ಮಂಗಳೂರು, ಬೆಂಗಳೂರು, ಮೈಸೂರಿನಲ್ಲಿ ಭಾರಿ ವಾಯುಮಾಲಿನ್ಯ: ಗ್ರೀನ್‌ಪೀಸ್‌ ವರದಿಯಲ್ಲೇನಿದೆ?

By Kannadaprabha NewsFirst Published Sep 9, 2024, 6:52 AM IST
Highlights

ಕರ್ನಾಟಕದ 3 ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಾಯುಮಾಲಿನ್ಯವು ಹೆಚ್ಚುತ್ತಿರುವ ಕಾರಣ ಅಲ್ಲಿನ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಎಂದು ‘ಗ್ರೀನ್‌ಪೀಸ್ ಇಂಡಿಯಾ’ ಪರಿಸರ ಸಂಬಂಧಿ ಸ್ವಯಂಸೇವಾ ಸಂಸ್ಥೆಯ ವರದಿ ತಿಳಿಸಿದೆ.

ಪಿಟಿಐ ಬೆಂಗಳೂರು (ಸೆ.9): ಕರ್ನಾಟಕದ 3 ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಾಯುಮಾಲಿನ್ಯವು ಹೆಚ್ಚುತ್ತಿರುವ ಕಾರಣ ಅಲ್ಲಿನ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಎಂದು ‘ಗ್ರೀನ್‌ಪೀಸ್ ಇಂಡಿಯಾ’ ಪರಿಸರ ಸಂಬಂಧಿ ಸ್ವಯಂಸೇವಾ ಸಂಸ್ಥೆಯ ವರದಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ನಿಗದಿಪಡಿಸಿದ ಗಾಳಿಯ ಗುಣಮಟ್ಟದ ಮಾರ್ಗಸೂಚಿಯಾದ ಪಿಎಂ2.5 ಮತ್ತು ಪಿಎಂ10 ಗುಣಮಟ್ಟಗಳನ್ನು ದಕ್ಷಿಣ ಭಾರತದ 10 ಪ್ರಮುಖ ನಗರಗಳು ಮೀರಿವೆ. ಇದರಲ್ಲಿ ಕರ್ನಾಟಕದ ಈ 3 ನಗರಗಳಿವೆ ಎಂದು ‘ಸ್ಪೇರ್ ದಿ ಏರ್ 2’ ವರದಿಯಲ್ಲಿ ವಿವರಿಸಿದೆ.ಪಿಎಂ 2.5 ಎಂದರೆ 2.5 ಮೈಕ್ರೊಮೀಟರ್ ಅಥವಾ ಕಡಿಮೆ ವ್ಯಾಸದ ಸಣ್ಣ ಕಣಗಳನ್ನು ಒಳಗೊಂಡಿರುವ ಒಂದು ರೀತಿಯ ವಾಯುಮಾಲಿನ್ಯ ಹಾಗೂ ಪಿಎಂ10 ಎಂಬುದು 10 ಮೈಕ್ರೊಮೀಟರ್‌ ಗಾತ್ರದ ಕಣಗಳ ಗಾಳಿಯ ಗುಣಮಟ್ಟದ ಪದವಾಗಿದೆ.

Latest Videos

ಇಲ್ಲಿವೆ ನಾಸಾ ರೆಕಮಂಡ್ ಮಾಡಿದ ಗಾಳಿಯನ್ನು ಸ್ವಚ್ಛಗೊಳಿಸುವ 10 ಇಂಡೋರ್ ಪ್ಲಾಂಟ್‌ಗಳು

‘ವರದಿಯಲ್ಲಿ ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣಂ, ಕೊಚ್ಚಿ, ಮಂಗಳೂರು, ಅಮರಾವತಿ, ವಿಜಯವಾಡ, ವಿಶಾಖಪಟ್ಟಣಂ, ಬೆಂಗಳೂರು, ಮೈಸೂರು ಮತ್ತು ಪುದುಚೇರಿಗಳ ವಾಯುಗುಣಮಟ್ಟದ ಮಾನದಂಡಗಳನ್ನು ವಿಶ್ಲೇಷಿಸಲಾಗಿದೆ. ಆದರೆ ಈ ವರದಿಯು ಎಲ್ಲಾ ನಗರಗಳಲ್ಲಿನ ಕಣಗಳ ಮಟ್ಟವು ಪರಿಷ್ಕೃತ ಡಬ್ಲುಎಚ್‌ಒ ಮಾರ್ಗಸೂಚಿಗಳನ್ನು ಮೀರಿದೆ’ ಎಂದು ವರದಿಯ ಮುಖ್ಯ ಸಂಶೋಧಕಿ ಆಕಾಂಕ್ಷಾ ಸಿಂಗ್ ಹೇಳಿದ್ದಾರೆ.ಅಲ್ಲದೆ, ‘ಮಾಲಿನ್ಯ ನಿಯಂತ್ರಣಕ್ಕೆ ಈಗ ನಡೆದಿರುವ ಯತ್ನಗಳು ಯಾತಕ್ಕೂ ಸಾಲದು. ಇದಕ್ಕಿಂತ ಹೆಚ್ಚಿನ ಪ್ರಯತ್ನ ಬೇಕು. ಏಕೆಂದರೆ ಶುದ್ಧ ಗಾಳಿಯು ಎಲ್ಲರ ಹಕ್ಕು’ ಎಂದಿದ್ದಾರೆ.

ಯಾವ ನಗರದ ಮಾಲಿನ್ಯ ಎಷ್ಟು?: ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳೊಂದಿಗೆ ಹೋಲಿಸಿದರೆ, ವಾರ್ಷಿಕ ಸರಾಸರಿ ಪಿಎಂ 2.5 ಮಟ್ಟವು ಹೈದರಾಬಾದ್, ವಿಜಯವಾಡ, ಕೊಚ್ಚಿ, ಮಂಗಳೂರು, ಅಮರಾವತಿ ಮತ್ತು ಚೆನ್ನೈನಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ.

ಇನ್ನು ಪಿಎಂ10 ಮಟ್ಟವನ್ನು ಹೋಲಿಸಿದಾಗ ಬೆಂಗಳೂರು, ಪುದುಚೇರಿ ಮತ್ತು ಮೈಸೂರು ವಾರ್ಷಿಕ ಸರಾಸರಿ ಮಾಲಿನ್ಯವು ಡಬ್ಲುಎಚ್‌ಒ ಮಾರ್ಗಸೂಚಿಗಿಂತ 4ರಿಂದ 5 ಪಟ್ಟು ಹೆಚ್ಚಿದೆ.

ವಾಯು ಮಾಲಿನ್ಯ: ಬರೀ ಹಾರ್ಟ್, ಲಂಗ್ಸ್ ಹಾಳಾಗೋದಲ್ಲ, ಲೈಂಗಿಕ ಜೀವನವೂ ಹದಗೆಡುತ್ತೆ!

ದಕ್ಷಿಣ ನಗರ ಹೆಚ್ಚು ಶುದ್ಧ ಎಂಬುದು ಮಿಥ್ಯೆ:

ಗ್ರೀನ್‌ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್‌ ಮಾತನಾಡಿ ‘ವರದಿಯ ಸಂಶೋಧನೆಗಳು ದಕ್ಷಿಣದ ರಾಜ್ಯಗಳಲ್ಲಿ ಶುದ್ಧ ಗಾಳಿ ಇದೆ ಎಂಬುದು ಮಿಥ್ಯೆ ಎಂದು ಸೂಚಿಸಿತ್ತದೆ. ಇದು ದಕ್ಷಿಣದ ನಗರಗಳ ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆ. ಸಮಗ್ರ ಮತ್ತು ದೀರ್ಘಾವಧಿ ಮಾಲಿನ್ಯ ನಿಯಂತ್ರಣ ಕ್ರಮ ಅಳವಡಿಸಿಕೊಳ್ಳುವುದು ಅನಿವಾರ್ಯ. ವಾಹನಗಳು, ವಿದ್ಯುತ್ ಸ್ಥಾವರಗಳು, ಉದ್ಯಮ, ತ್ಯಾಜ್ಯ, ನಿರ್ಮಾಣ ಮತ್ತು ಇತರ ವಲಯಗಳಿಂದ ಆಗುವ ಮಾಲಿನ್ಯದ ಮೇಲೆ ನಿಗಾ ವಹಿಸಿ ಗಾಳಿಯ ಗುಣಮಟ್ಟ ಸುಧಾರಿಸುವುದು ಕಡ್ಡಾಯ’ ಎಂದಿದ್ದಾರೆ.

ವರದಿಯಲ್ಲಿ ಏನಿದೆ?

ಮಂಗಳೂರಿನಲ್ಲಿ ಡಬ್ಲ್ಯುಎಚ್‌ಒ ಮಾನದಂಡಕ್ಕಿಂತ 7 ಪಟ್ಟು ಹೆಚ್ಚು ವಾಯುಮಾಲಿನ್ಯವಿದೆ.
ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾನದಂಡಕ್ಕಿಂತ 5 ಪಟ್ಟು ಹೆಚ್ಚು ವಾಯುಮಾಲಿನ್ಯ.
ಪಿಎಂ2.5 ಮತ್ತು ಪಿಎಂ10 ಮಾಲಿನ್ಯದ ಮಿತಿಯನ್ನು ದ.ಭಾರತದ 10 ನಗರಗಳು ಮೀರಿವೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ ಈಗ ನಡೆದಿರುವ ಯತ್ನಗಳು ಯಾತಕ್ಕೂ ಸಾಲದು.
ಇದಕ್ಕಿಂತ ಹೆಚ್ಚಿನ ಪ್ರಯತ್ನಗಳು ನಡೆಯಬೇಕು. ಏಕೆಂದರೆ ಶುದ್ಧ ಗಾಳಿಯು ಎಲ್ಲರ ಹಕ್ಕು.

ದ.ಭಾರತದ ಅತಿ ಮಲಿನ ನಗರಗಳು

1. ಹೈದರಾಬಾದ್
2. ಚೆನ್ನೈ
3. ವಿಶಾಖಪಟ್ಟಣಂ
4. ಕೊಚ್ಚಿ
5. ಮಂಗಳೂರು
6. ಅಮರಾವತಿ
7. ವಿಜಯವಾಡ
8. ವಿಶಾಖಪಟ್ಟಣಂ
9. ಬೆಂಗಳೂರು
10. ಮೈಸೂರು

click me!