
ಬೆಂಗಳೂರು (ಫೆ.4): ಆರ್‌ಟಿಓ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಟ್ಯಾಕ್ಸ್ ಕಟ್ಟದ ಐಷಾರಾಮಿ ಕಾರುಗಳನ್ನು ಸೀಜ್ ಮಾಡಲಾಗಿದೆ. ಐಷಾರಾಮಿ ಕಾರುಗಳನ್ನು ಆರ್‌ಟಿಓ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು, ಕರ್ನಾಟಕದಲ್ಲಿ ಅನಧಿಕೃತವಾಗಿ ಇವುಗಳು ಸಂಚಾರ ಮಾಡುತ್ತಿದ್ದವು ಇದರಿಂದ ಮೂರು ಕೋಟಿಯಷ್ಟು ತೆರಿಗೆ ವಸೂಲಿ ಆಗಲಿದೆ. ಮಸರಾಟಿ, ಫೆರಾರಿ, ಫೋರ್ಚೆ, ರೇಂಜ್ ರೋವರ್, ಬಿಎಂಡಬ್ಲೂ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಐಷಾರಾಮಿ ಕಾರುಗಳನ್ನು ಆರ್‌ಟಿಓ ಸೀಜ್ ಮಾಡಿದೆ.
ತೆರಿಗೆ ವಂಚಿಸಿದ್ದ 26 ಕ್ಕೂ ಹೆಚ್ಚು ಕಾರುಗಳನ್ನು ಸೀಜ್ ಮಾಡಲಾಗಿದೆ. ಬೆಂಗಳೂರಲ್ಲಿ 8 ತಂಡಗಳನ್ನು ರಚಿಸಿ ಆರ್‌ಟಿಓ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಅನಧಿಕೃತವಾಗಿ ಸಂಚರಿಸುತ್ತಿದ್ದ ಕಾರುಗಳನ್ನ ಸೀಜ್ ಮಾಡಲಾಗಿದೆ. ದೆಹಲಿ, ಪಾಂಡಿಚೇರಿ, ಮಹಾರಾಷ್ಟ್ರ, ಉತ್ತರಪ್ರದೇಶ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗಿದ್ದ ಐಷಾರಾಮಿ ಕಾರುಗಳು ಇವಾಗಿದ್ದವು.
ಸಾರಿಗೆ ಉಪ ಆಯುಕ್ತ ಸಿ ಮಲ್ಲಿಕಾರ್ಜುನ್ ನೇತೃತ್ವದ 41 ಅಧಿಕಾರಿಗಳ ತಂಡವು ಈ ಕಾರ್ಯಾಚರಣೆಯನ್ನು ನಡೆಸಿತು. ತಂಡದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇದ್ದರು. ಸಾರಿಗೆ ಇಲಾಖೆಯ ಪ್ರಕಾರ, ಬೆಂಗಳೂರು ಸಾರಿಗೆ ಇಲಾಖೆಯ ಅಧಿಕಾರಿಗಳು ಭಾನುವಾರ ಕಾರ್ಯಾಚರಣೆಯ ಸಮಯದಲ್ಲಿ 30 ಐಷಾರಾಮಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಕಾರುಗಳಲ್ಲಿ ಫೆರಾರಿ, ಪೋರ್ಷೆ, ಬಿಎಂಡಬ್ಲ್ಯು, ಮರ್ಸಿಡಿಸ್, ಆಡಿ, ಆಸ್ಟನ್ ಮಾರ್ಟಿನ್ ಮತ್ತು ರೇಂಜ್ ರೋವರ್ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru: ಫುಡ್ ಡೆಲಿವರಿ ಬಾಯ್ ಮೇಲೆ ಮಾರಣಾಂತಿಕ ಹಲ್ಲೆ, ಸಿಸಿಟಿಯಲ್ಲಿ ಸೆರೆಯಾಯ್ತು ದೃಶ್ಯ!
ಕರ್ನಾಟಕದಲ್ಲಿ ರಸ್ತೆ ತೆರಿಗೆ ಭಾರತದಲ್ಲಿ ಅತಿ ಹೆಚ್ಚು. ವಾಹನದ ಆಸನ ಸಾಮರ್ಥ್ಯ, ವಾಹನ ಎಂಜಿನ್‌ನ ಘನ ಸಾಮರ್ಥ್ಯ, ಅದರ ಇಂಧನ ಪ್ರಕಾರ, ಅದರ ವೆಚ್ಚ ಮತ್ತು ತೂಕ, ಅದರ ಬಳಕೆಯ ಉದ್ದೇಶ ಮತ್ತು ವಾಹನದ ವಯಸ್ಸಿನ ಆಧಾರದ ಮೇಲೆ ರಾಜ್ಯ ಸರ್ಕಾರವು ವಾಹನಕ್ಕೆ ರಸ್ತೆ ತೆರಿಗೆ ಮೊತ್ತವನ್ನು ನಿರ್ಧರಿಸುತ್ತದೆ, ಇದನ್ನು ನೀವು ಬಳಸಿದ ವಾಹನವನ್ನು ನೋಂದಾಯಿಸುವಾಗ ಅಥವಾ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ವಾಹನವನ್ನು ವರ್ಗಾಯಿಸುವಾಗ ಪರಿಗಣಿಸಲಾಗುತ್ತದೆ.
ನಾಲ್ಕು ಚಕ್ರಗಳ ಕಾರಿಗೆ ಅದರ ಬೆಲೆ ಮತ್ತು ವರ್ಷದ ಆಧಾರದ ಮೇಲೆ ಶೇ. 13 ರಿಂದ ತೆರಿಗೆ ವಿಧಿಸಲಾಗುತ್ತದೆ. ಆದಾಗ್ಯೂ, ವಿದ್ಯುತ್ ಚಾಲಿತ ನಾಲ್ಕು ಚಕ್ರಗಳ ಕಾರಿಗೆ ಶೇ. 4 ರಷ್ಟು ಮಾತ್ರ ತೆರಿಗೆ ವಿಧಿಸಲಾಗುತ್ತದೆ.
ಬೆಂಗಳೂರು: ಪತಿ ಶವ ಆಸ್ಪತ್ರೆಯಲ್ಲಿದ್ದಾಗ ಬೆದರಿಸಿ ಆಸ್ತಿ ಕಬಳಿಕೆ
ಇದಲ್ಲದೆ, ಡಿಸೆಂಬರ್ 2024 ರಲ್ಲಿ, ಕರ್ನಾಟಕ ಸರ್ಕಾರವು ವಾಹನ ನೋಂದಣಿ ಮೇಲೆ ಹೆಚ್ಚುವರಿ ಸೆಸ್ ಅನ್ನು ಪರಿಚಯಿಸಿತು. ಹೊಸದಾಗಿ ವಿಧಿಸಲಾದ ಸೆಸ್ ನೋಂದಣಿ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ 500 ರೂ. ಮತ್ತು ಕಾರುಗಳಿಗೆ 1,000 ರೂ. ಶುಲ್ಕವನ್ನು ಒಳಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ