ಕರ್ನಾಟಕದ ಪ್ರಸಿದ್ಧ ಹುಲಿ ಅಭಯಾರಣ್ಯಗಳಲ್ಲಿ ಒಂದಾದ ಭದ್ರಾ ಹುಲಿ ಅಭಯಾರಣ್ಯದಲ್ಲಿ ಹುಲಿಗಲು ಸಫಾರಿಗರ ಮುಂದೆಯೇ ಮಿಲನೋತ್ಸವ ನಡೆಸಿವೆ.
ಚಿಕ್ಕಮಗಳೂರು (ಸೆ.18): ದೇಶದಲ್ಲಿ ಅತಿಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ದ್ವಿತೀಯ ಸ್ಥಾನವನ್ನು ಹೊಂದಿರುವ ಕರ್ನಾಟಕದಲ್ಲಿ ವಿವಿಧ ಅಭಯಾರಣ್ಯಗಳಲ್ಲಿ ಹುಲಿಗಳು ಕಾಣಸಿಗುತ್ತವೆ. ಹೀಗೆ, ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ಹೋದವರ ಮುಂದೆಯೇ ಹುಲಿಗಳು ತಮ್ಮ ಪ್ರಣಯದಾಟವನ್ನು ಮುಂದುವರೆಸಿವೆ. ಈ ವಿಶೇಷ ದೃಶ್ಯವನ್ನು ಪ್ರವಾಸಿಗರು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹೌದು, ಸಫಾರಿಗೆ ಹೋದ ಪ್ರವಾಸಿಗರಿಗೆ ಕಂಡ ಎರಡು ಹುಲಿಗಳು ದರ್ಶನ ನೀಡಿವೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಎರಡು ಹುಲಿಗಳ ಚಿನ್ನಾಟ ಆಡುತ್ತಿರುವುದನ್ನು ಕಂಡು ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ. ಇನ್ನು ಹುಲಿಗಳ ಚಿನ್ನಾಟ ವೀಕ್ಷಣೆ ಮಾಡುತ್ತಿದ್ದವರಿಗೆ ಹುಲಿಗಳೇ ಶಾಕ್ ನೀಡಿವೆ. ಸ್ವಚ್ಛಂದವಾದ ಕಾಡಿನಲ್ಲಿ ಯಾರ ಗೋಜೂ ಇಲ್ಲದಂತೆ ತಮ್ಮ ಪ್ರಣಯದಾಟ ಶುರುಮಾಡಿಕೊಂಡು ದೈಹಿಕ ಸಂಪರ್ಕ ಬೆಳೆಸಿವೆ. ಪ್ರವಾಸಿಗರ ಕ್ಯಾಮೆರಾದಲ್ಲಿ ಹುಲಿಗಳ ಚಿನ್ನಾಟದ ವಿಡಿಯೋ ಸೆರೆಯಾಗಿದೆ.
undefined
ಬೆಂಗಳೂರು ಮಾರಕ ವೈರಸ್‌ಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ 7 ಚಿರತೆಗಳ ಸಾವು
ತರೀಕೆರೆ ತಾಲೂಕಿನ ಲಕ್ಕವಳ್ಳಿ ಭದ್ರ ಅಭಯಾರಣ್ಯದಲ್ಲಿ ಈ ದೃಶ್ಯಗಳು ಕಂಡುಬಂದಿವೆ. ಸಫಾರಿಗೆ ಹೋದ ಪ್ರವಾಸಿಗರು ಹುಲಿಗಳ ಘರ್ಜನೆಯ ನಡುವೆ ಅವುಗಳ ಸಂತಾನೋತ್ಪತ್ತಿಯ ಲೀಂಗಿಕ ಕ್ರಿಯೆ ನಡೆಸುವ ವಿಧಾನದ ಬಗ್ಗೆಯೂ ನೋಡಿ ಬಂದಿದ್ದಾರೆ. ಇದು ಪ್ರಾಣಿಗಳ ಜೀವನದ ಒಂದು ಭಾಗವಾಗಿದ್ದು, ಅದನ್ನು ವಿಡಿಯೋ ಮಾಡಿ ಅಚ್ಚಳಿಯದ ನೆನಪಾಗಿ ಉಳಿಸಿಕೊಂಡಿದ್ದಾರೆ. ಇನ್ನು ಸಫಾರಿ ವೇಳೆ ಅಪರೂಪಕ್ಕೊಮ್ಮೆ ರಸ್ತೆ ಬದಿಗೆ ಬರುವ ಹುಲಿಗಳು, ಚಿನ್ನಾಟ ಮಾಡಿದ್ದನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಸಫಾರಿಗರ ಜೊತೆಯಲ್ಲಿದ್ದ ತರೀಕೆರೆ ತಾಲೂಕಿನ ಉಪವಿಭಾಗಾಧಿಕಾರಿ ಕಾಂತರಾಜ್ ಮೊಬೈಲ್ ನಲ್ಲಿ ದ್ರಶ್ಯ ಸೆರೆಯಾಗಿದೆ.