ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ಹೃದಯಾಘಾತದಿಂದ ನಿಧನ!

By Ravi JanekalFirst Published Sep 9, 2024, 7:03 AM IST
Highlights

ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕದ ಸಂಪಾದಕರಾದ ಶ್ರೀ ವಸಂತ ನಾಡಿಗೇರ ಅವರು ಸೋಮವಾರ ಬೆಳಗಿನ ಜಾವ 3.13ಕ್ಕೇ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
 

Vasant nadigera death: ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕದ ಸಂಪಾದಕರಾದ ಶ್ರೀ ವಸಂತ ನಾಡಿಗೇರ ಅವರು ಸೋಮವಾರ ಬೆಳಗಿನ ಜಾವ 3.13ಕ್ಕೇ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರಾದ ವಸಂತ ನಾಡಿಗೇರಾ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಹುಟ್ಟೂರಲ್ಲೇ ಪಡೆದು ಬಳಿಕ ಧಾರವಾಡದಲ್ಲಿ ಎಂಎಸ್ಸಿ ಪದವಿ ಪಡೆದರು. ಎಂಎಸ್ಸಿ ಪದವಿಧರರಾದರೂ ಪತ್ರಿಕೋದ್ಯಮ, ಬರೆವಣಿಗೆ ಸೆಳೆತಕ್ಕೆ ಒಳಗಾಗಿ 80ರ ದಶಕದಲ್ಲೇ ಸಂಯುಕ್ತ ಕರ್ನಾಟಕದಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅಲ್ಲಿಂದೀಚೆಗೆ ಸುಮಾರು ಮೂರು ದಶಕಗಳ ಕಾಲ ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಶ್ವವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Latest Videos

ಪತ್ರಿಕೋದ್ಯಮದಲ್ಲಿ 'ವಸಂತ್ ಸರ್' ಎಂದೇ ಕರೆಸಿಕೊಳ್ಳುತ್ತಿದ್ದ ತಮ್ಮ ಸರಳ ಸಜ್ಜನಿಕೆ, ಮೃದು ಮಾತುಗಳಿಂದ ಸಹೋದ್ಯೋಗಿಗಳಿಗೆ ಪ್ರಿಯವಾಗಿದ್ದರು. ವಸಂತ ನಾಡಿಗೇರ ತಮ್ಮ. ವಿಶಿಷ್ಟ ಬರೆವಣಿಗೆಯ ಮೂಲಕ ಹೆಸರುವಾಸಿಯಾಗಿದ್ದರು. ಪತ್ರಿಕೆಗಳಲ್ಲಿ ಲೇಖನಗಳಿಗೆ ಶೀರ್ಷಿಕೆ ಕೊಡುವುದರಲ್ಲಿ ಫೇಮಸ್. ಅವರ ಕೊಡುವ ಶೀರ್ಷಿಕೆ ಭಾರೀ ಸುದ್ದಿಯಾಗುತ್ತಿತ್ತು. ಕಚೇರಿಯಲ್ಲಿ ಯಾವುದೇ ಒತ್ತಡವಿಲ್ಲದೆ ಲವಲವಿಕೆಯಿಂದಯಿಂದ ಕೆಲಸ ಮಾಡುತ್ತಿದ್ದ ಪರಿ ಅಚ್ಚರಿ ಹುಟ್ಟಿಸುತ್ತಿತ್ತು. ಸಹೋದ್ಯೋಗಿಗಳ ಮೇಲೆ ಒಮ್ಮೆಯೂ ರೇಗಿದವರಲ್ಲ. ಸಿಟ್ಟುಮಾಡಿಕೊಂಡವರಲ್ಲ.

ವಿಜಯ ಕರ್ನಾಟಕದಲ್ಲಿ ಪಂಚಿಂಗ್ ಹೆಡ್ಲೈನ್ ನೀಡುವುದರಲ್ಲಿ ನಾಡಿಗೇರ್ ಅವರು ಸಿದ್ಧಹಸ್ತರಾಗಿದ್ದರು. ಕನ್ನಡ ಪತ್ರಿಕೋದ್ಯಮದಲ್ಲಿ ಹೆಡ್ಲೈನ್‌ಗೆ ಹೊಸ ಭಾಷ್ಯ ಬರೆದವರೇ ವಸಂತ್ ನಾಡಿಗೇರ್ ಅಂದ್ರೆ ತಪ್ಪಾಗಲಾರದು. ಅದರಲ್ಲಿಯೂ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಅವರು ನೀಡಿದ ಶಿರ್ಷಿಕೆಗಳು ಜನಮನ್ನಣೆ ಗಳಿಸಿದ್ದವು. 'ಕಾರ್ಗಿಲ್: ಪಾಕ್‌ಗೆ ದಿಲ್‌ದಾರ್ ಜವಾಬ್', 'ಕಾರ್ಗಿಲ್ ಸಮರದ ಅಮರ ಕಹಾನಿ,' 'ಕಾರ್ಗಿಲ್ ಕಾರಸ್ಥಾನ,' 'ಕಾರ್ಗಿಲ್: ಪಾಕಿಗೆ ತಪರಾಕಿ,' 'ಕಾರ್ಗಿಲ್ ಸವಾಲ್ಛ ವೀರೋಚಿತ ಕಮಾಲ್,' 'ಕರಗಿದ ಕಾರ್ಗಿಲ್ ಕಾರ್ಗತ್ತಲು,' 'ಕಾರ್ಗಿಲ್ ಕಾರ್ಗತ್ತಲು'...ಹೀಗೆ ಒಂದು ಸುದ್ದಿಹೆ ಹಲವು ಶಿರ್ಷಿಕೆಗಳನ್ನು ನೀಡಿ, ಎಲ್ಲವೂ ವಂಡರ್‌ಫುಲ್ ಎನ್ನುಂತೆ ಇರುತ್ತಿತ್ತು . 

ಅವರ ಆಫೀಸ್‌ಗೆ ಹೊರಟರೆಂದರೆ ಕೈಯಲ್ಲೊಂದು ಚಕ್ಕುಲಿ, ಕುರುಕುರ್ರೆ ತುಂಬಿಕೊಂಡ ಸಣ್ಣ ಕವರ್ ಕೈಯಲ್ಲಿರುತ್ತಿತ್ತು. ಕೆಲಸ ಮಾಡುತ್ತಾ ಆಗಾಗ ಬಾಯಾಡಿಸುವುದು ಅಭ್ಯಾಸ. ಹಾಸ್ಯಪ್ರಿಯರಾಗಿದ್ದ ವಸಂತ ನಾಡಿಗೇರ ಅವರು ತಮ್ಮ ಅಕ್ಕಪಕ್ಕದ ಸಹೋದ್ಯೋಗಿಗಳನ್ನು ಆಗಾಗ ತಮ್ಮ ಮಾತುಗಳಿಂದಲೇ ನಕ್ಕುನಗಿಸುತ್ತಿದ್ದರು.

click me!