
ಬೆಂಗಳೂರು (ಸೆ.21): ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಆರೋಗ್ಯಕರ ಸ್ಪರ್ಧೆಯೊಂದನ್ನು ಆಯೋಜನೆ ಮಾಡಿದೆ. ಕರ್ನಾಟಕದಲ್ಲಿ ಈ ಹಿಂದೆ ಪ್ರವಾಸ ಮಾಡಿದ ಉತ್ತಮ ಫೋಟೋಗಳನ್ನು ಪ್ರವಾಸೋದ್ಯಮ ಇಲಾಖೆಯ ಸಾಮಾಜಿಕ ಜಾಲತಾಣ @Karnatakaworld ಟ್ಯಾಗ್ ಮಾಡಿ ಪೋಸ್ಟ್ ಮಾಡಿದರೆ ನೀವು 1 ರಾತ್ರಿ/2 ಹಗಲು ಸೇರಿದಂತೆ 2 ದಿನದ ಉಚಿತ ಪ್ರವಾಸದ ಭಾಗ್ಯವನ್ನು ಪಡೆದುಕೊಳ್ಳಬಹುದು.
ರಾಜ್ಯದ ಪ್ರವಾಸೋದ್ಯಮ ಇಲಾಖೆಯಿಂದ ಈ ಬಾರಿಯ #WorldTourismDay23 ಅಂಗವಾಗಿ ನೀವು ನಿಮ್ಮ ಕುಟುಂಬ/ಗೆಳೆಯರ ಗುಂಪಿನೊಂದಿಗೆ ಕರ್ನಾಟಕದಲ್ಲಿ ಪ್ರವಾಸ ಮಾಡಿ ಬಹುಮಾನ ಗೆಲ್ಲಬಹುದು. ಪ್ರವಾಸದ ಅತ್ಯುತ್ತಮ ಫೋಟೊಗಳನ್ನು ಈ #WTDkarnatakaCompetition ಹ್ಯಾಷ್ ಟ್ಯಾಗ್ ನೊಂದಿಗೆ ನಿಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲಿ @Karnatakaworld ಟ್ಯಾಗ್ ಮಾಡಿ ಸೆಪ್ಟೆಂಬರ್ 25 ರೊಳಗೆ ಶೇರ್ ಮಾಡಿ. ಇದರಿಂದ ಉಚಿತ ಪ್ರವಾಸದ ಗಿಫ್ಟ್‌ಗಳನ್ನು ಗೆಲ್ಲಬಹುದು.
ಇನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರವಾಸ ಪ್ರಿಯರು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://www.kstdc.co/terms-and-conditions/
ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಅಡವಿಟ್ಟು ಸೋತ ಕರ್ನಾಟಕ! ವಕೀಲರ ವಾದ ಇಲ್ಲಿದೆ ನೋಡಿ...
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ವೀಡಿಯೋ ಚಾಲೆಂಜ್! ಎಲ್ಲಾ ಕಂಟೆಂಟ್ ಕ್ರಿಯೇಟರ್ಸ್, ಪ್ರವಾಸಿ ಉತ್ಸಾಹಿಗಳಿಗೆ ಅವಕಾಶ. ಟೂರಿಸಂ & ಗ್ರೀನ್ ಇನ್ವೆಸ್ಟ್ರೆಂಟ್ಸ್ ಮತ್ತು ಇತರೆ ವಿಷಯಗಳ ಮೇಲೆ ರೀಲ್ಸ್, ವಿಡಿಯೋ ಅಥವಾ #vlogs ರಚಿಸಬಹುದು. ಸೆ. 25 ರೊಳಗೆ #WTDKarnatakareel ಹ್ಯಾಷ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿ ಉಚತ ಪ್ರವಾಸದ ಕೊಡುಗೆಯನ್ನು ಪಡೆಯಬಹುದು.
ಚೈತ್ರಾ ಕುಂದಾಪುರ ನಮ್ಮವಳಲ್ಲ ಎಂದು ಕೈಬಿಟ್ಟ ವಿಶ್ವ ಹಿಂದೂ ಪರಿಷತ್
ವಿಜೇತರನ್ನು ಆಯ್ಕೆ ಮಾಡುವ ವಿಧಾನ: ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಫೊಟೋ ಹಾಗೂ ರೀಲ್ಸ್ ವಿಡಿಯೋ ಶೇರ್ ಮಾಡಿಕೊಂಡ ನಂತರ ಹೆಚ್ಚು ನಮೂದುಗಳನ್ನು ಪಡೆದವರಿಗೆ ಆದ್ಯತೆ ನೀಡಲಾಗುವುದು. ಅಂದರೆ, ಶೇರ್ ಮಾಡಿಕೊಂಡ ಫೋಟೋ ಅಥವಾ ವಿಡಿಯೋಗೆ ಅತಿ ಹೆಚ್ಚು ಲೈಕ್ಸ್ ಮತ್ತು ಕಮೆಂಟ್ಸ್ ಪಡೆದ ಮೊದಲ 3 ಪೋಸ್ಟ್‌ಗಳನ್ನು ಆಯ್ಕೆ ಮಾಡಿಕೊಂಡು ವಿಜೇತರನ್ನಾಗಿ ಘೋಷಣೆ ಮಾಡಲಾಗುವುದು. ವಿಜೇತರಿಗೆ ಜೆಆರ್‌ಎಲ್, ಕೆಎಸ್‌ಟಿಡಿಸಿ ಹಾಗೂ ಇತರೆ ಖಾಸಗಿ ಹೋಟೆಲ್‌ಗಳಲ್ಲಿ 1ರಾತ್ರಿ/2 ಹಗಲು ಉಚಿತವಾಗಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಸ್ಪರ್ಧೆಯ ಅವಧಿ ಸೆ.20 ರಿಂದ ಸೆ.25ರವರೆಗೆ ಮಾತ್ರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ