ಕರ್ನಾಟಕದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಯಾವ ಅಭ್ಯರ್ಥಿ ಶ್ರೀಮಂತರಾಗಿದ್ದಾರೆ. ಬಡ ಅಭ್ಯರ್ಥಿ ಯಾರಿದ್ದಾರೆ ಎಂಬುದನ್ನು ನೋಡೋಣ.
Karnataka By election 2024: ಇದೇ ನವೆಂಬರ್ 13ಕ್ಕೆ ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಈ ಮೂರು ಕ್ಷೇತ್ರಗಳಲ್ಲಿ ಈಗ ಚುನಾವಣಾ ಕಾವು ಜೋರಾಗಿದೆ. ಮೂರೂ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳೇ ಆಗಿವೆ. ಹಾಗಿದ್ರೆ ಈ ಮೂರು ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಯಾರು ಎಷ್ಟು ಸಂಪತ್ತು ಹೊಂದಿದ್ದಾರೆ. ಈಗ ಸ್ಪರ್ಧಿಸುವವರಲ್ಲಿ ಯಾರು ಹೆಚ್ಚು ಶ್ರೀಮಂತರು ಅನ್ನೋದನ್ನು ನೋಡೋಣ.
113 ಕೋಟಿ ಒಟ್ಟು ಆಸ್ತಿ ಹೊಂದಿರುವ ನಿಖಿಲ್ ಕುಮಾರಸ್ವಾಮಿ
undefined
ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿಖಿಲ್ ಕುಮಾರಸ್ವಾಮಿ ಕುಟುಂಬ 113.4 ಕೋಟಿ ರು. ಮೌಲ್ಯದ ಚರಾಸ್ತಿ - ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 78.15 ಕೋಟಿ ಮೌಲ್ಯದ ಚರಾಸ್ತಿ, 29.34ಕೋಟಿ ಮೌಲ್ಯದ ಸ್ಥಿರಾಸ್ತಿ ರೇವತಿ ನಿಖಿಲ್ ಹೆಸರಲ್ಲಿ 5.49ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ 67 ಕೋಟಿ ಒಡೆಯ ಸಿಪಿ ಯೋಗೇಶ್ವರ್
7 ಕೋಟಿ 25 ಲಕ್ಷ ಮೌಲ್ಯದ ಚರಾಸ್ತಿ ಹೊಂದಿರುವ ಯೋಗೇಶ್ವರ್ 22 ಕೋಟಿ ಮೌಲ್ಯದ ಕೃಷಿ ಭೂಮಿ ಹೊಂದಿರುವ ಯೋಗೇಶ್ವರ್ ಪತ್ನಿ ಶೀಲಾ ಹೆಸರಲ್ಲಿ 2.14 ಕೋಟಿ ಮೌಲ್ಯದ ಕೃಷಿ ಭೂಮಿ ಇನ್ನು ಭರತ್ ಬೊಮ್ಮಾಯಿ ₹ 16.17 ಕೋಟಿ ಆಸ್ತಿ ಒಡೆಯ ಬೆಂಗಳೂರಿನ RT ನಗರದಲ್ಲಿ ಒಂದು ಮನೆ ಮತ್ತು ಒಂದು ಪ್ಲಾಟ್.
ಉಳಿದ ಮೂವರ ಆಸ್ತಿ ಎಷ್ಟು?
ಇದಿಷ್ಟು ನಿಖಿಲ್ ಕುಮಾರಸ್ವಾಮಿ, ಸಿಪಿ ಯೋಗೇಶ್ವರ್ ಮತ್ತು ಭರತ್ ಬೊಮ್ಮಾಯಿ ಈ ಮೂವರ ಒಟ್ಟು ಆಸ್ತಿ ವಿವರವಾಗಿದೆ.. ಇನ್ನು ಉಳಿದ ಮೂವರು ಅಭ್ಯರ್ಥಿಗಳಾದ ಕಾಂಗ್ರೆಸ್ನ ಯಾಸೀನ್ ಮತ್ತು ಕಾಂಗ್ರೆಸ್ನಿಂದ ಬಂಡಾಯವೆದ್ದಿರುವ ಅಜ್ಜಂಫೀರ್ ಖಾದ್ರಿ ಹಾಗೂ ಸಂಡೂರು ಕ್ಷೇತ್ರದ ಇಬ್ಬರು ಅಭ್ಯರ್ಥಿಗಳಾದ ಬಿಜೆಪಿಯ ಬಂಗಾರು ಹನುಮಂತು ಮತ್ತು ಕಾಂಗ್ರೆಸ್ನ ಅನ್ನಪೂರ್ಣ ಅವರ ಒಟ್ಟು ಆಸ್ತಿ ವಿವರ ವಿಡಿಯೋ ದಲ್ಲಿದೆ ನೋಡಿ.
ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಪಕ್ಷೇತರರ ಸೆಡ್ಡು
ಇದಿಷ್ಟು ಉಪ ಸಮರ ಅಖಾಡಕ್ಕೆ ಇಳಿದಿರುವ ಒಟ್ಟು ಆರು ಅಭ್ಯರ್ಥಿಗಳ ಒಟ್ಟು ಆಸ್ತಿ ವಿವರ ಪೈಕಿ 113 ಕೋಟಿ ಸಂಪತ್ತು ಹೊಂದುವ ಮೂಲಕ ನಿಖಿಲ್ ಕುಮಾರಸ್ವಾಮಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಹಾಗೆನೇ ಕೇವಲ 1 ಕೋಟಿ ಆಸ್ತಿ ಸಂಪತ್ತು ಹೊಂದುವ ಮೂಲಕ ಸಂಡೂರಿನ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಬಡ ಅಭ್ಯರ್ಥಿಯಾಗಿದ್ದಾರೆ.