದೂ ರೈತರ ಜಮೀನು, ವಕ್ಫ್ ಮಂಡಳಿ ಹೆಸರಿನಲ್ಲಿ ದಾಖಲಾಗಿರುವುದು ಮಾತ್ರವಲ್ಲದೇ ಧಾರವಾಡ ಜಿಲ್ಲೆಯಲ್ಲೂ ಇಂತಹ ಉದಾಹರಣೆಗಳು ಪತ್ತೆಯಾಗಿದ್ದು, ಜಿಲ್ಲೆಯ ರೈತರಲ್ಲಿ ಆತಂಕ ಶುರುವಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು,  ವಕ್ಫ್ ಕಾನೂನು ಕಾಂಗ್ರೆಸ್ ಪಕ್ಷ ನೆಹರು ಕಾಲದಲ್ಲಿ ಮಾಡಿದೆ. ಯಾಕೆ ಮಾಡಿತು, ಏನು ಉದ್ದೇಶ ಅನ್ನೋದು ನನಗೆ ಗೊತ್ತಿಲ್ಲ. ಅವರು ಮಾಡಿ ಇಟ್ಟಿದ್ದರು. ಆದರೆ 2013ರಲ್ಲಿ ದೇಶದ ಯಾವ ವಿಭಾಗಕ್ಕೂ ಇರಲಾರದ ಅಧಿಕಾರ ಕೊಟ್ಟರು. ಅದೆಷ್ಟರಮಟ್ಟಿಗೆ ಎಂದರೆ ದೇಶದ ಸರ್ವೋಚ್ಚ ಸಾಂವಿಧಾನಿಕ ನ್ಯಾಯಾಲಯವಾಗಿರುವ ಸುಪ್ರೀಂ ಕೋರ್ಟ್‌ಗೂ ವಕ್ಫ್ ನೋಟಿಫಿಕೇಶನ್ ವಿಚಾರಿಸುವ ಅಧಿಕಾರ ಇಲ್ಲ ಎಂದುಬಿಟ್ಟರು. ಇವರಿಗೆ ಹುಚ್ಚು ಧೈರ್ಯ ಎನ್ನಬೇಕಾ? ಮೈಯೊಳಗಿನ ಸೊಕ್ಕು ಎನಬೇಕಾ? ಎಂದು ಕಾಂಗ್ರೆಸ್, ವಕ್ಫ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Tap to resize

Latest Videos

undefined

ಹಿಂದೂಗಳ ಜಮೀನು 'ವಕ್ಫ್ ಆಸ್ತಿ' ಅಂತಾರಲ್ಲ ಅದೇನು ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ?: ಪ್ರತಾಪ್ ಸಿಂಹ ವಾಗ್ದಾಳಿ

ಈಗ ಕರ್ನಾಟಕದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಮತ್ತು ಬೆರೆ ಚುನಾವಣೆಗಳು ನಡೆದಿರೋದ್ರಿಂದ ಹಿಂದೂಗಳ ಮತ ತಪ್ಪುವ ಆತಂಕದಿಂದ ವಾಪಸ್ ತಗೊಳ್ತಿವಿ ಎನ್ನುತ್ತಿದ್ದಾರೆ.  ಗೆದ್ದ ಬಳಿಕ ಇವರು ನಿಜಬಣ್ಣ ತೋರಿಸಲಿದ್ದಾರೆ. ಕಾಂಗ್ರೆಸ್‌ ಪಕ್ಷದ ಬಣ್ಣದ ಮಾತುಗಳು ನಂಬದೇ ಹಿಂದೂಗಳು ಮೈಮರೆಯಬಾರದು. ಈ ಹಿಂದೆ ಅಳ್ನಾವರ ಪೊಲೀಸ್ ಠಾಣೆ ಸಹ ವಕ್ಫ್ ಆಸ್ತಿ ಎಂದಿದ್ದರು. ಸಾಬನೊಬ್ಬ 'ನಮ್ಮ ಅಜ್ಜ ಮುತ್ತ್ಯಾ ನಮಾಜ್ ಮಾಡಿದ್ದ ಜಾಗ ಇದು ನಮ್ಮ ವಕ್ಫ್ ಆಸ್ತಿ' ಎನ್ನಬಹುದು. ಯಾವುದೇ ಇರಲಿ ಅದಕ್ಕೊಂದು ಮೀತಿ ಇರಬೇಕು. ಆದರೆ ವಕ್ಫ್ ಬೋರ್ಡ್ ಗೆ ಮಿತಿ ಇಲ್ಲದಂತಾಗಿದೆ. ಅದರಲ್ಲೂ ಕಳೆದ  60 ವರ್ಷದಿಂದ ಇದಕ್ಕೆ ಯಾವುದೇ ಮೀತಿ ಇಲ್ಲ. ನಮಾಜ್ ಬಿದ್ದ ಸ್ಥಳವೆಲ್ಲ ವಕ್ಫ್ ಆಸ್ತಿ ಅಂತಿದ್ದಾರೆ. ಇದು ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ರಾಜಕಾರಣದಿಂದ ಆಗಿದೆ

ವಿಜಯಪುರ ಡಿಸಿ ವಿರುದ್ಧ ಗರಂ:

ವಿಜಯಪುರ ಡಿಸಿ ರೈತರಿಗೆ ದಾಖಲೆ ತರಲು ಹೇಳಿದ್ದಾರೆ. ರೈತರು ಏಕೆ ದಾಖಲೆ ತರಬೇಕು? ಜಿಲ್ಲಾಧಿಕಾರಿಯದ್ದೇ ಕೆಲಸ ಅದು. ಯಾರನ್ನು ಕೇಳಿ ನೋಟಿಸ್ ಕೊಟ್ಟರು ಇವರು? ರೈತರ ಜಮೀನು ಏನು ಇವರಪ್ಪನ ಮನೆ ಆಸ್ತಿನಾ? ಇದು ಅಲ್ಲಾನ ಆಸ್ತಿ ಅಂತಾರೆ. ಅಲ್ಲಾ ಏನು ಇಲ್ಲಿನವನಾ? ಅಲ್ಲಾಗೆ ಆಸ್ತಿ ಮಾಡೋದು ಬಿಟ್ಟು ಬೇರೆ ಕೆಲಸ ಇಲ್ಲವಾ? ಯಾವನೋ ಒಬ್ಬ ಅಲ್ಲಾನ ಆಸ್ತಿ ಎಂದಿದ್ದಾನೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜಮೀರ್ ಕುಮ್ಮಕ್ಕು:

ರೈತರ ಜಮೀನುಗಳನ್ನ ವಕ್ಫ್ ಆಸ್ತಿ ಎಂದು ಕಬಳಿಸುವುದರ ಹಿಂದೆ ಕಾಂಗ್ರೆಸ್ ಮತ್ತು ಜಮೀರ್ ಕುಮ್ಮಕ್ಕು ಕೆಲಸ ಮಾಡ್ತಿದೆ. ಇವರೆಲ್ಲರೂ ಸೇರಿ, ಜನರನ್ನು ಭಯಭೀತ ಮಾಡುತ್ತಿದ್ದಾರೆ. ಅನ್ವರ್ ಮಲ್ಪಾಡಿ ವರದಿಯಲ್ಲಿ ಆಸ್ತಿ ಕಬಳಿಕೆ ಪ್ರಸ್ತಾಪ ಇದೆ. ಅನೇಕ ಕಾಂಗ್ರೆಸ್ ಮುಖಂಡರು ವಕ್ಪ್ ಆಸ್ತಿ ತಮ್ಮದು ಮಾಡಿಕೊಂಡಿದ್ದಾರೆ. ಇವರು ಹಿಂದೂಗಳದು ಅಷ್ಟೇ ಅಲ್ಲ, ಬಡ ಮುಸ್ಲಿಂರ ಆಸ್ತಿಯೂ ಕಬಳಿಸುತ್ತಿದ್ದಾರೆ. ಹಾಗಾದ್ರೆ ಅವರಿಗೆ ಅಲ್ಲಾ ಸಂಬಂಧ ಇಲ್ಲವಾ? ಅಲ್ಲಾ ಹೆಸರು ಹೇಳಿ ಹೀಗೆ ಮಾಡುತ್ತಿರುವುದು ಸರಿಯಲ್ಲ. ಯಾವ ರೈತರು ಅಧಿಕಾರಿ ಬಳಿ ಬರೋದಿಲ್ಲ. ನೋಟೀಸ್ ಕೊಟ್ಟ ತಹಸೀಲ್ದಾರನ್ನೇ ಅಮಾನತು ಮಾಡಬೇಕು. ಇಲ್ಲಿ ಕೆಲವರ ಪಹಣಿಯಲ್ಲಿ ವಕ್ಫ್ ಆಸ್ತಿ ಹೆಸರು ಸೇರಿಸಿದ್ದಾರೆ. ತಹಸೀಲ್ದಾರ್ ತಮ್ಮ ಆಸ್ತಿನೂ ಬರೆದುಕೊಡ್ತಾರಾ? ಈ ರೀತಿ ಮುಂದುವರಿದರೆ ಯಾರು ಬೇಕಾದರು, ಯಾವುದೇ ಆಸ್ತಿ ನಮ್ಮದು ಎನ್ನಬಹುದು. ಇದು ಎಲ್ಲಿಗೆ ಬಂದು ತಲುಪುತ್ತೆ ಅನ್ನೋ ಅಂದಾಜು ಇದೆಯಾ? ಮೊದಲಿಗೆ ಪೂರ್ಣ ವಕ್ಫ್ ಕಾನೂನನ್ನೇ ತೆಗೆಯಬೇಕು. ಇದರಲ್ಲಿ ಅನೇಕ ತಿದ್ದುಪಡಿ ಮೋದಿ ಸರ್ಕಾರ ಮಾಡುತ್ತಿದೆ. ಅದನ್ನ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಸಂಸತ್ ನಲ್ಲಿ ವಿಷಯ ಪ್ರಸ್ತಾಪಿಸಲು ಬಿಟ್ಟಿಲ್ಲ. ಕಾಂಗ್ರೆಸ್ ಯಾವ ಮಟ್ಟಕ್ಕೆ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದರೆ ದೇಶದಲ್ಲಿ ಹಿಂದೂಗಳಿಗೆ ಬೆಲೆ ಇಲ್ಲದಂತಾಗಿದೆ ಎಂದರು.

ವಿಜಯಪುರ ಬಳಿಕ ಮತ್ತೆರಡು ಜಿಲ್ಲೆಗೆ ವಕ್ಫ್ ಶಾಕ್! ರೈತರ ಭೂಮಿಯಲ್ಲಿ 'ವಕ್ಫ್ ಆಸ್ತಿ' ಹೆಸರು!

ಹಿಂದೂಗಳು ಉಚಿತ ಸ್ಕೀಂ ನೋಡಿ ಕಾಂಗ್ರೆಸ್‌ಗೆ ಓಟು ಹಾಕ್ತಾರೆ. ನಾಳೆ ಗೆದ್ದ ಮೇಲೆ ಲಕ್ಷಾಂತರ ಆಸ್ತಿ ಕಳೆದುಕೊಳ್ತಾರೆ. ಇಷ್ಟೆಲ್ಲ ಕಣ್ಣುಮುಂದೆ ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ಮುಂದೊಂದು ದಿನ ಮನೆ ಆಸ್ತಿ ಪಾಸ್ತಿ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ.  ನಿಮ್ಮ ಹೆಣ್ಣು ಮಕ್ಕಳು ಸುರಕ್ಷಿತವಲ್ಲ.  ಕಾಂಗ್ರೆಸ್ ಕುಮ್ಮಕ್ಕಿನಿಂದ ಬಡ ರೈತರ ಆಸ್ತಿ ಕಬಳಿಸಲು ನಾವು ಇರೋವರೆಗೂ ಬಿಡುವುದಿಲ್ಲ. ಕಾನೂನು ಹೋರಾಟ ಮಾಡಿಯೇ ಮಾಡುತ್ತೇವೆ ಎಂದರು.

click me!