
ಬೆಂಗಳೂರು(ಸೆ.2) ಬೆಂಗಳೂರಿನ ಬಹುತೇಕ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡಿರುವ ದೃಶ್ಯ ಸಾಮಾನ್ಯವಾಗಿದೆ. ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ವಾಹನಗಳ ಪಾರ್ಕ್ ಮಾಡಲಾಗುತ್ತದೆ. ಈ ರೀತಿ ನೋ ಪಾರ್ಕಿಂಗ್‌ನಲ್ಲಿ ವಾಹನ ಪಾರ್ಕಿಂಗ್ ಮಾಡಿರುವ ದೃಶ್ಯ ನೋಡಿದ ಕರ್ನಾಟಕ ಉಪ ಲೋಕಾಯುಕ್ತ ಪಣೀಂದ್ರ ಗರಂ ಆಗಿದ್ದಾರೆ. ಟ್ರಾಫಿಕ್ ಪೊಲೀಸರು ಇದ್ದರೂ ವಾಹನ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಟ್ಟಿರುವುದು ಉಪ ಲೋಕಾಯುಕ್ತರನ್ನು ಕೆರಳಿಸಿದೆ. ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಕರೆಯಿಸಿ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಇಷ್ಟೇ ಅಲ್ಲ ಪೊಲೀಸ್ ವಿರುದ್ದವೇ ಕ್ರಮಕ್ಕೆ ಸೂಚಿಸಿದ ಘಟನೆ ನಡದಿದೆ.
ಅಲ್ಲಿ ಇರುವ ಬೋರ್ಡ್ ಏನಪ್ಪಾ ಅದು? ನೋ ಪಾರ್ಕಿಂಗ್ ಎಂದು ಬೋರ್ಡ್ ಇದೆ. ಆದರೆ ವಾಹನಗಳನ್ನು ನಿಲ್ಲಿಸಲಾಗಿದೆ. ಇಲ್ಲಿ ಟ್ರಾಫಿಕ್ ಪೊಲೀಸರು ಇದ್ದರೂ ಈ ರೀತಿ ಯಾಕಾಗುತ್ತಿದೆ ಎಂದು ಫಣೀಂದ್ರ ಪ್ರಶ್ನಿಸಿದ್ದಾರೆ. ಟ್ರಾಫಿಕ್‌ನಲ್ಲಿ ನೀವು ಏನು ಕೆಲಸ ಮಾಡುತ್ತಿದ್ದೀರಿ? ಹೀಗೆ ಪಾರ್ಕಿಂಗ್ ಮಾಡುವುದಾದರೆ, ಪಾರ್ಕಿಂಗ್ ಬೋರ್ಡ್ ಹಾಕಿ. ಈ ಜಾಗ ಸ್ಲಮ್ ರೀತಿ ಆಗಿದೆ. ನಿಮಗೆ ಮಾನ ಮರ್ಯಾದೆ ಏನೂ ಇಲ್ಲವೆ? ಈ ರಸ್ತೆಯಲ್ಲಿ ಆ್ಯಂಬುಲೆನ್ಸ್ ಸಾಗುವುದು ಹೇಗೆ? ಎಂದು ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಬಿವೈ ಪರಕಿಯನ್ನು ಪ್ರಶ್ನಿಸಿದ್ದಾರೆ.
ಕೋಲಾರ: ಲಂಚ ಸ್ವೀಕರಿಸವ ವೇಳೆ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕ್ಲರ್ಕ್..!
ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಪರಕಿ ಉತ್ತರಿಸಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳ ಕರೆಯಲು ಉಪಲೋಕಾಯುಕ್ತ ತಾಕೀತು ಮಾಡಿದ್ದಾರೆ. ಉಪಲೋಕಾಯುಕ್ತ ಪಣೀಂದ್ರ ಹಾಗೂ ಜಸ್ಟೀಸ್ ವೀರಪ್ಪ ಇಬ್ಬರು ಬೆಂಗಳೂರಿನ ನೋ ಪಾರ್ಕಿಂಗ್‌ನಲ್ಲಿನ ಪಾರ್ಕಿಂಗ್ ಅವ್ಯವಸ್ಥೆ ಕುರಿತು ಗರಂ ಆಗಿದ್ದಾರೆ. ಟ್ರಾಫಿಕ್ ಇನ್ಸ್‌ಪೆಕ್ಟರ್ ಮಂಜುನಾಥ್ ಹಾೂ ಪೇದೆ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಲು ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಖಾಸಗಿ ವಾಹನಗಳಿಂಗ ಮಾಮೂಲಿ ಫಿಕ್ಸ್ ಮಾಡಿದ್ದೀರಾ? ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿಕೊಡುವಂತೆ ಟ್ರಾಫಿಕ್ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಈ ವೇಳೆ ಸೌತ್ ಟ್ರಾಫಿಕ್ ಡಿಸಿಪಿ ಶಿವಪ್ರಕಾಶ್ ಜೊತೆ ಉಪಲೋಕಾಯುಕ್ತರು ಫೋನ್ ಮೂಲಕ ಸಮಸ್ಯೆ ವಿವರಿಸಿದ್ದಾರೆ. ಈ ಸಮಸ್ಯೆಗೆ ಮುಕ್ತಿ ಹಾಡಲು ತಾಕೀತು ಮಾಡಿದ್ದಾರೆ. ಇನ್ಸ್‌ಪೆಕ್ಟರ್ ಜೊತೆ ಲೋಕಾಯುಕ್ತರ ಭೇಟಿ ಮಾಡಲು ಉಪಲೋಕಾಯುಕ್ತರು ಡಿಸಿಪಿಗೆ ಸೂಚಿಸಿದ್ದಾರೆ.
ಡಿಕೆಶಿಗೆ 2 ತಾಸು ಪ್ರಶ್ನೆಗಳ ಸುರಿಮಳೆ: ಲೋಕಾಯುಕ್ತಗಿಂದ ಸಿಬಿಐನವರೇ ವಾಸಿ ಎಂದ ಡಿ.ಕೆ. ಶಿವಕುಮಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ